ಬೆಂಗಳೂರು, ಮೇ 31, ( ಕರ್ನಾಟಕ ವಾರ್ತೆ ) :
ಭಾರತದ ಸಂವಿಧಾನದ ಅನುಚ್ಛೇದ 51ಎ ರಡಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಈ ಬಗ್ಗೆ ನಾಗರೀಕರಲ್ಲಿ ಸಾಮಾನ್ಯ ಅರಿವು ಮೂಡಿಸಲು ರಾಜ್ಯದ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮೂಲಭೂತ ಕರ್ತವ್ಯಗಳ ಕುರಿತು ವ್ಯಾಪಕ ಪ್ರಚಾರ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಮೂಲಭೂತ ಕರ್ತವ್ಯಗಳ ನಿರ್ವಹಣೆ ಕುರಿತು ನ್ಯಾಯಮೂರ್ತಿ ವರ್ಮಾ ಸಮಿತಿ ಮತ್ತು ಸರ್ವೋಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ( ಸಿವಿಲ್) 239 / 1998, ಶ್ರೀ ರಂಗನಾಥ ಮಿಶ್ರಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ದಿನಾಂಕ: 31.07.2003 ರಂದು ನೀಡಿರುವ ನಿರ್ದೇಶನಗಳನ್ವಯ, ನಾಗರಿಕರಿಗೆ ತಮ್ಮ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕರ್ನಾಟಕದ ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಮುಂದೆ ಸೂಚಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ.
ಕಾಲೇಜುಗಳು, ವಕೀಲರ ಸಂಘಗಳು ಮತ್ತು ನ್ಯಾಯಾಲಯಗಳು ನಡೆಸುವ ಎಲ್ಲಾ ಕಾನೂನು ಅರಿವು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ಕಾರ್ಯಕ್ರಮದ ಒಂದು ಭಾಗವಾಗಿ ಸೇರಿಸಬೇಕು.
ಶಾಲಾ ಹಂತದಲ್ಲಿ ಎಲ್ಲಾ ಪಠ್ಯ ಪುಸ್ತಕಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ಪಠ್ಯದ ಭಾಗವಾಗಿ ಸೇರಿಸಬೇಕು. ಪದವಿ ಮತ್ತು ಪೂರ್ವ ಪದವಿ ಮಟ್ಟದಲ್ಲಿ ಎಲ್ಲಾ ಕೋರ್ಸುಗಳಿಗೆ ಎಲ್ಲಾ ಸಂವಿಧಾನಿಕ ಕಾನೂನು ಪಠ್ಯಕ್ರಮಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸುವುದು.
ಕಂಪನಿಗಳು, ಕಾರ್ಖಾನೆಗಳು, ಕೈಗಾರಿಕೆಗಳು ತಮ್ಮ ಸ್ಥಳೀಯ ಮಿತಿಗಳಲ್ಲಿ ಉದ್ಯೋಗಿಗಳಿಗೆ ಕಾನೂನು ಶಿಕ್ಷಣವನ್ನು ಪ್ರಸಾರ ಮಾಡುವಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮಗಳನ್ನು ಬಳಸಿಕೊಳ್ಳುವುದು. ಕಾರ್ಮಿಕ ಕಾನೂನುಗಳಲ್ಲಿ ಅಗತ್ಯಪಡಿಸಿರುವಂತೆ ಎದ್ದುಕಾಣುವ ಸ್ಥಳಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ಪ್ರದರ್ಶಿಸುವುದು.
ರಾಜ್ಯ ನೇಮಕಾತಿಯಲ್ಲಿ ವಿವಿಧ ಹಂತಗಳಲ್ಲಿ ಚಾಲನಾ ಪರವಾನಗಿ ಪರೀಕ್ಷೆಗಳಿಗೆ ಮೂಲಭೂತ ಕರ್ತವ್ಯಗಳನ್ನು ಪಠ್ಯಕ್ರಮದ ಒಂದು ಭಾಗವಾಗಿ ಸೇರಿಸುವುದು. ಪತ್ರಿಕೆಗಳು, ರೇಡಿಯೋ, ಟಿವಿ, ಪೂರ್ವ-ಚಲನಚಿತ್ರ ಪ್ರಸಾರ ಮತ್ತು ಜಾಹೀರಾತುಗಳ ಮೂಲಕ ಮೂಲಭೂತ ಕರ್ತವ್ಯಗಳನ್ನು ಪುದರ್ಶಿಸುವುದು.
ಅಧಿಕೃತ ಸರ್ಕಾರದ ಪುಟಗಳು, ಸಾಮಾಜಿಕ ಜಾಲತಾಣಗಳು, ಅಧಿಕೃತ ಪತ್ರಗಳ ಮೂಲಕ ಮೂಲಭೂತ ಕರ್ತವ್ಯಗಳನ್ನು ಆನ್‍ಲೈನ್ ಪ್ರಚಾರ ಮಾಡುವುದು. ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ನ್ಯಾಯಾಲಯಗಳು, ಸಾರ್ವಜನಿಕ ಮತ್ತು ಪ್ರವಾಸಿ ಸ್ಥಳಗಳು, ಟೋಲ್ ಪ್ಲಾಜಾಗಳು, ತರಬೇತಿ ಸಂಸ್ಥೆಗಳು, ಸೆಮಿನಾರ್ ಹಾಲ್‍ಗಳು ಮತ್ತು ಸಮ್ಮೇಳನ ಸಭಾಂಗಣಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ಪ್ರದರ್ಶಿಸುವುದು ಜೊತೆಗೆ ಮೂಲಭೂತ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಪ್ರತಿ ಸರ್ಕಾರಿ ಕಾರ್ಯಕ್ರಮದ ಭಾಗವಾಗಿರಬೇಕು ಎಂದು ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
0 Comments