Ticker

6/recent/ticker-posts

Ad Code

Responsive Advertisement

ಬೆಂಗಳೂರು ನಗರ ಸಿಸಿಬಿ, ಆರ್ಥಿಕ ಅಪರಾಧ ದಳದ ಅಧಿಕಾರಿಗಳ ಕಾರ್ಯಾಚರಣೆ

 ಅಂತಾರಾಷ್ಟ್ರೀಯ ಫೋನ್ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ, ವಂಚನೆ ಮಾಡುತ್ತಿದ್ದ ಜಾಲ ಪತ್ತೆ, ಕೇರಳ ರಾಜ್ಯದ ಒಬ್ಬ ಆರೋಪಿಯ ಬಂಧನ 

ದಿನಾಂಕ: 21.06.2022 ರಂದು ಬೆಂಗಳೂರು ನಗರ ಸಿಸಿಬಿ, ಆರ್ಥಿಕ ಅಪರಾಧ ದಳದ ಅಧಿಕಾರಿಗಳು, ಸದರನ್ ಕಮಾಂಡ್, ಭಾರತೀಯ ಸೇನೆ ರವರ ಗೌಪ್ಯ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬೆಂಗಳೂರು ನಗರದ ಮಲ್ಲಸಂದ್ರದಲ್ಲಿ ಕೇರಳ ರಾಜ್ಯದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನು ನೀಡಿದ ಮಾಹಿತಿಯ ಮೇರೆಗೆ ಹೆಸರುಘಟ್ಟ ಮುಖ್ಯ ರಸ್ತೆಯ ಮಲ್ಲಸಂದ್ರ, ಭುವನೇಶ್ವರಿ ನಗರ, ಚಿಕ್ಕಸಂದ್ರ, ಎಂ.ಎಂ. ಲೇಔಟ್ ನಲ್ಲಿ ಅನಧಿಕೃತವಾಗಿ ಟೆಲಿಫೋನ್ ಎಕ್ಸ್‍ಚೇಂಜ್ ಇಟ್ಟುಕೊಂಡು, ಹೊರರಾಜ್ಯದ ಏರ್‍ಟೆಲ್ ಮತ್ತು ಬಿಎಸ್‍ಎನ್‍ಎಲ್ ಸಿಮ್‍ಗಳನ್ನು ಸಿಮ್ ಬಾಕ್ಸ್‍ಗೆ ಅಳವಡಿಸಿಕೊಂಡು, ಗಿಔIP(ಗಿoiಛಿe ಔveಡಿ Iಟಿಣeಡಿಟಿeಣ Pಡಿoಣoಛಿoಟ) ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದನು. ಇದರಿಂದ ದೂರು ಸಂಪರ್ಕ ಇಲಾಖೆಗೆ ಮತ್ತು ಸರ್ವೀಸ್ ಪ್ರೊವೈಡರ್ಸ್‍ಗಳಿಗೆ ವಂಚನೆ ಮಾಡುತ್ತಿದ್ದನು. ಆರೋಪಿಯಿಂದ ಒಟ್ಟು 53 ಸಿಮ್ ಬಾಕ್ಸ್‍ಗಳನ್ನು ಹಾಗೂ 1940 ವಿವಿಧ ಸಿಮ್‍ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ. ಸದರಿ ಕಾರ್ಯಾಚರಣೆಯಿಂದ ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದ್ದ ಜಾಲವನ್ನು ಭೇದಿಸಲಾಗಿದೆ.

ಈ ಬಗ್ಗೆ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಸಿಸಿಬಿ, ಆರ್ಥಿಕ ಅಪರಾಧ ದಳದಲ್ಲಿ ಕೈಗೊಂಡಿರುತ್ತದೆ.

Post a Comment

0 Comments

Ad Code

Responsive Advertisement