Ticker

6/recent/ticker-posts

Ad Code

Responsive Advertisement

ಪರಿಸರ ಜಾಗೃತಿ ಅಭಿಯಾನ ಮತ್ತು ಹಸಿ ಕಸ, ಒಣ ಕಸ ಸಂಗ್ರಹಿಸಲು 30 ಸಾವಿರ ಡಸ್ಟ್ ಬಿನ್ ವಿತರಣಾ ಕಾರ್ಯಕ್ರಮ

ರಾಜಾಜಿನಗರ ವಾರ್ಡ್-99ರಲ್ಲಿ  ಪರಿಸರ ಜಾಗೃತಿ ಅಭಿಯಾನ ಮತ್ತು ಮನೆಗಳಿಗೆ ಹಸಿ ಕಸ ಒಣ ಕಸ ಸಂಗ್ರಹಿಸಲು 30000ಸಾವಿರ ಡಸ್ಟ್ ಬಿನ್ ವಿತರಣೆ ಕಾರ್ಯಕ್ರಮ.ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಜಿ.ಕೃಷ್ಣಮೂರ್ತಿರವರು ರಾಜಾಜಿನಗರ ವಾರ್ಡ್ನನ ಮಂಜುನಾಥನಗರದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಡಸ್ಟ್ ಬಿನ್ ಗಳನ್ನು ವಿತರಿಸಿದರು






ಸ್ವಯಂ ಸೇವಕರು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸ್ಥಳೀಯರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಜಿ.ಕೃಷ್ಣಮೂರ್ತಿರವರು ಮಾತನಾಡಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು,ಮಾಜಿ ಮುಖ್ಯಮಂತ್ರಿಗಳು,ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು, ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿರವರು,ಮಾಜಿ ಮಹಾಪೌರರಾದ ಶ್ರೀಮತಿ ಜಿ.ಪದ್ಮಾವತಿರವರ ಮಾರ್ಗದರ್ಶನದಲ್ಲಿ ಪರಿಸರ ಜಾಗೃತಿ ಅಭಿಯಾನ ಮತ್ತು ಹಸಿ ಕಸ, ಒಣ ಕಸ ಸಂಗ್ರಹಿಸಿ ಮನೆ ಮುಂದೆ ಬರುವ ಕಸ ಸಂಗ್ರಹಿಸುವವರಿಗೆ ನೀಡಲು ವಾರ್ಡ್ ಪ್ರತಿ ಮನೆ ಎರಡು ಡಸ್ಟ್ ಬಿನ್ ಪ್ಲಾಸ್ಟಿಕ್ ಡಬ್ಬಿಗಳನ್ನು ವಿತರಿಸಲಾಗುತ್ತಿದೆ .

ಸಾರ್ವಜನಿಕರು ಹಸಿ ಕಸ ಗೊಬ್ಬರ ತಯಾರಿಕೆ ಮತ್ತು ಒಣ ಕಸ ಮರು ಬಳಕೆ ಮಾಡಬಹುದು ಹಾಗೂ ಪರಿಸರ ಸಹ ಸ್ವಚ್ಚತೆಯಿಂದ ಕೊಡಿರುತ್ತದೆ.

ಪರಿಸರ ಹಾಳದರೆ,ರೋಗರುಜಿನಗಳು ಹೆಚ್ಚಾಗುತ್ತದೆ ಅದರಿಂದ ಸಾರ್ವಜನಿಕರು ಹಸಿ ಕಸ,ಒಣ ಕಸ ವಿಂಗಡನೆ ಪರಿಸರ ಉಳಿಸಿ ಎಂದು ಮನೆಗಳಿಗೆ ಭೇಟಿ ನೀಡಿ ಮನವಿ ಮಾಡಲಾಗುತ್ತಿದೆ.

ರಾಜಾಜಿನಗರದ ಇಂದಿರಾನಗರ ,ಮಂಜುನಾಥನಗರದಲ್ಲಿ ಈಗಾಗಲೇ ವಿತರಿಸುವ ಕಾರ್ಯ ನಡೆಯುತ್ತಿದೆ.

30ಸಾವಿರ ಡಸ್ಟ್ ಬಿನ್ ಗಳನ್ನು ಸಾರ್ವಜನಿಕರ ಮನೆ ಬಳಿದೆ ತೆರಳಿ ವಿತರಿಸಲಾಗುತ್ತಿದೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement