ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ನೆರವೀಕ್ಷಣೆಗೆ ಬರಲಿಲ್ಲ
ಕೋವಿಡ್ ಸಂಕಷ್ಟ ಕಾಲದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿಲ್ಲ.
ಗುತ್ತಿಗೆದಾರರ 40% ಕಮಿಷನ್ ಆರೋಪಕ್ಕೆ ಉತ್ತರಿಸಲಿಲ್ಲ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂತ್ವಾನ ಹೇಳಿಲಿಲ್ಲ.
ಕರ್ನಾಟಕ ರಾಜ್ಯದಲ್ಲಿ ಎರಡು ಮೂರು ಬಾರಿ ಅತಿವೃಷ್ಠಿಯಿಂದ ರಾಜ್ಯದ ಲಕ್ಷಾಂತರ ಜನ ಜಾನುವಾರು ಸಂಕಷ್ಟಕ್ಕೆ ಸಿಲುಕಿ ತಮ್ಮ ಆಸ್ತಿ ಪಾಸ್ತಿಯನ್ನು ಕಳೆದುಕೊಂಡು ಕಣ್ಣೀರಿಟ್ಟರು. ಆಗ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಲಿಲ್ಲ. ವೈಮಾನಿಕ ಸಮೀಕ್ಷೆಯನ್ನು ನಡೆಸಲಿಲ್ಲ. ರಾಜ್ಯಕ್ಕೆ ಪರಿಹಾರವನ್ನು ನೀಡಲಿಲ್ಲ.
ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಸಹಸ್ರ ಸಹಸ್ರ ಜನರು ಸಾವಿಗೀಡಾದರು. ಸಾವಿರಾರು ಕುಟುಂಬಗಳು ಬೀದಿಪಾಲಾದವು. ಇಂತಹ ಸಂಕಷ್ಟದ ಸಮಯದಲ್ಲೂ ಮೋದಿಯವರು ರಾಜ್ಯಕ್ಕೆ ಬರಲಿಲ್ಲ. ಸಾಂತ್ವಾನ ಹೇಳಲಿಲ್ಲ. ಸುಪ್ರೀಂ ಕೋರ್ಟ್ ಕೋವಿಡ್ ಸಾವಿಗೆ ಸಿಲುಕಿದ ಕುಟುಂಬಕ್ಕೆ ನಾಲ್ಕು ಲಕ್ಷ ಪರಿಹಾರ ನೀಡಲು ಆದೇಶಿಸಿದರು ಅದನ್ನು ಪಾಲಿಸಲಿಲ್ಲ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ. ಕೆಂಪಣ್ಣನವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ರಾಜ್ಯದಲ್ಲಿ ಶೇ 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ವಿನಂತಿಸಿದರು. ಇದೇ ವಿಚಾರದಲ್ಲಿ ಬಿಜೆಪಿಯ ಕಾರ್ಯಕರ್ತರು ಆದ ಗುತ್ತಿಗೆದಾರ ಸಂತೋಷ ಪಾಟೀಲ್ ಅಂದು ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ 40% ಕಮಿಷನ್‍ಗಾಗಿ ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಪ್ರದಾನ ಮಂತ್ರಿಗಳ ಕಛೇರಿಗೆ ಪತ್ರ ಬರೆದು ಬಹಿರಂಗವಾಗಿ ಅಳಲು ತೋಡಿ ಕೊಂಡಿದ್ದರು. ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಜೀವತೆತ್ತರು. ಆದರೂ ತಮ್ಮ ಹೃದಯ ಮಿಡಿಯಲಿಲ್ಲ. ಸಂತ್ವಾನವನ್ನೂ ಹೇಳಲಿಲ್ಲ. ಗುತ್ತಿಗೆದಾರರ ಆರೋಪಕ್ಕೆ ತನಿಗೆ ಮಾಡಲಿಲ್ಲ.
ಇದು ತಮ್ಮ ಆಡಳಿತದ ಶೈಲಿ. ಅಧಿಕಾರಕ್ಕೆ ಬರುವ ಮುನ್ನ ನಾನು ತಿನ್ನುವುದಿಲ್ಲ. ಬೇರೆಯವರಿಗೆ ತಿನ್ನಲ್ಲು ಬಿಡುವುದಿಲ್ಲ ಎಂದು ಪೊಳ್ಳು ಘೋಷಣೆ ಮಾಡಿ ಮತ ಪಡೆದು ಜನರಿಗೆ ಮಂಕು ಬೂದಿ ಎರಚಿದ್ದೀರಿ. ಯುವಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೊಗ ನೀಡುವುದಾಗಿ ಹೇಳಿದ ನೀವು ವಿದ್ಯಾವಂತ
ಯುವಕರಿಗೆ ಪಕೋಡ ಮಾರಲು ಮಾರ್ಗದರ್ಶನ ಮಾಡಿದ್ದೀರಿ. ಬೆಲೆ ಏರಿಕೆ ತಡೆಗಟ್ಟುತ್ತೇನೆಂದು ಹೇಳಿದ ನೀವು ಬೆಲೆಗಳು ಗಗನಮುಖಿಯಾಗುವಂತೆ ಮಾಡಿದ್ದೀರಿ. ರಾಜ್ಯ ಮತ್ತು ಕೇಂದ್ರದಲ್ಲಿ ತಾವೇ ಆಡಳಿತದಲ್ಲಿದ್ದೀರಿ. ಆದರೆ ಎರಡು ಕಡೆ ಜನರಿಗೆ ನ್ಯಾಯ ನೀಡದೇ ಅನ್ಯಾಯದ ಆಡಳಿತ ನಡೆಸುತ್ತಿದ್ದೀರಿ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನ ಅವರಿಂದ ನೋಡಿ ಕಲೆಯಬೇಕು. ಇದಕ್ಕೆ ತಾಜಾ ನಿರ್ದೇಶನವೆಂದರೆ ಮೈಸೂರಿನಲ್ಲಿ ಏರ್ಪಡಾಗಿರುವ ಯೋಗ ದಿನಾಚರಣೆ ಕಾರ್ಯಕ್ರಮ. ಅಧಿಕಾರದ ಕುರ್ಚಿಗಾಗಿ ಯೋಗದ ನೆಪಮಾಡಿಕೊಂಡು ಕರ್ನಾಟಕಕ್ಕೆ ಕಾಲಿಡುತ್ತಿದ್ದಾರೆ ಪ್ರಧಾನಿ ಮೋದಿ.
ಮೋದಿ ಅಧಿಕಾರಕ್ಕೆ ಬಂದ ಕಳೆದ 8 ವರ್ಷಗಳಲ್ಲಿ ಒಂದೂ ಉತ್ತಮ ಯೋಜನೆಗಳನ್ನು ರೂಪಿಸಲಿಲ್ಲ. ನೋಟ್ ಬ್ಯಾನ್ ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಹಳಿ ತಪ್ಪಿಸಿದ್ದು ಇವರ ಸಾಧನೆ.
ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇವರ 8 ವರ್ಷದ ಆಳ್ವಿಕೆಯಲ್ಲಿ ಒಂದೇ ಒಂದು ಪತ್ರಿಕಾ ಘೋಷ್ಠಿ ಮಾಡಿಲ್ಲ. ಇದಕ್ಕೆ ಕಾರಣ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಧ್ಯಮ ಕ್ಷೇತ್ರದ ಬಗ್ಗೆ ಅವರಿಗೆ ಭಯವಿದೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ಮೋದಿಯವರಲ್ಲಿ ಉಳಿದಿಲ್ಲ.
ರೈತರ ಹೊಟ್ಟೆಯ ಮೇಲೆ ಹೊಡೆದು ರೈತರ ಭೂಮಿ ಮಾರಾಟ ಮಾಡುವ ಯೋಜನೆ ಹಾಗೂ ರೈತರು ಬೆಳೆದ ಬೆಳೆಗಳನ್ನು ಅದಾನಿ ಅಂಬಾನಿಗೆ ದೊರೆಯುವಂತೆ ಯೋಜನೆಯನ್ನು ನರೇಂದ್ರ ಮೋದಿಯವರು ರೂಪಿಸಿದ್ದರು. ಆದರೆ ದೇಶದ ರೈತರು ಎಚ್ಚೆತ್ತುಕೊಂಡು ವರ್ಷಗಟ್ಟಲೆ ಹಗಲಿರುಳು ಹೋರಾಟ ಮಾಡಿ ಪ್ರಧಾನಿಗೆ ಬುದ್ಧಿ ಕಲಿಸಿದರು. ಇದೇ ರೀತಿ ದೇಶದಲ್ಲಿ ಮುಂದೊಂದು ದಿನ ಮೋದಿ ಆಡಳಿತದ ವಿರುದ್ಧ ಜನಾಂದೋಲನ ನಡೆಯುವುದು ಗ್ಯಾರೆಂಟಿ.
ಈ ಹಿಂದೆ ಸೈನ್ಯದ ಹೆಸರಿನಲ್ಲಿ ಪ್ರಧಾನಿ ರಾಜಕೀಯ ಮಾಡಿದರು. ಪ್ರಧಾನ ಮಂತ್ರಿಗಳು ಬಾಲ್ಯದಲ್ಲಿ ಚಹಾ ಮಾರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈಗ ಮಾತ್ರ ನಿರಂತರವಾಗಿ ದೇಶ ಮಾರಾಟ ಮಾಡುತ್ತಿದ್ದಾರೆ ಎಂದು ಈ ಹಿಂದೆ ಭಾರತೀಯ ರಿಜರ್ವ ಬ್ಯಾಂಕ್‍ನ ಮಾಜಿ ಗೌರ್ನರ್ ಸಿ. ರಂಗರಾಜನ್ ಹೇಳಿದ ಮಾತು ಸತ್ಯವಾಗುತ್ತಾ ಹೋಗುತ್ತಿದೆ.
ಹಿಜಾಬ್, ಹಲಾಲ್ ಕಟ್ ಎಂದು ಹತ್ತಾರು ವಿವಾದಗಳನ್ನು ರಾಜ್ಯ ಬಿಜೆಪಿ ಸರ್ಕಾರ ಸೃಷ್ಟಿಸಿದರೂ ಸಹ ಈ ಬಗ್ಗೆ ರಾಜ್ಯಕ್ಕೆ ಮಾರ್ಗದರ್ಶನವಾಗಲಿ, ಶಾಂತಿಪಾಲನೆ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚಲಿಲ್ಲ. ಇಂತಹ ಪ್ರಧಾನಿ ಈಗ ಯೋಗದ ಹೆಸರಿನಲ್ಲಿ ರಾಜಕಾರಣ ಮಾಡಲು ರಾಜ್ಯಕ್ಕೆ ಬರುತ್ತಿದ್ದಾರೆ.
ಅವರದ್ದೇ ಸರ್ಕಾರ ಉತ್ತರ ಪ್ರದೇಶದಲ್ಲಿದೆ. ಸಂವಿಧಾನ ಬದ್ಧವಾಗಿ ಪ್ರತಿಭಟಿಸುವ ಹಕ್ಕನ್ನು ದೇಶದ ನಾಗರೀಕರಿಗೆ ಸಂವಿಧಾನ ನೀಡಿದೆ. ಪ್ರತಿಭಟನೆಯಲ್ಲಿ ಗಲಭೆಗಳು ನಡೆದಿದ್ದು ಸತ್ಯ ಅಂತಹ ಗಲಭೆ ಕೋರರ ವಿರುದ್ಧ ಈ ನೆಲದ ಕಾನೂನಿನಂತೆ ಪೊಲೀಸ್ ವ್ಯವಸ್ಥೆಯಲ್ಲಿ ನ್ಯಾಯಾಲಯದ ವ್ಯವಸ್ಥೆಯಲ್ಲಿ ತನಿಖೆ ಮಾಡುವ ಬದಲಾಗಿ ಗಲಭೆ ಹೆಸರಿನಲ್ಲಿ ಕೆಲವರನ್ನು ಆರೋಪಿಗಳನ್ನಾಗಿ ಮಾಡಿ ಅವರ ಮನೆಗಳನ್ನು ನೆಲ
ಸಮ ಮಾಡಿದರು. ಇವರ ನಡೆಯಿಂದ ಇವರಿಗೆ ಪೊಲೀಸ್, ನ್ಯಾಯಾಲಯ, ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಇಲ್ಲವೆಂಬುದು ಸ್ಪಷ್ಟವಾಗುತ್ತದೆ.
ಇದೀಗ ಭಾರತೀಯ ಸೇನೆಯಲ್ಲಿ ಅಗ್ನಿಪತ್ ಯೋಜನೆ ಜಾರಿಗೆ ತರಲು ಹವಣಿಸಿ ಯುವ ಜನರ ಬದುಕಿನ ಜೊತೆ ಚಲ್ಲಾಟವಾಡುತ್ತಿದ್ದಾರೆ. ಅಗ್ನಿಪತ್ ಯೋಜನೆ ಕೇವಲ ತರಬೇತಿ ಎಂದು ಹೇಳುತ್ತಿದ್ದಾರೆ. ಈ ರೀತಿ ಹಲವಾರು ಜನವಿರೋಧಿ ಯೋಜನೆಗಳನ್ನು ರೂಪಿಸಿದ ಮೋದಿ ಸರ್ಕಾರ ಜನಪೀಡಕ ಸರ್ಕಾರವಾಗಿದೆ.
ಕೇಂದ್ರದಲ್ಲಿ ತಮ್ಮ ಹೆಸರು ಬಿಟ್ಟು ಬೇರೊಂದು ಹೆಸರು ಕೇಳದಂತೆ ವ್ಯವಸ್ಥಿತ ಪ್ಲಾನ್ ಮಾಡಿ ಮೋದಿ ಆಡಳಿತ ನಡೆಸುತ್ತಿದ್ದಾರೆ. ಅದೇ ರೀತಿ ಗೃಹ ಸಚಿವ ಅಮಿತ್‍ಷಾ ಹೆಸರು ಬಿಟ್ಟರೆ, ಬೇರೆ ಸಚಿವರ ಹೆಸರು ಜನರಿಗೆ ಗೊತ್ತಿಲ್ಲ ಇತ್ತೀಚೆಗೆ ದೇಶ ಆರ್ಥಿಕವಾಗಿ ದಿವಾಳಿ ಆದ ಮೇಲೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಸ್ವಲ್ಪ ಜನ ಕೇಳಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿದ ಹುಡುಗ ಮುಂದೆ ರೈಲ್ವೆ ನಿಲ್ದಾಣವನ್ನೇ ಮಾರಾಟ ಮಾಡುತ್ತಾನೆ ಎಂದು ಭಾರತೀಯರು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್‍ರವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾನಿಲಯ ಸ್ಥಾಪಿಸಿತ್ತು. ಇದರಲ್ಲಿ ಮೋದಿ ಕೊಡುಗೆ ಏನು?
ಸಿದ್ದರಾಮಯ್ಯನ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ರವರ 125ನೇ ಜನ್ಮ ದಿನಾಚರಣೆಯನ್ನು ರಾಜ್ಯಾದ್ಯಂತ ಅದ್ದೂರಿಯಾಗಿ ಆಚರಿಸುವ ಮೂಲಕ ಇದರ ಸವಿನೆನಪಿಗಾಗಿ ನೂರಾರು ಕೋಟಿ ಖರ್ಚು ಮಾಡಿ ವಿಶ್ವದಲ್ಲಿಯೇ ಅತ್ಯುನ್ನತ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದರು. ಜೊತೆಗೆ ಅಂಬೇಡ್ಕರ್‍ರವರ ಬರಹಗಳು, ಭಾಷಣೆಗಳು, ಸೇರಿದಂತೆ ಅವರ ಜೀವನ ಚರಿತ್ರೆಯ 22 ಸಂಪುಟಗಳ ಪುಸ್ತಕಗಳನ್ನು ರಚಿಸಿ ಕೇವಲ ರೂ. 50/-ಗೆ ಜನರಿಗೆ ದೊರೆಯುವಂತೆ ಮಾಡಿ ಇದಕ್ಕಾಗಿ ಹತ್ತಾರು ಕೋಟಿ ರೂಪಾಯಿಗಳನ್ನು ಸಿದ್ದರಾಮಯ್ಯ ಸರ್ಕಾರ ಖರ್ಚು ಮಾಡಿ ಅಂಬೇಡ್ಕರ್‍ರವರಿಗೆ ಗೌರವ ಸಲ್ಲಿಸಿತ್ತು. ಸಿದ್ದರಾಮಯ್ಯ ಸ್ಥಾಪಿಸಿದ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಉದ್ಘಾಟನೆಗೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ಕಾಂಗ್ರೆಸ್ ನವರು ಮಾಡಿದ ಸಾಧನೆಗಳಿಗೆ ನಾಮಕರಣಕ್ಕೆ ಬರುವ ಬದಲಾಗಿ ತಾವು ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೀರೆಂದು ಒಮ್ಮೆ ಮೋದಿ ಯೋಚಿಸಲಿ ಎಂದು ಅವರು ಟೀಕಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಎಸ್.ಎಂ. ಜಯಪ್ರಕಾಶ್, ಎಂ.ಕೆ. ಲಿಯಾಖತ್‍ಅಲಿ, ಕೆ.ಎಂ. ಮಂಜುನಾಥ್, ಮಮ್ಮದ್ ಜಿಕ್ರಿಯಾ, ಆರ್.ಬಿ.ಝಡ್ ಭಾಷಾ, ಡಿ. ಶಿವಕುಮಾರ್, ಬಿ.ಹೆಚ್. ಉದಯ್‍ಕುಮಾರ್, ಫಾರುಕ್ ಹಾಗೂ ಮುಬಾರಕ್ ಸೇರಿದಂತೆ ಇತರರು ಹಾಜರಿದ್ದರು.
ವಂದನೆಗಳೊಂದಿಗೆ, ತಮ್ಮ ವಿಶ್ವಾಸಿಗಳು,
(ಡಿ. ಬಸವರಾಜ್)
ಕೆಪಿಸಿಸಿ ವಕ್ತಾರರು
.jpg)
0 Comments