Ticker

6/recent/ticker-posts

Ad Code

Responsive Advertisement

ಶ್ರೀವಾದೀಂದ್ರತೀರ್ಥರು.

 || ಶ್ರೀಮನ್ಮೂಲರಾಮೋ ವಿಜಯತೇ ||

|| ಶ್ರೀಗುರುರಾಜೋ ವಿಜಯತೇ ||

|| ಶ್ರೀವಾದೀಂದ್ರತೀರ್ಥ ಗುರುಭ್ಯೋ ನಮಃ || 


ಜ್ಯೇಷ್ಠಾ ಶುದ್ಧ ನವಮಿ ,  ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಉಪೇಂದ್ರತೀರ್ಥರ ವರಕುಮಾರರಾದವರು  ಶ್ರೀ ಬೃಹಸ್ಪತಿಯ ಅಂಶ ಸಂಭೂತಾರದ ಶ್ರೀವಾದೀಂದ್ರತೀರ್ಥರು. 

ಶ್ರೀವಾದೀಂದ್ರತೀರ್ಥರು ರಾಯರ ಪೂರ್ವಾಶ್ರಮ ಪುತ್ರರಾದ ಶ್ರೀ ಲಕ್ಷ್ಮೀನಾರಾಯಣಾಚಾರ್ಯರ ಮಕ್ಕಳಾದ ಶ್ರೀ ಪುರುಷೋತ್ತಮಾಚಾರ್ಯರ ಜ್ಯೇಷ್ಥ ಪುತ್ರರು. ಇವರ ಪೂರ್ವಾಶ್ರಮದ ಹೆಸರು ಶ್ರೀ ಶ್ರೀನಿವಾಸಾಚಾರ್ಯರು.

ದಿವಾನ್ ವೆಂಕಣ್ಣ ಶ್ರೀ ರಾಯರಿಗಾಗಿ ಮಾಡಿಸಿದ್ದ ಬೃಂದಾವನವನ್ನು ಶ್ರೀ ರಾಯರು ತಮ್ಮ ಮರಿಮಕ್ಕಳಾದ ಶ್ರೀ ವಾದೀಂದ್ರತೀರ್ಥರಿಗಾಗಿ ಕಾದಿರಿಸಲು ಅಪ್ಪಣೆ ಮಾಡಿದ್ದರು. ರಾಯರ ಬೃಂದಾವನ ಪಕ್ಕದಲ್ಲಿಯೇ ಮಂತ್ರಿಸದೃಶರಾಗಿ ಇಂದಿಗೂ ಬಂದ ಭಕ್ತಜನರು ರಾಯರ ಸೇವೆ ಜೊತೆಯಲ್ಲಿ  ಶ್ರೀವಾದೀಂದ್ರತೀರ್ಥರ  ಸೇವೆ ಮಾಡುತ್ತಾರೆ. 

ಕಾಶಿಯಲ್ಲಿ ಪ್ರಸಿದ್ಧ ಪಂಡಿತರಾದ ಶ್ರೀ ರಾಮಾಶಾಸ್ತ್ರಿ ಎಂಬುವನನ್ನು  ಶ್ರೀವಿಜಯದಾಸರು ವಾದಾದಲ್ಲಿ ಜಯಿಸಿ ತಮ್ಮ ಕುಲ ಗುರುಗಳಾದ ಶ್ರೀವಾದೀಂದ್ರತೀರ್ಥರಲ್ಲಿ  ಮುದ್ರಾಧಾರಣೆ ಮಾಡಿಸಿ ವೈಷ್ಣವದೀಕ್ಷೆಯನ್ನು ಕೊಡಿಸಿದ್ದರು.

ನವಾಬರು ಮಂಚ್ಚಾಲೇ ಗ್ರಾಮದ ವಿಚಾರವಾಗಿ ಮತ್ತೆ ತಮ್ಮ ವಶಕ್ಕೆ ಬರಕೆಂದು ತಗಾದೆ ಎತ್ತಿದಾಗ, ಶ್ರೀಗಳವರು ತಪಃಶಕ್ತಿಯಿಂದ ಮಂತ್ರಾಲಯ ಮತ್ತೆ ಸಂಸ್ಥಾನಕೆ ತಂದುಕೊಟ್ಟ ಮಹಾನುಭಾವರು ಶ್ರೀ ವಾದೀಂದ್ರತೀರ್ಥರು.

ಸಂಕ್ಷಿತ ಮಾಹಿತಿ :

ಹೆಸರು : ಶ್ರೀ ಶ್ರೀನಿವಾಸಾಚಾರ್ಯರು

ತಂದೆ : ಶ್ರೀ ಪುರುಷೋತ್ತಮಾಚಾರ್ಯರು

ತಾತ : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು

ಮುತ್ತಾತ : ಶ್ರೀ ವೇಂಕಟನಾಥಾಚಾರ್ಯರು ( ಶ್ರೀ ರಾಘವೇಂದ್ರತೀರ್ಥರು )

ಆಶ್ರಮ ಗುರುಗಳು : ಶ್ರೀ ಉಪೇಂದ್ರತೀರ್ಥರು

ಆಶ್ರಮ ನಾಮ : ಶ್ರೀ ವಾದೀಂದ್ರತೀರ್ಥರು

ಆಶ್ರಮ ಶಿಷ್ಯರು : ಶ್ರೀ ವಸುಧೇಂದ್ರತೀರ್ಥರು

ವೇದಾಂತ ಸಾಮ್ರಾಜ್ಯಾಧಿಕಾರ : ಕ್ರಿ ಶ 1728 - 1750


ಗ್ರಂಥಗಳು :


ಶ್ರೀ ವಾದೀಂದ್ರತೀರ್ಥರು ಭೂಗೋಲ - ಖಗೋಲ ಸಂಗ್ರಹಃ; ಶ್ರೀರಾಘವೇಂದ್ರಮಠಾರ್ಚಾಗತಿಕ್ರಮಃ; ತತ್ತ್ವೋದ್ಯೋತ ಟಿಪ್ಪಣಿ; ವಿಷ್ಣುಸೌಭಾಗ್ಯಶಿಖರಿಣೀ; ಗುರುಗುಣಸ್ತವನ, ಮಧ್ವಾರ್ಯ; ತತ್ತ್ವಪ್ರಕಾಶಿಕಾ ಟಿಪ್ಪಣಿ; ಮೀಮಾಂಸಾನಯದರ್ಪಣ ಮುಂತಾದ ಗ್ರಂಥಗಳನ್ನು ರಚಿದಿದ್ದಾರೆ


ಶ್ರೀ ವಾದೀಂದ್ರತೀರ್ಥರು ಶ್ರೀರಾಘವೇಂದ್ರಮಠಾರ್ಚಾಗತಿಕ್ರಮಃ ಎಂಬ ವಿಶೇಷ  ಗ್ರಂಥ ರಚನೆ ಮಾಡಿದರೆ.  ಸಂಸ್ಥಾನದಲ್ಲಿ ನಿತ್ಯಪೂಜೆಗೊಳ್ಳುವ ಬ್ರಹ್ಮ ಕರಾರ್ಚಿತ ಮೂಲರಾಮ ದೇವರು , ಜಯರಾಮದೇವರು , ದಿಗ್ವಿಜಯ್ ರಾಮದೇವರು, ಶ್ರೀ ಸುಧೀಂದ್ರತೀರ್ಥರು ಕರಾರ್ಚಿತ ಗರುಡವಾಹನ ದೇವರು ಮತ್ತು ಇನ್ನಿತರೆ ಸಂಸ್ಥಾನದ ಪ್ರತಿಮೆಗಳ ಇತಿಹಾಸವನ್ನು ಸಂಗ್ರಹ ಮಾಡಿದ್ದಾರೆ.


ಸಮಕಾಲೀನ ಯತಿಗಳು ಹಾಗೂ ದಾಸರು : 


ಶ್ರೀ ಶೇಷಚಂದ್ರಿಕಾಚಾರ್ಯರು, ಶ್ರೀ ಭಾಷ್ಯದೀಪಿಕಾಚಾರ್ಯರುಸಮ,

ಶ್ರೀ ವಿಜಯರಾಯರು, ಶ್ರೀ ಪ್ರಸನ್ವೆಂಕಟದಾಸರು, ಶ್ರೀ ಗೋಪಾಲದಾಸರು, ಶ್ರೀತಂದೆ ಗೋಪಾಲದಾಸರು , ಶ್ರೀ ತಿಮ್ಮಣ್ಣ ದಾಸರು


ಸ್ತೋತ್ರ ಸಮ್ಮತಿಸಿ ಸೂಚಿಸಿ ಬೃಂದಾನವೇ ಅಲುಗಾಡಿತು !


ಜ್ಞಾನಿಗಳಾದ ಶ್ರೀವಾದೀಂದ್ರತೀರ್ಥರು ಸಾರಸ್ವತ ಲೋಕಕ್ಕೆ ಅನೇಕ ಗ್ರಂಥಗಳು ನೀಡಿದರೆ ,ಅದರಲ್ಲಿ ಪರಮಶ್ರೇಷ್ಠ ಕೃತಿ ಪ್ರಸಿದ್ದವಾದ ಖಂಡಕಾವ್ಯ ಗುರುಗುಣಸ್ತವನ . ಗುರುಗುಣಸ್ತವನದಲ್ಲಿ ಪರಮಾತ್ಮನಿಂದ ಆರಂಭಿಸಿ ಪರಂಪರೆಯಲ್ಲಿ ಬರುವ ಶ್ರೀಮದಾಚಾರ್ಯರು , ಟೀಕಾರಾಯರು ,ವಿಬುದೇಂದ್ರತೀರ್ಥರು ,ವಿಜಯಿಂದ್ರತೀರ್ಥರು, ಸುಧೀಂದ್ರತೀರ್ಥರು, ರಾಯರು , ಉಪೇಂದ್ರತೀರ್ಥರೆ ಮೊದಲಾದ ಜ್ಞಾನಿಗಳ ಸ್ತೋತ್ರ ಮಾಡಿದರೆ.ಈ ಸ್ತೋತ್ರದಲ್ಲಿ ವಿಶೇಷವಾಗಿ ರಾಯರ ಗ್ರಂಥಗಳ ವೈಶಿಷ್ಟ್ಯ,ರಾಯರ ಮಹಿಮೆಯನ್ನು ಕೊಂಡಾಡಿದ್ದಾರೆ. 

ಶ್ರೀವಾದೀಂದ್ರತೀರ್ಥರು ರಾಯರು ಬೃಂದಾವನದ ಮುಂದೇ ಈ ಸ್ತೋತ್ರ ಸಮರ್ಪಣೆ ಮಾಡಿದಾಗ ರಾಯರು ಪರಮಸಂತೋಷರಾಗಿ ಸ್ತೋತ್ರಕೆ ಸಮ್ಮತಿ ಸೂಚಿಸಿ ರಾಯರು ತಲೆ ತೂಗಿದಹಾಗೆ ಬೃಂದಾವನವೇ ಅಲುಗಾಡಿ ಶ್ರೀವಾದೀಂದ್ರತೀರ್ಥರಿಗೆ ಪರಮಾನುಗ್ರಹ ಮಾಡಿದ್ದಾರೆ. 

ವಂದಾರು ಜನ ಸಂದೋಹ  ಮಂದಾರ ತರು ಸನ್ನಿಭಮ್ ।

ವೃಂದಾರಕ ಗುರುಪ್ರಖ್ಯಂ ವಂದೇ ವಾದೀಂದ್ರ ದೇಶಿಕಮ್ ।।

ಶ್ರೀ ಇಭರಾಮಪುರಾಧೀಶ

ವಿಷ್ಣುತೀರ್ಥಾಚಾರ್ಯ ಇಭರಾಮಪುರ.

Post a Comment

0 Comments

Ad Code

Responsive Advertisement