Ticker

6/recent/ticker-posts

Ad Code

Responsive Advertisement

ಚಾಮರಾಜಪೇಟೆ ಪೊಲೀಸ್ ಠಾಣೆ ಪತ್ರಿಕಾ ಪ್ರಕಟಣೆ

ಪಿರ್ಯಾದುದಾರರಾದ ಶ್ರೀ ಜೆ.ಪ್ರಕಾಶ್ ಚಂದ್ ಬಿನ್ ಜುಗ್‍ರಾಜ್ ಜೈನ್, 46 ವರ್ಷ, ರವರು ದಿನಾಂಕ: 25-05-2022ರಂದು ನೀಡಿದ ದೂರಿನಲ್ಲಿ ಆರೋಪಿತನಾದ ಬಿಜಾರಾಮ್, ಕೌನೂಜ್ ಗ್ರಾಮ, ಪಾಲಿ ಜಿಲ್ಲೆ, ರಾಜಸ್ಥಾನ ರಾಜ್ಯ ಈತನು ಈಗ್ಗೆ ಸುಮಾರು 6 ತಿಂಗಳಿನಿಂದ ತಮ್ಮ ತಂದೆ ಮೃತ ಜುಗ್‍ರಾಜ್ ಜೈನ್ ರವರ ಜೊತೆ ಚಿಕ್ಕಪೇಟೆಯಲ್ಲಿರುವ ದೀಪಂ ಎಲೆಕ್ಟ್ರಿಕಲ್ಸ್ ಅಂಗಡಿ ಮತ್ತು ಚಾಮರಾಜಪೇಟೆಯ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆರೋಪಿ ಬಿಜಾರಾಮ್ ಮತ್ತು ಆತನ ಸಹಚರರು ಮನೆಯಲ್ಲಿ ಯಾರೂ ಇಲ್ಲದೇ ವಯೋವೃದ್ಧರಾದ ಜುಗ್‍ರಾಜ್ ಜೈನ್ ರವರು ಒಬ್ಬರೇ ಇರುವುದನ್ನು ತಿಳಿದು 2 ದಿನಗಳಿಂದ ಸಂಚು ರೂಪಿಸಿ ದಿನಾಂಕ 24-05-2022 ರಂದು ರಾತ್ರಿ 9.30 ಗಂಟೆಗೆ ಮೃತರು ಆರೋಪಿತನೊಂದಿಗೆ ಅಂಗಡಿಯಿಂದ ಚಾಮರಾಜಪೇಟೆ ಮನೆಗೆ ಬಂದ ಸಮಯದಲ್ಲಿ ಆರೋಪಿತನಾದ ಬಿಜಾರಾಮ್ ಈತನು ಮೃತರ ಕಣ್ಣಿಗೆ ಖಾರದ ಪುಡಿ ಎರಚಿ, ಬಾಯಿಗೆ ಬಟ್ಟೆ ತುರುಕಿ, ಎರಡು ಕೈಗಳನ್ನು ಬೆನ್ನಿನ ಹಿಂದಕ್ಕೆ ಪ್ಲಾಸ್ಟಿಕ್ ದಾರದಿಂದ ಕಟ್ಟಿ, ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಅಪಾರವಾದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಆರೋಪಿ ಬಿಜಾರಾಮ್ ಮತ್ತು ಆತನ ಸಹಚರ ಓಂ ರಾಮ್ ದೇವಸಿ ರವರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮೊ.ಸಂ.60/2022 ಕಲಂ 381, 302 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 


ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ನುರಿತ 3 ಅಪರಾಧ ತಂಡಗಳನ್ನು ರಚನೆ ಮಾಡಿ 1 ತಂಡವನ್ನು ಹೈದರಾಬಾದ್‍  ಮತ್ತು 1 ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿತ್ತು.

ದಿನಾಂಕ 29-05-2022ರಂದು ಗುಜರಾತ್ ರಾಜ್ಯದ ಅಮೀರ್‍ಗಢ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಶ್ರೀ ಮಹಾವೀರ್ ಸಿಂಗ್ ಮತ್ತು ಸಿಬ್ಬಂದಿಯವರು 3-1 ಆರೋಪಿತನನ್ನು ವಶಕ್ಕೆ ಪಡೆದು ಆರೋಪಿತನಿಂದ ವಶಪಡಿಸಿಕೊಂಡ ಮಾಲಿನ ವಿವರ ಕೆಳಕಂಡಂತಿರುತ್ತದೆ.

1. ನಗದು ಹಣ 8,48,000 ರೂಪಾಯಿಗಳು - 8,48,000 ಗ್ರಾಂಗಳು

2. ವಿವಿಧ ಬಗೆಯ, ವಿವಿಧ ತೂಕದ ಚಿನ್ನಾಭರಣಗಳು - 252 ಗ್ರಾಂಗಳು

3. ವಿವಿಧ ತೂಕದ ಬೆಳ್ಳಿಯ ಬಿಸ್ಕಟ್‍ಗಳು - 3 ಕೆ.ಜಿ. 870 ಗ್ರಾಂಗಳು

4. ವಿವೋ ಮೊಬೈಲ್ ಫೋನ್ (ಕಳವು ಮಾಡಿದ ಹಣದಲ್ಲಿ ಖರೀದಿಸಿದ ಮೊಬೈಲ್ ಫೋನ್) - 40,000

ಒಟ್ಟು ಮೌಲ್ಯ 23,80,000(ಇಪ್ಪತ್ತಮೂರು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳು)


ನಂತರ ಎ-1 ಆರೋಪಿತನನ್ನು ಪೊಲೀಸ್ ಬಂಧನಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಈತನೊಂದಿಗೆ ಇನ್ನೂ ನಾಲ್ಕು ಜನ ಆರೋಪಿತರು ಭಾಗಿಯಾಗಿ ಕಳುವಾದ ಮಾಲುಗಳು ಇದ್ದ ಬಗ್ಗೆ ಮಾಹಿತಿ ಪಡೆದುಕೊಂಡು ದಿನಾಂಕ:02-06-2022 ರಂದು ಎ-3 ಆರೋಪಿಯನ್ನು ಗೋವಾದ ಆತನ ನಿವಾಸದಲ್ಲಿ ವಶಕ್ಕೆ ಪಡೆದು ಈತನಿಂದ ಕೆಳಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. 

1. ವಿವಿಧ ಮಾದರಿಯ, ವಿವಿಧ ತೂಕದ ಚಿನ್ನದ ನೆಕ್ಲೆಸ್‍ಗಳು, ಚೈನುಗಳು, ಬಳೆಗಳು, ಮೂಗುತಿಗಳು, ಓಲೆ-ಜುಮುಕಿ, ಉಂಗುರಗಳು, ಬ್ರಾಸ್‍ಲೆಟ್‍ಗಳು ಹಾಗೂ ಇತರೆ ಆಭರಣಗಳು - 8 ಕೆಜಿ 500 ಗ್ರಾಂ

2. ಆರೋಪಿತನು ಕೃತ್ಯಕ್ಕೆ ಬಳಸಿದ್ದ ಒಪ್ಪೋ ಎ53 ಮೊಬೈಲ್ ಫೋನ್

ಒಟ್ಟು ಮೌಲ್ಯ - 4,25,00,000/- (ನಾಲ್ಕು ಕೋಟಿ ಇಪ್ಪತ್ತೈದು ಲಕ್ಷ ರೂಪಾಯಿಗಳು)


ನಂತರ ಎ-1 ಮತ್ತು ಎ-3 ಆರೋಪಿತರ ಮಾಹಿತಿಯ ಮೇರೆಗೆ ದಿನಾಂಕ : 04-06-2022 ರಂದು ಆರೋಪಿತರಾದ ಎ-4 ಮತ್ತು ಎ-5 ರವರನ್ನು ಅವರ ಕೀವಲ್ ಗ್ರಾಮ, ರಾಜಸ್ಥಾನದ ಮನೆಯಲ್ಲಿ ವಶಕ್ಕೆ ಪಡೆದು ಇವರುಗಳಿಂದ ಕೆಳಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.

1. ನಗದು 45,00,000/- ರೂಪಾಯಿಗಳು - 45,00,000/-

2. ಎ-4 ಮತ್ತು ಎ-5 ಆರೋಪಿತರು ಕೃತ್ಯಕ್ಕೆ ಬಳಸಿದ್ದ ವಿವೋ, ಸ್ಯಾಮಸಂಗ್ ಮತ್ತು ಲಾವಾ ಮೊಬೈಲ್‍ಗಳು

ಒಟ್ಟು ಮೌಲ್ಯ = 45,00,000/- ರೂಪಾಯಿಗಳು (ನಲವತ್ತೈದು ಲಕ್ಷ ರೂಪಾಯಿಗಳು)

ಇದುವರೆಗೆ ಪ್ರಕರಣದ ತನಿಖೆಯ ಸಮಯದಲ್ಲಿ ಆರೋಪಿತರಿಂದ ಒಟ್ಟು ಮೌಲ್ಯ 4,93,80,000/- ಬೆಲೆ ಬಾಳುವ 8 ಕೆ.ಜಿ. 752 ಗ್ರಾಂ ತೂಕದ ಚಿನ್ನದ ಆಭರಣಗಳು, 3 ಕೆ.ಜಿ. 870 ಗ್ರಾಂ ತೂಕದ ಬೆಳ್ಳಿಯ ಗಟ್ಟಿ ಮತ್ತು ನಗದು ಹಣ 53,48,000/- ರೂ.ಗಳನ್ನು ವಶಪಡಿಸಿಕೊಂಡಿರುತ್ತಾರೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಎ-2 ಆರೋಪಿ ಓಂರಾಮ್ ದೇವಸಿ ಈತನನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಳ್ಳುವುದು ಬಾಕಿಯಿರುತ್ತದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಕು|| ಮೊಹಮ್ಮದ್ ಸುಜೀತ್ ಎಂ.ಎಸ್. ಐಪಿಎಸ್ ರವರು ಹಾಗೂ ಶ್ರೀ ಗಿರಿ ಕೆ.ಸಿ. ಎ.ಸಿ.ಪಿ. ಚಿಕ್ಕಪೇಟೆ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಇ ಎರ್ರಿಸ್ವಾಮಿ, ಪಿ.ಐ ಚಾಮರಾಜಪೇಟೆ ರವರ ಮುಂದಾಳತ್ವದಲ್ಲಿ ಶ್ರೀ ಲೋಹಿತ್ ಬಿ.ಎನ್. ಪಿ.ಐ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ, ಶ್ರೀ ಚೇತನ್‍ಕುಮಾರ್ ಎಂ.ಎಲ್. ಪಿ.ಐ, ಕಲಾಸಿಪಾಳ್ಯ ಪೊಲೀಸ್ ಠಾಣೆ, ಶ್ರೀ ಶಿವಕುಮಾರ್, ಪೊಲೀಸ್ ಇನ್ಸ್‍ಪೆಕ್ಟರ್, ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ಮತ್ತು ಪಿಎಸ್‍ಐಗಳಾದ ಶ್ರೀ ಭಗವಂತರಾಯ್ ಪಾಟೀಲ್, ಶ್ರೀ ಪ್ರಭು, ಶ್ರೀ ಎಂ.ಆರ್.ಗೋಪಾಲಕೃಷ್ಣ, ಶ್ರೀ ಮಹಾವೀರ್ ಸಿಂಗ್, ಅಮೀರ್‍ಗಢ್ ಪೊಲೀಸ್ ಠಾಣೆ, ಶ್ರೀ ನಾಗೇಂದ್ರ, ಎಎಸ್‍ಐ ಶ್ರೀ ಜನಾರ್ದನ್ ಎಎಸ್‍ಐ, ಸಿಡಿಆರ್ ವಿಭಾಗ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀಕುಮಾರ್ ಹೆಚ್‍ಸಿ-10486, ಶ್ರೀ ವೆಂಕಟೇಶ್ ವೈಟಿ ಹೆಚ್‍ಸಿ-9493, ಶ್ರೀ ಟಿ.ಸುರೇಶ್ ಹೆಚ್‍ಸಿ-7334, ಶ್ರೀ ಉಮೇಶ್ ಹೆಚ್‍ಸಿ-9172, ಶ್ರೀ ಸುರೇಂದ್ರ ಕೆ. ಹೆಚ್‍ಸಿ-11094, ಸಿಡಿಆರ್ ವಿಭಾಗ, ಶ್ರೀ ಮಂಜುನಾಥ್ ಪಿಸಿ-15949 ವಿಜಯ್‍ಕುಮಾರ್ ಪಿಸಿ-19444, ಪ್ರಸನ್ನಕುಮಾರ್ ಪಿಸಿ-19732, ಕಾರ್ತಿಕ್ ಬದ್ರಿ ಪಿಸಿ-17935, ಬಸನಗೌಡ ಪಿಸಿ-13883 ಶ್ರೀ ಅಮವಾಸ್ಯೇಗೌಡ, ಪಿಸಿ-15780 ಶ್ರೀ ಲದೀಂ ಸಾಬ್ ನದಾಫ್ ಪಿಸಿ-18024 ಇವರನ್ನು ಒಳಗೊಂಡ ತಂಡವು ಹಾಗೂ ಗುಜರಾತ್ ರಾಜ್ಯದ ಅಮೀರ್‍ಗಢ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಶ್ರೀ ಮಹಾವೀರ್ ಸಿಂಗ್, ಹೆಚ್.ಸಿ.ರವರುಗಳಾದ ಶ್ರೀ ಹಿತೀಶ್ ಕುಮಾರ್, ಪಿ.ಸಿ. ರವರುಗಳಾದ ಶ್ರೀ ಮಹೇಶ್, ಶ್ರೀ ಧರ್ಮಪಾಲ್ ರವರುಗಳು ಆರೋಪಿಗಳನ್ನು ಬಂಧಿಸಿ ಮಾಲನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು ಪಶ್ಚಿಮ ರವರು ಶ್ಲಾಘಿಸಿರುತ್ತಾರೆ.

************
















Post a Comment

0 Comments

Ad Code

Responsive Advertisement