Ticker

6/recent/ticker-posts

Ad Code

Responsive Advertisement

ಸಂಪಂಗಿರಾಮನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ 07/2022 ಕಲಂ 174 ಸಿ.ಆರ್.ಪಿ.ಸಿ

ಅಪರಿಚಿತ ವ್ಯಕ್ತಿ


    ದಿನಾಂಕ:30/05/2022 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಠಾಣಾ ಸರಹದ್ದಿನ ಲಾಲ್‍ಬಾಗ್ ಮುಖ್ಯ ರಸ್ತೆಯ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಫುಟ್ ಪಾತ್ ಮೇಲೆ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅಪರಿಚಿತ ಗಂಡಸ್ಸಿನ ಶವವು ಮಲಗಿದ್ದ ಸ್ಥಿತಿಯಲ್ಲಿ ಇದ್ದು. ಈತನ ಹೆಸರು ವಿಳಾಸ ಹಾಗೂ ವಾರಸುದಾರರ ವಿವವರಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ  ಈತನು ಯಾವುದೇ ಸರಿಯಾದ ಊಟ ಉಪಚಾರ ಇಲ್ಲದೇ ವಾಸಿಸಲು ಮನೆಯಿಲ್ಲದೇ ಫುಟ್ ಪಾತ್ ಮೇಲೆ ಮಲಗಿ ಕೃಷನಾಗಿ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿರುವಂತೆ ಕಂಡುಬಂದಿರುತ್ತದೆ. ಈ ಬಗ್ಗೆ ಠಾಣಾ ಯು.ಡಿ.ಆರ್ ನಂ 07/2022 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ಆಸಾಮಿಯ ಚಹರೆಗಳು.

1. ಹೆಸರು ಅಪರಿಚಿತ

2. ವಯಸ್ಸು ಸುಮಾರು 65-70 ವರ್ಷ,

3. ಮುಖ ಕೋಲು ಮುಖ

4. ಮೈಬಣ್ಣ ಗೋದಿ ಮೈಬಣ್ಣ

5. ಎತ್ತರ 5.5 ಅಡಿ

6. ಮೈಕಟ್ಟು ತೆಳ್ಳನೆಯ ಮೈಕಟ್ಟು 

7. ತಲೆ ಕೂದಲು ಕಪ್ಪು ಮತ್ತು ಬಿಳಿ ಮಿಶ್ರಿತ ಹಾಗೂ ಗಡ್ಡ ಬಿಟ್ಟಿರುತ್ತಾನೆ.

8. ಧರಿಸಿರುವ ಬಟ್ಟೆ ಕಪ್ಪು ಬಣ್ಣದ ಸಫಾರಿ ಶರ್ಟ ಮೇಲೆ ನೀಲಿ ಬಣ್ಣದ ಜರ್ಕಿನ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಫ್ಯಾಂಟ್ ಧರಿಸಿರುತ್ತಾನೆ.

9. ಗುರುತುಗಳು ಬಲ ಗೈ ಮೇಲೆ “ಅಣ್ಣಮ್ಮ ದೇವಿ” ಎಂಬ ಹಚ್ಚೆ ಇರುತ್ತದೆ.


   ಈ ಮೇಲ್ಕಂಡ ಅಪರಿಚಿತ ಮೃತ ವ್ಯಕ್ತಿಯ ಬಗ್ಗೆ ಅಥವಾ ಮೃತನ ವಾರಸುದಾರರ ಬಗ್ಗೆ ಮಾಹತಿ ಸಿಕ್ಕಲ್ಲಿ ಕೂಡಲೇ ಸಂಪಂಗಿರಾಮನಗರ ಪೊಲೀಸ್ ಠಾಣೆಗೆ ಅಥವಾ ಈ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಬೇಕೆಂದು ಕೋರಿದೆ. 

1) ಪೊಲೀಸ್ ಇನ್ಸ್‍ಪೆಕ್ಟರ್:9480801117

2) ಪೊಲೀಸ್ ಸಬ್ ಇನ್ಸ್ ಪೆಕ್ಟರ್:9036657777

3) ಸಂಪಂಗಿರಾಮನಗರ ಪೊಲೀಸ್ ಠಾಣೆ:080-22942582

ಶವವನ್ನು ವಿಕ್ಟೋರಿಯಾ ಆಸ್ಪತ್ರಯಲ್ಲಿ ದಿನಾಂಕ:06/06/2022 ರವರೆಗೆ ಸಂರಕ್ಷಿಸಿ ಇಡಲಾಗಿರುತ್ತದೆ. ಮೃತನ ಚಹರೆ ವಿವರ ಹೋಲಿಕೆ ಆಗುವ ಬಗ್ಗೆ ಕಾಣೆಯಾದ ಪ್ರಕರಣ ಅಥವಾ ಇತರೆ ದೂರು ದಾಖಲಾಗಿದ್ದಲ್ಲಿ ಆಸ್ಪತ್ರೆ ಬಳಿ ಬಂದು ಶವ ನೋಡಿ ಪರಿಶೀಲಿಸಬಹುದಾಗಿದೆ.


Post a Comment

0 Comments

Ad Code

Responsive Advertisement