Ticker

6/recent/ticker-posts

Ad Code

Responsive Advertisement

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಶೀಘ್ರವೇ ಯೋಗ ಅಧ್ಯಯನ ವಿಭಾಗ ಪ್ರಾರಂಭ: ಪ್ರೊ. ಸಿದ್ದು ಆಲಗೂರ

ಬಳ್ಳಾರಿ,ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ ಹೊಸ ಯೋಗ ಅಧ್ಯಯನ ವಿಭಾಗವನ್ನು ಆರಂಭಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಘೋಷಣೆ ಮಾಡಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ, ಉತ್ಸಾಹಿ ಯೋಗ ಪ್ರತಿಷ್ಠಾನ ಧಾರವಾಡ ಹಾಗೂ ಆಯುಷ್ ಇಲಾಖೆ ಸಹಭಾಗಿತ್ವದಲ್ಲಿ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಮಂಗಳವಾರದಂದು ಆಯೋಜಿಸಿದ್ದ ‘ಮಾನವೀಯತೆಗಾಗಿ ಯೋಗ’ ಎಂಬ ಧ್ಯೇಯವಾಕ್ಯದೊಂದಿಗೆ 08ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನವೀಯತೆಗಾಗಿ ಯೋಗ ಎಂಬ ಅರ್ಥಪೂರ್ಣ ಆಲೋಚನೆಯೊಂದಿಗೆ ಆಚರಿಸುತ್ತಿರುವ ಯೋಗ ದಿನದಂದು ಪ್ರತಿಯೊಬ್ಬರು ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಯೋಗ ಅಧ್ಯಯನ ಸಂಸ್ಥೆ ಸಂಸ್ಥಾಪಕ ಮುಖ್ಯಸ್ಥರು ಮತ್ತು ಉತ್ಸಾಹಿ ಯೋಗ ಪ್ರತಿಷ್ಠಾನದ ಪ್ರೊ. ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ್ ಅವರು ಮಾತನಾಡಿ, ಯೋಗವು ಭಾರತೀಯ ಸಂಸ್ಕøತಿಯ ಪ್ರತೀಕವಾಗಿದೆ. ಯೋಗವು ಮನುಜನಿಗೆ ಮಾನವೀಯತೆಯನ್ನು ಕಲಿಸುತ್ತದೆ ಎಂದು ಹೇಳಿದ ಅವರು, ಅಷ್ಟಾಂಗ ಯೋಗದ ವಿವಿಧ ರೂಪಗಳಾದ ಯಮ, ನಿಯಮ, ಆಸನ, ಪ್ರಾಣಯಾಮ, ಧರಣಿ ರೀತಿಯ ಮಾದರಿಗಳನ್ನು  ಅನುಸರಿಸುವುದರಿಂದ ಜೀವನದಲ್ಲಿ ಗುರಿ ಸಾಧನೆ ಮಾಡಬಹುದು. ದೈಹಿಕ ಪ್ರಗತಿ ಮಾತ್ರವಲ್ಲದೆ ಮಾನಸಿಕ ಪ್ರಗತಿ ಹೊಂದಲು ಯೋಗದಿಂದ ಸಾಧ್ಯವಿದೆ ಎಂದು ತಿಳಿಸಿದರು.

ಗ್ಲೋಬಲ್ ಸರ್ವಿಸ್ ಲೀಡರ್, ಜಿ.ಇ ಮೆಡಿಕಲ್ ಸಿಸ್ಟಮ್ ಬೆಂಗಳೂರಿನ ಗ್ಲೋಬಲ್ ಪ್ರತಿನಿಧಿ ಗಿರಿಜಾ ಎನ್. ಜಿ ಹಾಗೂ ಅಮೆರಿಕದ ಡೇಟನ್ ಸಾಫ್ಟ್‍ವೇರ್ ಸಂಸ್ಥೆ ಉದ್ಯೋಗಿ ಹಾಗೂ ಉತ್ಸಾಹಿ ಯೋಗ ಪ್ರತಿಷ್ಠಾನದ ಅಮೆರಿಕದ ಪ್ರತಿನಿಧಿ ವಿಜಯಾ ಪಾಟೀಲ್ ಅವರುಗಳು ಮಾತನಾಡಿ, ಯೋಗನಾಡಿನಲ್ಲಿ ಜನಿಸಿದ ನಾವೆಲ್ಲ ಅದೃಷ್ಟವಂತರು. ಯೋಗದ ಉತ್ಕøಷ್ಟತೆ ಆಸ್ವಾದಿಸಲು ಮತ್ತು ಎಲ್ಲೆಡೆ ಪಸರಿಸಲು ಪ್ರತಿಯೊಬ್ಬರು ದಿನನಿತ್ಯ ಯೋಗಾಭ್ಯಾಸ ಮಾಡಬೇಕು. ಇದರಿಂದ ಮಾನಸಿಕ ಸಮತೋಲನ ಹಾಗೂ ಬೌದ್ಧಿಕ ವಿಕಾಸವಾಗುತ್ತದೆ ಎಂದರು.

ಕೇಂದ್ರಸರ್ಕಾರದ ಆಯುಷ್ ಇಲಾಖೆ ಹೊರಡಿಸಿರುವ ಶಿಷ್ಟಾಚಾರದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನದ ಭಾಷಣವನ್ನು ನೇರ ಪ್ರಸಾರದಲ್ಲಿ ಆಲಿಸಿದರು. ಮಾನವ ಧರ್ಮದ ಉಳಿವಿಗಾಗಿ ದೇಶದ ಪ್ರತಿ ನಾಗರಿಕರು ಕೈಜೋಡಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವರಾದ ಪ್ರೊ.ಎಸ್‍ಸಿ ಪಾಟೀಲ್, ಮೌಲ್ಯಮಾಪನ  ಕುಲಸಚಿವರಾದ ಪ್ರೊ.ರಮೇಶ್‍ಓಲೇಕಾರ್, ವಿತ್ತಾಧಿಕಾರಿ ಡಾ.ಕೆ.ಸಿ.ಪ್ರಶಾಂತ್, ಜಿಲ್ಲಾ ಆಯುಷ್ ಇಲಾಖೆಯ ಡಾ.ನಾಗರಾಜ್, ಕ್ರೀಡಾ ವಿಭಾಗದ ಪ್ರಭಾರ ನಿರ್ದೇಶಕರಾದ ಡಾ. ಶಶಿಧರ್ ಕೆಲ್ಲೂರ್ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದರು.



 


Post a Comment

0 Comments

Ad Code

Responsive Advertisement