“ಕರ್ನಾಟಕ ರಾಜ್ಯದಿಂದ ಆರಂಭವಾದ ‘ಹಿಜಾಬ್ ವಿರೋಧಿ ಆಂದೋಲನ’ವು ಅನಂತರ ರಾಷ್ಟ್ರಮಟ್ಟದ ವಿಷಯವಾಯಿತು. ಅದರಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ‘ಹಿಜಾಬ್’ ಕೋರಿ ಅರ್ಜಿ ಸಲ್ಲಿಸಿದ್ದರು. ನನ್ನ ಅನೇಕ ನ್ಯಾಯವಾದಿ ಸ್ನೇಹಿತರ ಕೋರಿಕೆಯ ಮೇರೆಗೆ, ನಾನು ಈ ಪ್ರಕರಣವನ್ನು ಹೋರಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದ ತೀರ್ಪು ಬಹಳ ಅಭ್ಯಾಸಪೂರ್ಣವಾಗಿತ್ತು. ಹೀಗಿದ್ದರೂ ಮುಸ್ಲಿಮರು ಇದನ್ನು ಒಪ್ಪದೆ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಖಟ್ಲೆಯನ್ನು ನಡೆಸಲು ಬಹಳಷ್ಟು ಹಣ ಬೇಕಾಗುತ್ತದೆ.
ಮುಸ್ಲಿಂ ಅರ್ಜಿದಾರರು ಈ ನಿಧಿಯನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಇದರಿಂದ ಇದರ ಹಿಂದಿನ ಷಡ್ಯಂತ್ರ ಗಮನಕ್ಕೆ ಬರುತ್ತದೆ. ಆದರೆ, ಇದಾದ ನಂತರ ಕರ್ನಾಟಕದ ಹಿಂದೂಗಳು ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿ ಅವರಿಗೆ ಪ್ರತ್ಯುತ್ತರ ನೀಡಿದರು. ಹಿಂದೂ ಉತ್ಸವಗಳಂದು ದೇವಸ್ಥಾನಗಳ ಪರಿಸರದಲ್ಲಿ ಅನ್ಯ ಧರ್ಮದವರ ಅಂಗಡಿಗಳನ್ನು ತೆರೆಯದಂತೆ ನಿರ್ಧಾರ ಕೈಗೊಂಡರು. ನ್ಯಾಯಾಲಯದ ತೀರ್ಪನ್ನು ಒಪ್ಪದವರಿಗೆ ಕರ್ನಾಟಕ ರಾಜ್ಯದ ಹಿಂದೂಗಳು ತಕ್ಕ ಪಾಠ ಕಲಿಸಿದ್ದಾರೆ” ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ಅಮೃತೇಶ ಎನ್.ಪಿ. ಇವರು ಹೇಳಿದರು. ಅವರು ಗೋವಾದ ಫೋಂಡಾದ ‘ಶ್ರೀ ರಾಮನಾಥ ದೇವಸ್ಥಾನ’ದಲ್ಲಿ ನಡೆಯುತ್ತಿರುವ ‘ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು.
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳನ್ನು ‘ಎರಡನೇ ದರ್ಜೆಯ ಪ್ರಜೆ’ಯೆಂಬಂತೆ ನೋಡಲಾಗುತ್ತಿದೆ ! - ಎಂ. ನಾಗೇಶ್ವರ ರಾವ, ಮಾಜಿ ಪ್ರಭಾರಿ ಮಹಾನಿರ್ದೇಶಕರು, ಸಿಬಿಐ
ಸಂವಿಧಾನಕ್ಕನುಸಾರ ಸಿಗುವ ೫ ಹಕ್ಕುಗಳ ಪೈಕಿ ಹಿಂದೂಗಳಿಗೆ ಕೇವಲ ರಾಜಕೀಯ ಹಕ್ಕುಗಳು ಮಾತ್ರ ಇವೆ; ಆದರೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಈ ಕ್ಷೇತ್ರಗಳಲ್ಲಿ ಹಿಂದೂಗಳಿಗೆ ಸಮಾನ ಸಾಂವಿಧಾನಿಕ ಹಕ್ಕುಗಳ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ (ಸೆಕೆಂಡ್ ಕ್ಲಾಸ್ ಸಿಟಿಜನ್) ಮಾಡಲಾಗಿದೆ. ಆದ್ದರಿಂದ ಹಿಂದೂಗಳಿಗೆ ಸಮಾನ ಹಕ್ಕು ನೀಡಲು ಪ್ರಯತ್ನಿಸಬೇಕು. ಸಂವಿಧಾನದ ಕಲಂ ೧೨, ೨೫ ಮತ್ತು ೨೬ ಗಳನ್ನು ತೆಗೆದು ಕೇಂದ್ರ ಸರಕಾರದ ಮೂಲಕ ‘ಸೆಂಟ್ರಲ್ ಟೆಂಪಲ್ ಆಕ್ಟ’ (ಕೇಂದ್ರ ದೇವಸ್ಥಾನ ನಿರ್ವಹಣಾ ಕಾಯ್ದೆ) ಜಾರಿಗೆ ತರಬೇಕು. ಆ ಮೂಲಕ, ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ತೆಗೆದು ಹಾಕಿ ಅವುಗಳ ಆಡಳಿತವನ್ನು ಹಿಂದೂಗಳಿಗೆ ಬರುತ್ತದೆ’ ಎಂದು ಕೇಂದ್ರೀಯ ಅಪರಾಧ ವಿಭಾಗದ (ಸಿಬಿಐನ) ಮಾಜಿ ಪ್ರಭಾರಿ ಮಹಾಸಂಚಾಲಕ ಶ್ರೀ. ಎಂ. ನಾಗೇಶ್ವರ ರಾವ ಹೇಳಿದರು.
ಈ ಅಧಿವೇಶನದ ನೇರಪ್ರಸಾರವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ HinduJagruti.org ನಲ್ಲಿ ಮತ್ತು ‘HinduJagruti’‘ಯೂಟ್ಯೂಬ್’ ಚಾನೆಲ್‌ನಲ್ಲಿ ಮಾಡಲಾಗುತ್ತಿದೆ.


0 Comments