Ticker

6/recent/ticker-posts

Ad Code

Responsive Advertisement

ನೀರಿನ ಅದಾಲತ್

ಬೆಂಗಳೂರು, ಜೂನ್ 15 (ಕರ್ನಾಟಕ ವಾರ್ತೆ) :   ಬೆಂಗಳೂರು ಜಲಮಂಡಳಿಯು ಆಗ್ನೇಯ -6, ಪೂರ್ವ-2-2, ಪೂರ್ವ ವಿಲೇಜ್- 2, ದಕ್ಷಿಣ ವಿಲೇಜ್ – 1, ಪಶ್ಚಿಮ – 3, ನೈರುತ್ಯ – 3, ಆಗ್ನೇಯ-3, ವಾಯುವ್ಯ-6, ಕೇಂದ್ರ-3, ವಾಯುವ್ಯ -2, ಉತ್ತರ-3, ಮತ್ತು ಈಶಾನ್ಯ -2 ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಸುವಲ್ಲಿನ ವಿಳಂಬ, ಗೃಹಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೀರಿನ ಅದಾಲತ್‍ನ್ನು ಜೂನ್ 16 ರಂದು ಬೆಳಿಗ್ಗೆ 9.30 ಗಂಟೆಯಿಂದ  11 ಗಂಟೆಯವರೆಗೆ ನಡೆಸಲಾಗುವುದು.

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಐವಾಣಿ 1916 ಗೆ  ಕರೆಮಾಡಿ ದೂರು ದಾಖಲಿಸಬಹುದು ಹಾಗೂ ವಾಟ್ಸ್‍ಆಪ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement