Ticker

6/recent/ticker-posts

Ad Code

Responsive Advertisement

ಅಖಿಲ ಭಾರತ ಬೇಡಜಂಗಮರ ಒಕ್ಕೂಟದಿಂದ ಜೂನ್ 30ರಂದು ಪ್ರೀಡಂಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ- ಕಲ್ಯಾಣಸ್ವಾಮಿ ಶ್ರೀಗಳು

ಹಿರೇಮಠ ಅವರ ಮೇಲಿನ ಪ್ರಕರಣ ಖಂಡನೀಯ

ಬಳ್ಳಾರಿ ಜೂ.27: ಅಖಿಲ ಭಾರತ ಬೇಡಜಂಗಮರ ಒಕ್ಕೂಟದ ಅಧ್ಯಕ್ಷರಾಗಿರುಚ ನ್ಯಾಯವಾಧಿ ಬಿ.ಡಿ.ಹೀರೆಮಠ ಅವರ ಮೇಲಿನ ದೌರ್ಜನ್ಯ ಪ್ರಕರಣ ದಾಖಲು ಮಾಡಿರುವುದು ಖಂಡನೀಯ ಎಂದು ನಗರದ ಕಲ್ಯಾಣಸ್ವಾಮಿ ಮಠದ ಶ್ರೀಗಳು ಮಠದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬೇಡ ಜಂಗಮರಿಗೆ ದಾಖಲೆ ಪ್ರಕಾರ ನ್ಯಾಯಾಂಗ ಮತ್ತು ಕಾರ್ಯಾಂದ ಬೆಂಬಲವಿದೆ ಆದರೆ ಶಾಸಕರ ಬೆಂಬಲ ದೊರೆಯುತ್ತಿಲ್ಲ ಎಂದರು. ಶಾಸಕರಾದ ರೇಣುಕಾಚಾರ್ಯ, ವೀರಣ್ಣ ಚರಂತಿ ಮಠ ಅವರುಗಳು ಮತ ಬ್ಯಾಂಕಿಗಾಗಿ ತಮ್ಮ ಸ್ವಾರ್ಥ ಮತ್ತು ರಾಜಕೀಯ ಪ್ರತಿಷ್ಟಿಯಿಂದಾಗಿ ಸ್ಪಂಧಿಸುತ್ತಿಲ್ಲ ಎಂದು ನೇರ ಆರೋಪ ಮಾಡಿದರು. ವೀರಶೈವ ಲಿಂಗಾಯುತ ಜಾತಿ ಅಲ್ಲ ಅದು ಧರ್ಮ ಎಂದು ಕೇಂದ್ರ ಸರ್ಕಾರ ಮಾನ್ಯತೆ ಕೊಟ್ಟಿಲ್ಲ ನ್ಯಾಯಾಲಯ ಇದನ್ನೆ ಪುರಸ್ಕರಿಸುತ್ತಿದೆ, ಹಿಂದು ಲಿಂಗಾಯಿತ, ಹಿಂದು ವೀರಶೈವ ಎಂದರೆ ಮಾತ್ರ ಪರಿಗಣನೆ ಇದೆ.


ಆದರೆ ಕೇಂದ್ರ ಸರ್ಕಾರದಲ್ಲಿ ಬೇಡಜಂಗಮಕ್ಕೆ ಮಾತ್ರ ಪ.ಜಾತಿ ಮಾನ್ಯತೆ ಇದೆ, ಜಂಗಮರಿಗೆ ಧಾರ್ಮಿಕ ಭೀಕ್ಷಕರೇಂದು ಕರೆದರೆ ಅದಕ್ಕಾಗಿ ಅವರು ಎಸ್‍ಟಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಹರರಾಗಿರುತ್ತಾರೆ. ಬೇಡಜಂಗಮರಿಗಾಗಿ ನ್ಯಾಯಬದ್ದ ಹೋರಾಟವನ್ನು ಅಖಿಲ ಕರ್ನಾಟಕ ಬೇಡಜಂಗಮದ ಸಂಘಟನೆಯ ಒಕ್ಕೂಟದ ಅದ್ಯಕ್ಷ ಬಿ.ಡಿ.ಹೀರೆಮಠ ಅವರು ವಿಧಾನ ಸೌಧದಲ್ಲಿ ನಡೆದ ಪ.ಜಾತಿಯ ಹಲವು ಸಮಸ್ಯೆಯ ಬಗ್ಗೆ  ನಡೆದ ಸಭೆಯಲ್ಲಿ ಮನವಿ ಸಲ್ಲಿಸಲು ಹೋದ ಅವರಿಗೆ ಅಕ್ಷೇಪ ವ್ಯಕ್ತಪಡಿಸಲಾಗಿದೆ. ಅಲ್ಲದೆ ಅವರ ಮೇಲೆ ಜಾತಿ ದೌರ್ಜನ್ಯದ ಪ್ರಕರಣ ದಾಖಲಿಸಲಾಗಿದೆ ಇದು ಸರಿಯಲ್ಲ ಎಂದರು, ಹಾಗೂ ಈ ಪ್ರಕರಣವನ್ನು ಹಿಂಪಡೆಯಬೇಕೇಂದು ಒತ್ತಾಯಿಸಿದರು, ಕೇಂದ್ರ ಸರ್ಕಾರದ ಅಧಿಕಾರ ಮತ್ತು ಆಡಳಿತ ವ್ಯಾಪ್ತಿಗೆ ಒಳಪಡುವ ಅನುಸೂಚಿತ ಜಾತಿಗಳ ಅಯ್ಕೆ ಆದೇಶ ಪಟ್ಟಿಯಲ್ಲಿನ ಬೇಢಜಂಗಮ ಜಾತಿಯವರಿಗೆ ಸಂವಿಧಾನಾತ್ಮಕವಾಗಿ ಪ್ರಸ್ತಪವಾಗಿರುವ ಹಕ್ಕುಗಳನ್ನು ಮೊಟಕುಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವಲ್ಲಿ ಬೇಡಜಂಗಮ ಅನುಸೂಚಿತ ಜಾತಿ ಸತ್ಯ ಪ್ರತಿಪಾದನ ಸತ್ಯಾಗ್ರಹವನ್ನು ಜೂ.30ರಂದು ಬೆಂಗಳೂರಿನ  ಪ್ರಿಡಂ ಪಾರ್ಕ್‍ನಲ್ಲಿ ರಾಜ್ಯದ ಎಲ್ಲಕಡೆಯಿಂದ ಒಂದುವರೆ ಲಕ್ಷ ಜನ ಭಾಗವಹಿಸಿ ಪ್ರತಿಭಟನೆ ನಡೆಸಲಿದಿ. ಮತ್ತು ಬಳ್ಳಾರಿ ಜಿಲ್ಲೆಯಿಂದ 5ಸಾವಿರಕ್ಕೂ ಹೆಚ್ಚು ಜನ ಆ ¥ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿದ್ದಾರೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಹೆಚ್‍ಎಸ್‍ಕೆ ಪಾಲಿಟೆಕ್‍ನಿಕ್‍ನ ಚೇರಮ್ಯಾನ ಹೆಚ್‍ಎಂ ಕಿರಣ್ ಕುಮಾರ, ವೀರೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


 

 


Post a Comment

0 Comments

Ad Code

Responsive Advertisement