ಬಳ್ಳಾರಿ,ಜೂ.28 :ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ನಿವಾಸಿಯಾದ 18 ವರ್ಷದ ನಂದಿನಿ.ಬಿ ಎನ್ನುವ ಯುವತಿ ಜೂ.24ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಸಿರಿಗೇರೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಣೆಯಾದ ಯುವತಿಯ ಚಹರೆ ಗುರುತು: ಸಾಧಾರಣ ಮೈಕಟ್ಟು, ಗೋಧಿ,ಮೈಬಣ್ಣ, ಕೋಲು ಮುಖ, 5ಅಡಿ ಎತ್ತರ, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಡಿಸೈನ್ ಇರುವ ಚೂಡಿದಾರ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೊಲೀಸ್ ಠಾಣೆಯ ದೂ.08396-244426, ಮೊ.9480803056, ಕಂಟ್ರೋಲ್ ರೂಂ.08392258100 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.