Ticker

6/recent/ticker-posts

Ad Code

Responsive Advertisement

ಬಿ.ಬಿ.ಎಂ.ಪಿ.ವಾರ್ಡ್ ಗೆ ಪುನೀತ್ ಹೆಸರು ನಾಮಕರಣ ಮಾಡಬೇಕು ಎಂದು ಸಿ. ಎಂ.ಗೆ ಮನವಿ-ಶ್ರೀಮತಿ ಭಾಗ್ಯವತಿ ಅಮರೇಶ್*

 *ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ಸ್ಮರಣೆಯಲ್ಲಿ ಬಿ.ಬಿ.ಎಂ.ಪಿ.ವಾರ್ಡ್ ಗೆ ನಾಮಕರಣ ಮಾಡಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮನವಿ-ಶ್ರೀಮತಿ ಭಾಗ್ಯವತಿ ಅಮರೇಶ್*


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೂತನವಾಗಿ ಮರು ವಿಂಗಡಣೆ ಆಗಿರುವ *ಬಿ.ಬಿ..ಎಂ.ಪಿ ಯ ವಾರ್ಡ್ ಒಂದಕ್ಕೆ ಕರ್ನಾಟಕ ರತ್ನ ಡಾ||ಪುನೀತ್ ರಾಜ್‌ಕುಮಾರ್ ರವರ ಹೆಸರನ್ನು ಇಡಬೇಕು*. ಪುನೀತ್ ರಾಜ್‌ಕುಮಾರ್ ರವರು ನಟನೆ ಮತ್ತು ಸಾಮಾಜಿಕ ಕಾರ್ಯದಿಂದ ಅತ್ಯಂತ ಜನಪ್ರಿಯರಾಗಿದ್ದರು. ಇವರ ಅಕಾಲಿಕ ಮೃತ್ಯುವಿನಿಂದ

ಕರ್ನಾಟಕದ ಮತ್ತು ದೇಶದ ಇತರೆ ರಾಜ್ಯದ ಜನತೆ ನೋವನ್ನು ಅನುಭವಿಸಿದರು.

*ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜ್‌ಕುಮಾರ್ ರವರು ಸಮಾಜಕ್ಕೆ ಮತ್ತು ಚಿತ್ರರಂಗಕ್ಕೆ ಮಾದರಿಯಾಗಿದ್ದರು* .

ಬಿ.ಬಿ.ಎಂ.ಪಿ ಯ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಮರು ವಿಂಗಡಣಿ ಆದ ನಂತರ ಕೆಲವು ವಾರ್ಡ್‌ಗಳಿಗೆ ನಾಮಕರಣ ಮಾಡುವಾಗ ಯಾವುದಾದರು ಒಂದು ವಾರ್ಡ್‌ಗೆ ಅಥವಾ ಪುನೀತ್ ರಾಜ್‌ಕುಮಾರ್ ರವರು ವಾಸವಿದ್ದ ಮನೆಯ ವಾರ್ಡ್‌ಗೆ ಅವರ ಹೆಸರನ್ನು ಇಟ್ಟು ಶಾಶ್ವತವಾಗಿ ಅವರ ಹೆಸರು ಉಳಿಯುವಂತೆ ಮಾಡಬೇಕಿದೆ.

ಒಂದು ಬೀದಿಗೆ, ಒಂದು ವೃತ್ತಕ್ಕೆ ಅಥವಾ ರಸ್ತೆಗೆ ಅವರ ಹೆಸರುನ್ನು ಇಡುವುದಕ್ಕಿಂತ ಸಂಪೂರ್ಣ ಒಂದು ವಾರ್ಡ್‌ಗೆ ಅವರ ಹೆಸರನ್ನು ಇಟ್ಟರೆ ಒಳ್ಳೆಯದೆಂದು ಪುನೀತ್ ರಾಜ್‌ಕುಮಾರ್ ರವರ ಅಭಿಮಾನಿಯಾಗಿ *ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ರವರಿಗೆ* *ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ರವರು ಮನವಿ ಮಾಡಿದರು*

Post a Comment

0 Comments

Ad Code

Responsive Advertisement