Ticker

6/recent/ticker-posts

Ad Code

Responsive Advertisement

ಭಜನ, ಪ್ರವಚನ ಹಾಗೂ ಕು. ಅಭಿಜ್ಞಾ ಪಿ ಕಶ್ಯಪ್ ಇವರಿಂದ "ಹರಿನಾಮ ಸಂಕೀರ್ತನೆ"

 "ಭಜನ, ಪ್ರವಚನ, ಸಂಕೀರ್ತನ"

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ಗೀತಾ ಮಂದಿರ, ಶ್ರೀರಾಮಪುರ ಇವುಗಳ ಸಂಯುಕ್ತಾಶ್ರಯದಲ್ಲಿ 

ಜೂನ್ 28 ರಿಂದ ಜುಲೈ 1ರ ವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

 ಜೂನ್ 28, ಮಂಗಳವಾರ ಸಂಜೆ 6 ಗಂಟೆಗೆ, ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಜೂನ್ 29, ಬುಧವಾರ ಸಂಜೆ 6 ಗಂಟೆಗೆ, ಪ್ರಶಾಂತನಗರದ ಶ್ರೀ ಗುರುರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಜೂನ್ 30, ಗುರುವಾರ ಸಂಜೆ 6 ಗಂಟೆಗೆ, ಲಗ್ಗೆರೆಯ ಸಂಕೀರ್ತನ ಭಜನಾ ಮಂಡಳಿಯ ಸದಸ್ಯರಿಂದ ಭಜನೆ. ಜೂನ್ 28, 29 ಮತ್ತು 30 ರಂದು ಪ್ರತಿದಿನ ಸಂಜೆ 7 ಗಂಟೆಗೆ, ಡಾ|| ಸುದರ್ಶನ ಹೆಬ್ಬಣಿ ಇವರಿಂದ "ನಿತ್ಯ ಜೀವನದಲ್ಲಿ ಭಕ್ತಿ" ಈ ವಿಷಯದ ಬಗ್ಗೆ ಧಾರ್ಮಿಕ ಪ್ರವಚನ.

ಜುಲೈ 1, ಶುಕ್ರವಾರ : ಸಂಜೆ 6-30 ರಿಂದ 8 ಗಂಟೆಯವರೆಗೆ, ಕು|| ಅಭಿಜ್ಞಾ ಪಿ ಕಶ್ಯಪ್ ಇವರಿಂದ "ಹರಿನಾಮ ಸಂಕೀರ್ತನೆ". ವಾದ್ಯ ಸಹಕಾರ : ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ), ವಿದುಷಿ ಶ್ರೀಮತಿ ಭಾರ್ಗವಿ ನಾರಾಯಣ್ (ಪಿಟೀಲು). ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ಗೀತಾ ಮಂದಿರ, # 33, 4ನೇ ಮುಖ್ಯರಸ್ತೆ, ಶ್ರೀರಾಮಪುರ, ಬೆಂಗಳೂರು-560021, 

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement