Ticker

6/recent/ticker-posts

Ad Code

Responsive Advertisement

ಮಿನಿ ಲಾರಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವುದಾಗಿ ಶ್ರೀರಾಮುಲು ಭರವಸೆ

ಬಳ್ಳಾರಿ ಜೂ.28 : ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಪಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಪೋಲಿಸ್ ಪ್ರಕರಣಗಳೂ ಸಹ ಹೆಚ್ಚಾಗಿವೆ, ಇದನ್ನರಿತ ಮಿನಿ ಲಾರಿಗಳು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಬೇಕಾಗಿ ಎಂದು ಈ ಹಿಂದೆ ಮನವಿ ಮಾಡಲಾಗಿತ್ತು. ಇದನ್ನೆಲ್ಲರಿತ ಉಸ್ತುವಾರಿ ಸಚಿವ ಬಿ.ಶ್ರೀರಾಮಲು ಮಿನಿ ಲಾರಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಈಗಾಗಲೆ ಡಿಸೇಲ್ ದರ ದುಬಾರಿಯಾಗಿದ್ದು, ವಾಹನಗಳಿಗೆ ಬಾಡಿಗೆ ಸಿಗದೇ ಒದ್ದಾಡುತ್ತಿದ್ದಾರೆ,  ಲಾರಿಮಾಲಿಕರು ಕಷ್ಟದಲ್ಲಿದ್ದಾರೆ, ಕಳೆದ ಎರಡು ದಿನಗಳಿಂದ ಹಿಂದೆ ಮಿನಿಲಾರಿ ಮಾಲೀಕರ ಅಸೋಷಿಯನ್‍ನ ಜಿಲ್ಲಾಧ್ಯಕ್ಷ ಹೆಚ್.ನಾರಾಯಣಸ್ವಾಮಿ ಲಾರಿಮಾಲೀಕರ ಸಮಾವೇಶವನ್ನು ಹಮ್ಮಿಕೊಂಡಿದ್ದರು.


ತಕ್ಷಣವೇ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಅವರಿಗೆ ಅದ್ಯಕ್ಷ ಹೆಚ್.ನಾರಾಯಣಸ್ವಾಮಿ ಸಮಾವೇಶದ ವಿವರಗಳನ್ನು ತಿಳಿಸಿದರು. ಅದಕ್ಕೆ ಸ್ಪಂದಿಸಿ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬೇಟಿ ಮಾಡಿ ಸಮಸ್ಯೆಗಳನ್ನು ಮನದಟ್ಟುಮಾಡಿದರು. ಅದನ್ನು ಮನಗಂಡ ಶ್ರೀರಾಮುಲು ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ವ್ಯವಸ್ಥೆ ಮಾಡಿಕೊಡಲು ತಿಳಿಸಿದರು. ಇದರ ಸ್ಥಳವನ್ನು ಜಿಲ್ಲಾಧಿಕಾರಿಗಳು ಮತ್ತು ಪೋಲಿಸ ವರಿಷ್ಠಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಂತರ ಒಪ್ಪಗೆ  ನೀಡಿದರು. ಜೊತೆಗೆ ರಾತ್ರಿ 10 ಗಂಟೆ ಸಮಯದಲ್ಲೂ ಕೂಡ ಜನರ ಸಮಸ್ಯೆಗಳನ್ನು ಪರಿಹರಿಸಲು ಬಂದಿದ್ದ ಉಸ್ತುವಾರಿ ಸಚಿವರಿಗೆ ಲಾರಿಮಾಲೀಕರು ಸಾತ್ ನೀಡಿದರು. ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಅವರು ಯಾವುದೇ ರಾಜಕೀಯ ಸ್ಥಾನಮಾನ ಇಲ್ಲದಿದ್ದರು ಕೂಡ ಜನರ ಪರವಾಗಿ ನಿಂತು ಸಚಿವರ ದೃಷ್ಟಿಗೆ ತಂದು ಕೆಲಸ ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದು ನಾರಾಯಣಸ್ವಾಮಿ ನುಡಿದರು.


 

Post a Comment

0 Comments

Ad Code

Responsive Advertisement