Ticker

6/recent/ticker-posts

Ad Code

Responsive Advertisement

ಮುಂದುವರಿದ ರಾಷ್ಟ್ರ ಜಾಗೃತಿ ಅಭಿಯಾನ-ಜೂ.19ರಂದು 22ನೇ ದೇಶಭಕ್ತಿ ಗೀತ ಗಾಯನ ಸಮರ್ಪಣಾ ಕಾರ್ಯಕ್ರಮ

ಬಳ್ಳಾರಿ,ಜೂ.18 : ವಿಶ್ವದಾದ್ಯಂತ ಇರುವ ಭಾರತೀಯರಿಗೆ ನಮ್ಮ ಸಂವಿಧಾನ, ಸಂಸ್ಕøತಿ, ನಮ್ಮ ಹಕ್ಕು ನಮ್ಮ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ರಾಷ್ಟ್ರ ಜಾಗೃತಿ ಅಭಿಯಾನ ಶೀರ್ಷಿಕೆಯಡಿ ಮಹತ್ವದ ಆಂದೋಲನವನ್ನು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸಾರ್ವಜನಿಕವಾಗಿ ಆಯೋಜಿಸಿದ್ದು, ಜೂ.19 ರಂದು ಬೆಳಿಗ್ಗೆ 10 ಗಂಟೆಯಿಂದ 22ನೇ ದೇಶಭಕ್ತಿ ಗೀತ ಗಾಯನ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.  ಈ ಕುರಿತು ರಾಷ್ಟ್ರ ಜಾಗೃತಿ ಅಭಿಯಾನದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಆಮಂತ್ರಣ ಪತ್ರಿಕೆ ವಿನ್ಯಾಸ ಸಮರ್ಪಣೆ ಸಂಘಟನಾ ಕಾರ್ಯದರ್ಶಿ ಬಸವರಾಜ ಬಿಸಿಲಹಳ್ಳಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಬೆಂಗಳೂರಿನ ಕುಮಾರ್ ಸಂಜೀವ್ ರಾವ್ ಅವರು ಬೆಳಿಗ್ಗೆ 10 ಗಂಟೆಗೆ ವಂದೇ ಮಾತರಂ ಗೀತೆ ಹಾಡಲಿದ್ದಾರೆ.


ರಾಷ್ಟ್ರ ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕರಾದ ರವಿ ಹೊಯ್ಸಳ ಅವರು ಬೆ.10:08ಕ್ಕೆ ಸ್ವಾಗತ ಭಾಷಣ ಮಾಡಲಿದ್ದಾರೆ. ಬಳ್ಳಾರಿಯ ಇಂದುಮತಿ ಎ.ದಾನಿ ಇವರು ಬೆಳಿಗ್ಗೆ 10-15ಕ್ಕೆ ಉದ್ಘಾಟಿಸುವರು. ಬೆ.10-40ಕ್ಕೆ ರಾಷ್ಟ್ರ ಜಾಗೃತಿ ಅಭಿಯಾನದ ಅಧ್ಯಕ್ಷರು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಎನ್ ಕುಮಾರ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ. 10-50ಕ್ಕೆ ರಾಷ್ಟ್ರ ಜಾಗೃತಿ ಅಭಿಯಾನದ ಉಪಾಧ್ಯಕ್ಷರು,  ಭಾರತೀಯ ಆಡಳಿತ ಸೇವೆಯ ನಿವೃತ್ತ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರು ಆಶಯ ಭಾಷಣ ಮಾಡಲಿದ್ದಾರೆ. ಹೆಸರಾಂತ ನಿರೂಪಕಿಯರಾದ ಎಂಎಸ್ ಭಾರತಿ ಮತ್ತು ಶೋಭಾ ಕಾತರಕಿ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 6 ಗಂಟೆಯಿಂದ 12ನೇ ಶಾಸ್ತ್ರೀಯ ಸಂಗೀತ, ದೇವರ ನಾಮ ಮತ್ತು ಭಜನೆ ಸಮರ್ಪಣಾ ಕಾರ್ಯಕ್ರಮ ಜರುಗಲಿದೆ. ಬೆಂಗಳೂರಿನ ಸಂಗೀತ ಶಿಕ್ಷಕರಾದ ವನಿತಾ ಅವರು ವಿನಾಯಕ ಸ್ತುತಿ ಹಾಡುವ ಮೂಲಕ ಚಾಲನೆ ನೀಡುವರು. ರಾಷ್ಟ್ರ ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕ ರವಿ ಹೊಯ್ಸಳ ಅವರು ಸಂಜೆ 6;05ಕ್ಕೆ ಸ್ವಾಗತ ಭಾಷಣ ಮಾಡಲಿದ್ದಾರೆ. ಸಂಜೆ 6;20ಕ್ಕೆ ಕೋಲಾರವಾಣಿ ದೈನಿಕದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವರದಿಗಾರ ಮಲ್ಲಿಕಾರ್ಜುನ ಇ.ಜೋಷಿ ಅವರು  ಉದ್ಘಾಟನೆ ಮಾಡಲಿದ್ದಾರೆ. ಸಂಜೆ 6;30ಕ್ಕೆ ರಾಷ್ಟ್ರ ಜಾಗೃತಿ ಅಭಿಯಾನದ ಅಧ್ಯಕ್ಷರು ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಎನ್.ಕುಮಾರ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ. ಉಪಾದ್ಯಕ್ಷರು ಹಾಗೂ ಭಾರತೀಯ ಆಡಳಿತ ಸೇವೆಯ ನಿವೃತ್ತ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರು ಆಶಯ ಭಾಷಣ ಮಾಡಲಿದ್ದಾರೆ. ಹೆಸರಾಂತ ನಿರೂಪಕಿಯರಾದ ಮುಕ್ತವೇಣಿ ದೀಕ್ಷಿತ್ ಮತ್ತು ರೇಖಾ ಕುಮಾರ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿಯ ಸಾಮೂಹಿಕ ಗೀತ ಗಾಯನ ಸಮರ್ಪಣಾ ಕಾರ್ಯಕ್ರಮಕ್ಕೆ  ಜಯ ಭಾರತ ಜನನಿಯ ತನುಜಾತೆ, ಜಯತೆ ಜಯತೆ ಸತ್ಯಮೇವ ಜಯತೆ, ತಾಯಿ ಶಾರದೆ ಲೋಕ ಪೂಜಿತೆ, ಕಲಿಸು ಗುರುವೇ ಕಲಿಸು, ಪುಣ್ಯ ಕೋಟಿ ಗೀತೆ, ದೇಶ ದೇಶ ದೇಶ ನನ್ನದು, ಸನ್ಯಾಸಿ ಗೀತೆ, ಕಾಯೌ ಶ್ರೀ ಗೌರಿ, ವಂದೇ ಮಾತರಂ ಮತ್ತು ನಮ್ಮ ರಾಷ್ಟ್ರ ಗೀತೆ ಈ 10 ಗೀತೆಗಳನ್ನು ಆಯ್ಕೆ ಮಾಡಿದೆ.

ಆನ್ ಲೈನ್ ನಲ್ಲಿ ನಡೆಯುವ ಈ ಸಮರ್ಪಣಾ ಕಾರ್ಯಕ್ರಮಕ್ಕೆ 112 ದೇಶ, 35 ರಾಜ್ಯ, 30 ಜಿಲ್ಲೆ, 231 ತಾಲೂಕು, 537 ಗ್ರಾಮ, 649 ಹೋಬಳಿಗಳಿಂದ ಸುಮಾರು 10,18,934 ಲಕ್ಷಕ್ಕೂ ಹೆಚ್ಚು ದೇಶಭಕ್ತರು ವೆಬ್ ಸೈಟ್ ಮೂಲಕ ವೀಕ್ಷಿಸಿ ಅಭಿನಂದಿಸಿದ್ದಾರೆ. ವಿಶ್ವದಾದ್ಯಂತ ಪ್ರಮುಖ 454 ಸಂಘ-ಸಂಸ್ಥೆಗಳ ವಾಟ್ಸಪ್ ಗ್ರೂಪುಗಳು ನಿರಂತವಾಗಿ ಕೈ ಜೋಡಿಸಿದ್ದಾರೆ. ಪ್ರತಿ ಭಾನುವಾರ ನಡೆಯುವ ಈ ಕಾರ್ಯಕ್ರಮಕ್ಕೆ ವ್ಯಾಪಕ ಪ್ರೋತ್ಸಾಹ ಹಾಗೂ ಬೆಂಬಲ ದೊರೆಯುತ್ತಿದೆ. ಮೈಸೂರು ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಒಡೆಯರ್ ಮತ್ತು ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿಗಳು ಹಾಗೂ ಇತರೆ ಗಣ್ಯರು 2021ರ ಆಗಸ್ಟ್ 15 ರಂದು ಈ ರಾಷ್ಟ್ರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ವರ್ಷಪೂರ್ತಿ ಸ್ಪರ್ಧೆ, ಸಮರ್ಪಣೆ ಮತ್ತು ಸಂವಾದ ಕಾರ್ಯಕ್ರಮಗಳೆಲ್ಲ ಆನ್‍ಲೈನ್ ನಲ್ಲೇ ನಡೆಯುತ್ತವೆ. ಸ್ಪರ್ಧೆ, ಸಮರ್ಪಣೆ ಮತ್ತು ಸಂವಾದ ಈ ಮೂರು ಮಾರ್ಗಗಳ ಮೂಲಕ ರಾಷ್ಟ್ರ ಜಾಗೃತಿ ಅಭಿಯಾನಕ್ಕೆ ಜನಜಾಗೃತಿ ಆಯೋಜಿಸಲಾಗಿದೆ.  ದೇಶಭಕ್ತಿ ಗೀತ ಗಾಯನ ಮತ್ತು ನೃತ್ಯ ಸ್ಪರ್ಧಾ, ಸಮರ್ಪಣೆ, ಸಂವಾದ ಕಾರ್ಯಕ್ರಮಕ್ಕೆ ಎಲ್ಲ ಧರ್ಮಗುರುಗಳು, ವಿದ್ವಾಂಸರು, ಗಣ್ಯರು, ಸಾಹಿತಿಗಳು, ಪಂಡಿತರು, ವಿದ್ಯಾಸಂಸ್ಥೆಗಳು ಕೈ ಜೋಡಿಸಿ ಶುಭ ಹಾರೈಸುತ್ತಿದ್ದಾರೆ. ರಾಷ್ಟ್ರ ಜಾಗೃತಿ ಅಭಿಯಾನದ ರಾಜ್ಯ ಕಾರ್ಯದರ್ಶಿ ಹೆಚ್‍ಜಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಎಸ್‍ಪಿ ಚಿದಾನಂದ, ರಾಜ್ಯ ಕೋಶಾಧ್ಯಕ್ಷರಾದ ಆರ್ ಎಲ್ ರಮೇಶ್ ಬಾಬು ಮತ್ತು ಟ್ರಸ್ಟ್ ಅಧ್ಯಕ್ಷರಾದ ಶ್ರೀಧರ್ ನೀಲಕಂಠರಾವ್ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿದ್ದಾರೆ. ಜುಲೈನಲ್ಲಿ ಎರಡು ದಿನದ ಕಾರ್ಯಕ್ರಮ: ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಎಲ್ಲದರಲ್ಲೂ ಸ್ಪರ್ಧಿಸುವ ಮತ್ತು ಆತ್ಮ ವಿಶ್ವಾಸ ಉತ್ತೇಜಿಸುವ ಕಾರ್ಯಕ್ರಮ ಇದಾಗಿದ್ದು ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಎರಡು ದಿನದ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ದೇಶಭಕ್ತಿ ಗೀತೆ, ಶಾಸ್ತ್ರೀಯ ಸಂಗೀತ, ದೇವರ ನಾಮಗಳು, ಭಜನೆ ಮತ್ತು ಸಮರ್ಪಣಾ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಬಹುದು. ಎರಡು ದಿನ ನಡೆಯುವ ಈ ಅಪರೂಪದ ಕಾರ್ಯಕ್ರಮದಲ್ಲಿ ಶಿಬಿರ, ಅಭ್ಯಾಸ ವರ್ಗ, ನೃತ್ಯ ಪ್ರದರ್ಶನಗಳು ನಡೆಲಿವೆ.  ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು, ಮೈಸೂರಿನ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಒಡೆಯರ್, ಸಚಿವರಾದ ಬಿ.ಶ್ರೀರಾಮುಲು, ಸಂಸದರಾದ ವೈ.ದೇವೇಂದ್ರಪ್ಪ, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಬಿ.ನಾಗೇಂದ್ರ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ರಾಷ್ಟ್ರ ಜಾಗೃತಿ ಅಭಿಯಾನದ ಸಂಘಟನಾ ಕಾರ್ಯದರ್ಶಿ ಬಸವರಾಜ ಬಿಸಿಲಹಳ್ಳಿ ತಿಳಿಸಿದ್ದಾರೆ.


 


Post a Comment

0 Comments

Ad Code

Responsive Advertisement