Ticker

6/recent/ticker-posts

Ad Code

Responsive Advertisement

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಬೊಮ್ಮನಹಾಳು ಗ್ರಾಮದಲ್ಲಿ "ರಾಮಾಯಣ" ಬಯಲಾಟ ಕಾರ್ಯಕ್ರಮದಲ್ಲಿ ಶಾಸಕ ನಾಗೇಂದ್ರ ಭಾಗಿ

ಬಳ್ಳಾರಿ ಜೂನ್ 21. ಬಯಲಾಟ ಕಾರ್ಯಕ್ರಮಕ್ಕೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ  ಬಿ.ನಾಗೇಂದ್ರ ರವರು ಭಾಗವಹಿಸಿ ನಾಟಕ ವೀಕ್ಷಿಸಿದರು. ಅಲ್ಲದೆ ಈ ಬಯಲಾಟ ಪ್ರದರ್ಶನಕ್ಕೆ 30,000 ರೂಪಾಯಿಗಳನ್ನು ದೇಣಿಗೆ ನೀಡುವ ಮೂಲಕ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದರು. ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು ಇಂದಿನ ಕಾಲದಲ್ಲಿ ಆಧುನಿಕತೆ ಹೆಚ್ಚಾದಂತೆ ನಾಟಕಗಳು ಕಡಿಮೆಯಾಗಿವೆ ಆದ್ರೆ ನಮ್ಮ ಹಳ್ಳಿಗರು ಇಂದಿಗೂ ಸಾಂಪ್ರದಾಯಿಕ ನಾಟಕಗಳನ್ನು ನೋಡುವ ಮೂಲಕ ನಮ್ಮ ಸಂಪ್ರದಾಯಗಳನ್ನು ಉಳಿಸುತ್ತಿದ್ದಾರೆ ಮತ್ತು ಬಯಲಾಟಗಳನ್ನು ಆಡುವುದರಿಂದ ಎಷ್ಟೋ ಕಲಾವಿದ ಕುಟುಂಬಗಳು ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ ಇಂತಹ ಕಲಾವಿದರಿಗೆ ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕಾಗಿದೆ ಎಂದರು.


ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಅಣ್ಣ ನಾಗರಾಜ್, ಗೋವರ್ಧನ್ ರೆಡ್ಡಿ ಮಹಾನಗರಪಾಲಿಕೆ ಸದಸ್ಯರುಗಳಾದ ಕೆ.ಹೊನ್ನಪ್ಪ, ಬಿ.ಆರ್.ಎಲ್ ಸೀನಾ, ನೂರ್ ಮಹಮ್ಮದ್, ಸೋಮು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಸಿಂಧುವಾಳ ಗಾದಿಲಿಂಗನಗೌಡ, ಡಿ.ಓ.ಜಿ ಗೌಡ, ಹೇಮರೆಡ್ಡಿ, ಪಂಪನಗೌಡ, ಕರಿಬಜ್ಜಿ, ಹಸ್ತ ಪಂಪನಗೌಡ, ತಿಪ್ಪಾರೆಡ್ಡಿ, ಶ್ರೀಧರ್, ಗುರುನಾಥ್ ರೆಡ್ಡಿ, ಗೋನಾಳ್ ನಾಗಭೂಷಣ ಗೌಡ, ಯರ್ರಗುಡಿ ಮುದಿ ಮಲ್ಲಯ್ಯ, ಶ್ರೀನಾಥ್, ಅನ್ವರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


 

Post a Comment

0 Comments

Ad Code

Responsive Advertisement