ಬೆಂಗಳೂರು, ಜೂನ್ 24, (ಕರ್ನಾಟಕ ವಾರ್ತೆ) : ಜೂನ್ 26 ರಂದು ಆಚರಿಸುವ “ಅಂತಾರಾಷ್ಟ್ರೀಯ ಮಾದಕ ದ್ರವ್ಯಗಳ ವ್ಯಸನ ಮತ್ತು ಕಳ್ಳಸಾಗಣೆ ವಿರುದ್ಧದ ದಿನಾಚರಣೆಯ” ಅಂಗವಾಗಿ ಕರ್ಮಾಕ ರಾಜ್ಯ ಪೊಲೀಸರು ಅ೦ದಾಜು ರೂ.25.6 ಕೋಟಿಗಳ ಸುಮಾರು 21 ಟನ್ಗಳು ಮಾದಕ ವಸ್ತುಗಳನ್ನು, ನಿಯಮಗಳನ್ನು ಅನುಸರಿಸಿ ಸಂಬಂಧಿಸಿದ ನ್ಯಾಯಾಲಯಗಳ ಅನುಮತಿಯನ್ನು ಪಡೆದು ನಾಶಪಡಿಸಲಿದ್ದಾರೆ.
ಜಪ್ತಿಪಡಿಸಿಕೊಂಡ ಮಾದಕ ದ್ರವ್ಯಗಳಾದ ಗಾಂಜಾ, ಅಫೀಮು, ಹೆರಾಯಿನ್, ಕೊಕೈನ್ ಮತ್ತು ಸಿಂಥೆಟಿಕ್ ಡ್ರಗಳಾದ ಎಂಡಿಎಂಎ, ಎಲ್ಎಸ್ಡಿ ಮುಂತಾದ ಮಾದಕ ದ್ರವ್ಯಗಳ ಪೈಕಿ ಬೆಂಗಳೂರು ನಗರ ಒಂದರಲ್ಲೇ ಶೇಕಡಾ 50ಕ್ಕಿಂತ ಹೆಚ್ಚಾಗಿ ಜಪ್ತಿಪಡಿಸಿಕೊಳ್ಳಲಾಗಿರುತ್ತದೆ.
ಕಳೆದ ವರ್ಷ ಇದೇ ದಿನ, ಅಂದಾಜು ರೂ. 50.23 ಕೋಟಿಗಳ, ಸುಮಾರು 24 ಟನ್ಗಳ ಮಾದಕ ವಸ್ತುಗಳನ್ನು ನಾಶಪಡಿಸಲಾಗಿರುತ್ತದೆ. ಕಳೆದ 12 ತಿಂಗಳುಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ 8505 ಪ್ರಕರಣಗಳನ್ನು ದಾಖಲಿಸಿದ್ದು, 7846 ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಇವರ ಪೈಕಿ 185 ಆರೋಪಿಗಳು ವಿದೇಶಿಯರಾಗಿರುತ್ತಾರೆ. ಇವುಗಳ ಪೈಕಿ 5363 ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಅಂತಿಮಗೊಳಿಸಲಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments