ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಚಂದ್ರ ಬಡಾವಣೆಯಲ್ಲಿ ಶ್ರೀ ದುರ್ಗಪರಮೇಶ್ವರಿ ಅಮ್ಮನವರ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಾಲಯ 7ನೇ ವರ್ಷದ ವಾರ್ಷಿಕೋತ್ಸವ ಮತ್ತು ಲೋಕಕಲ್ಯಾಣಾರ್ಥಕ್ಕಾಗಿ ಮಹಾ ಶತ ಚಂಡಿಕಾಯಾಗ ಮಹೋತ್ಸವ ಕಾರ್ಯಕ್ರಮವನ್ನು ದಿನಾಂಕ 3-6-2022ಶುಕ್ರವಾರದಿಂದ ದಿನಾಂಕ 5-6-2022ಭಾನುವಾರದವರಗೆ ಜರುಗಲಿದೆ.
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು ಮತ್ತು ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನ ಟ್ರಸ್ಟ್ ವತಿಯಿಂದ 7ನೇ ವಾರ್ಷಿಕೋತ್ಸವ ಮತ್ತು ಲೋಕಕಲ್ಯಾಣಾರ್ಥಕ್ಕಾಗಿ ಮಹಾ ಶತ ಚಂಡಿಕಾಯಾಗ ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ.
ದಿನಾಂಕ 03.06.2022 ಶುಕ್ರವಾರದಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪಂಚಗವ್ಯ, ಪುರಾಹವಾಚನ, ನಾಂದಿ, ಕಂಕಣಧಾರಣೆ, ಗಣಪತಿ ಅಥರ್ವಶೀರ್ಷ ಹೋಮ, ನವಕ ಪ್ರಧಾನ ಹೋಮ ಮತ್ತು ಕಲಶಾಭಿಷೇಕ (ಎಲ್ಲಾ ದೇವತೆಗಳಿಗೆ), ಕಲಶಪ್ರತಿಷ್ಠಾಪನೆ, ಸಪ್ತಪತಿ ಪಾರಾಯಣ (ಎಲ್ಲಾ
ದೇವತೆಗಳಿಗೆ) ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಸಂಜೆ ಪ್ರಸಾದ ವಾಸ್ತುಹೋಮ, ಪೂಜೆ ಪ್ರಾಕಾರ ಬಲಿ, ಸುದರ್ಶನ ಹೋಮ, (ರಾಠೋಪ್ಹೋಮ ಭೂವರಾಹ ಹೋಮ, ಶ್ರೀಚಕ್ರಪೂಜೆ, ಸಪ್ತಪತಿ ಪಾರಾಯಣ
ದಿನಾಂಕ 04.06.2022 ಶನಿವಾರ ಬೆಳಿಗ್ಗೆ ನವಗ್ರಹ ಹೋಮ, ದಿಕ್ಷಾಲಕ ಹೋಮ, ಬಲಿಕಲ್ಲು ಪುನಃ ಪ್ರತಿಷ್ಠಾಪನೆ, ಪವಮಾನ ಹೋಮ, ಸಪ್ತಷತಿ ಪಾರಾಯಣ
ಸಂಜೆ ನಾಗತನು ತರ್ಪಣ ಪ್ರಸನ್ನ, ತರ್ಪಣ ಪೂಜೆ, ಅಗ್ನಿ ಜನನ (ಆರಣಿ ಮಹನ), ಕುಂಡ
ಸಂಸ್ಕಾರ, ವಾಸ್ತುಹೋಮ, ಬಲಿ ರಾಕ್ಷೋಘ್ನು ಹೋಮ, ಸಪ್ತಷತಿ ಪಾರಾಯಣ,
ದಿನಾಂಕ 05.06.2022 ಬೆಳಿಗ್ಗೆ 6:30ರಿಂದ ಮಹಾ ಶತ ಚಂಡಿಕಾಯಾಗ ಉದ್ಘಾಟನೆ ಸನ್ಮಾನ್ಯ ಶ್ರೀ ವಿ ಸೋಮಣ್ಣವರು, ಮಾನ್ಯ ಶಾಸಕರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವಸತಿ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ತೇಜಸ್ವಿ ಸೂರ್ಯರವರು ಲೋಕಸಭಾ ಸದಸ್ಯರು ಬೆಂಗಳೂರು ದಕ್ಷಿಣ, ಶ್ರೀ ಅಶ್ವಥ್‌ನಾರಾಯಣ್‌ರವರು, ಮಾಜಿ ವಿಧಾನಪರಿಷತ್ ಸದಸ್ಯರು, ಶ್ರೀ ಎನ್ ಆರ್. ರಮೇಶ್‌ರವರು ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರು, ಭಾ.ಜ.ಪಾ. ಡಾ|| ಅರುಣ್ ಸೋಮಣ್ಣವರು, ಬಿ.ಜೆ.ಪಿ. ಯುವ ಮುಖಂಡರು ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಗಣ್ಯರು ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಕ್ತಿ ದೇವತೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆಶೀರ್ವಾದ ಫಲದಿಂದ ಲಕ್ಷಾಂತರ ಜನರ ಜೀವನದಲ್ಲಿ ಒಳಿತಾಗಿದೆ .ಕಳೆದ ಎರಡು ವರ್ಷಗಳಿಂದ ಕೊರೋನ ಮಹಾಮಾರಿಯಿಂದ ಜನರು ಕಷ್ಟಗಳನ್ನ ಅನುಭವಿಸಿದ್ದಾರೆ ಮತ್ತು ನಾನ ರೀತಿಯ ಸಂಕಷ್ಟಗಳು ನಿವಾರಣೆಯಾಗಲಿ ಜನರು ಸುಖ,ಶಾಂತಿ ಮತ್ತು ನೆಮ್ಮದ್ದಿಯಿಂದ ಜೀವನ ಸಾಗಿಸಲಿ ,ಕೊರೋನ ಮಹಾಮಾರಿ ಮುಕ್ತವಾಗಲಿ ಎಂದು ಲೋಕಾಕಲ್ಯಾಣಾರ್ಥಕ್ಕಾಗಿ ಮಹಾ ಶತ ಚಂಡಿಕಾಯಾಗವನ್ನು ಆಯೋಜಿಸಲಾಗಿದೆ .ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಮಹೋತ್ಸವ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುವರು ಅವರಿಗೆ ದೇವತಾ ದರ್ಶನ ಮತ್ತು ಪ್ರಸಾದ ವಿನಿಯೋಗಕ್ಕೆ ಸಂಪೂರ್ಣ ಸಿದ್ದತೆ ಮಾಡಲಾಗಿದೆ.
ಮೂರು ದಿನಗಳ ಕಾಲ ಭಕ್ತರು ಆಗಮಿಸಿ,ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗಬೇಕು ಎಂದು ಮನವಿ ಮಾಡಿದರು

0 Comments