Ticker

6/recent/ticker-posts

Ad Code

Responsive Advertisement

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ : ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗಕ್ಕೆ ಜೂನ್ 8 ರೊಳಗೆ ಅಹವಾಲು ಸಲ್ಲಿಸಲು ಸೂಚನೆ

ಬೆಂಗಳೂರು, ಜೂನ್ 1 (ಕರ್ನಾಟಕ ವಾರ್ತೆ) :ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಕುರಿತಂತೆ ವರದಿ ಸಲ್ಲಿಸಲು ನೇಮಕವಾಗಿರುವ ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗಕ್ಕೆ ಅಹವಾಲು ಅಥವಾ ಸಲಹೆಗಳನ್ನು ಜೂನ್ 8 ರೊಳಗೆ ಸಲ್ಲಿಸುವಂತೆ ಆಯೋಗವು ತಿಳಿಸಿದೆ.

ರಾಜ್ಯ ಸರ್ಕಾರವು ತನ್ನ ಆದೇಶದಲ್ಲಿ ಮೂರು ತಿಂಗಳೊಳಗೆ ವಿಚಾರಣಾ ವರದಿಯನ್ನು ಸಲ್ಲಿಸಲು ಆಯೋಗಕ್ಕೆ ಸೂಚಿಸಿದೆ. ಸಾರ್ವಜನಿಕರು, ವಿಶೇಷವಾಗಿ ಜನ ಪ್ರತಿನಿಧಿಗಳು, ಕಾರ್ಯದರ್ಶಿಗಳು, ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗ,  ಕೊಠಡಿ ಸಂಖ್ಯೆ : 133 ಮತ್ತು 134, ಮೊದಲನೇ ಮಹಡಿ ವಿಕಾಸ ಸೌಧ, ಡಾ ಅಂಬೇಡ್ಕರ್ ರಸ್ತೆ, ಬೆಂಗಳೂರು – 560 001 ಇವರಿಗೆ ತಮ್ಮ ಅಹವಾಲು ಅಥವಾ ಸಲಹೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿ ಅಥವಾ ವಿವರಗಳು, ಅವಶ್ಯಕತೆ ಇದ್ದಲ್ಲಿ, ಆಯೋಗದ ಕಾರ್ಯದರ್ಶಿಯವರನ್ನು ದೂರವಾಣಿ ಸಂಖ್ಯೆ : 080 – 2235 2152 ಹಾಗೂ 080 – 2203 4004 ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

************

ಡಿ ಪಿ ಎಂ


POLITICAL REPRESENTATION FOR BACKWARD CLASSES : JUSTICE K BHAKTHAVATSALA COMMISSION OF INQUIRY ASKS TO SUBMIT APPEALS BEFORE JUNE 8


BENGALURU, JUNE 1 ( KARNATAKA INFORMATION ) : Justice K Bhakthavatsala Commission of Inquiry, constituted to Report on providing  Reservation for Backward Classes in Local Bodies, has asked to submit appeals and suggestions before June 8.  

The State Government has asked the Commission to submit  the Inquiry Report within three months. Public, especially, People’s Representatives  may submit their appeals or suggestions in writing to The Secretary, Justice K Bhakthavatsala Commission of Inquiry, Room No. 133 and 134, First Floor, Vikasa Soudha, Bengaluru – 560 001.

The Secretary of the Commission may be contacted over Telephone No. 080 – 2235 2152 and 080 – 2203 4004, during office hours, for further details or information, if required, says an official press release.

*********DPM


Post a Comment

0 Comments

Ad Code

Responsive Advertisement