ಬಳ್ಳಾರಿ ಜೂನ್ 08. ರಾಯಚೂರು ಬಳ್ಳಾರಿ ಮತ್ತು ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಶಾಲೆ ಮಕ್ಕಳುಗೆ ಸರಬರಾಜು ಮಾಡುವ ಹಾಲಿನ ಪೌಡರ್ ಟನ್ಸ್ ಗಟ್ಟಲೆ ಮಾಯವಾಗಿದ್ದು, ಅಂದಾಜು ಲಕ್ಷಗಟ್ಟಲೆ ಲೆಕ್ಕಾಚಾರ ವಹಿವಾಟು ವ್ಯತ್ಯಾಸ ಆಗಿದ್ದು ಅದನ್ನು ಸರಿಪಡಿಸಲು ಸಂಸ್ಥೆ ಕಳ್ಳ ಮಾರ್ಗವನ್ನು ಹುಡುಕಲು ಮುಂದಾಗಿರವ ಭ್ರಷ್ಟಾಚಾರ,ಹಗರಣ ಬಯಲಿಗೆ ಬಂದಿದೆ.
ಹತ್ತು ವರ್ಷಗಳಿಂದ ಈವರೆಗೆ ಯಾವುದೇ ಲಕ್ಕಚಾರ ಮಾಡದೇ, ಅಕೌಂಟ್ ತೋರಿಸದೆ, ಮುಚ್ಚಿ ಇಟ್ಟು ಕೊಂಡು ಯಾವುದೇ ಅಧ್ಯಕ್ಷರಿಗೆ ಆಗಲಿ, ಸದಸ್ಯರಿಗೆ ಗಮನಕ್ಕೆ ಇಲ್ಲದೆ,ಅದಕ್ಕೆ ಸಂಬಂಧಿಸಿದ ಒಬ್ಬ ಅಧಿಕಾರಿ ನಿವೃತ್ತಿ ಸಮಯದಲ್ಲಿ ಅದರ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವಹಿಸುವ ಸಂದರ್ಭದಲ್ಲಿ ಅಸಲಿ ಬಣ್ಣ ಬಯಲಿಗೆ ಬಿದ್ದಿದೆ. ಮಿಲ್ಕ್ ಫೆಡರೇಷನ್ ದಿಂದ ಒಕ್ಕೂಟಕ್ಕೆ 2013ದಿಂದ 2018ವರಗೆ ಮಿಲ್ಕ್ ಪೌಡರ್ ಬಲ್ಕ್‍ಆಗಿ ಬ್ಯಾಗ್‍ಗಳಲ್ಲಿ ಒಕ್ಕೂಟಕ್ಕೆ ಬರುತ್ತಾ ಇತ್ತು,ಅದನ್ನು ಪೌಚ್ ಪ್ಯಾಕೆಟ್‍ಗಳಲ್ಲಿ ಮಾಡಿ ಮಕ್ಕಳಿಗೆ ಸರಬರಾಜು ಮಾಡುವ ಜವಾಬ್ದಾರಿ ಒಕ್ಕೂಟಕ್ಕೆ ಇತ್ತು. ಇದಕ್ಕೆ ಒಂದಿಷ್ಟು ಹ್ಯಾಂಡ್ಲಿಂಗ್ ಲಾಸಫ್ ಚಾರ್ಜ್ ಎಂದು%ತೆಗದು ಕೊಳ್ಳುವ ವ್ಯವಸ್ಥೆ ಇತ್ತು. ಅದಕ್ಕೆ ಅಂದಾಜು ಲಕ್ಷಗಟ್ಟಲೆ ಹಣ ಸಂಗ್ರಹಣೆ ಆಗಿತ್ತು ಅಂದಾಜು 35 ಟನ್ ಹಾಲಿನ ಪೌಡರ್ ಬೆಲೆ 60ಲಕ್ಷಗಳು ಮೇಲ್ಪಟ್ಟು ಇರಬಹುದು ಎಂದು ತಿಳಿದು ಬಂದಿದೆ. ಅಷ್ಟು ಮೋತ್ತ ಎಲ್ಲಿಗೆ ಹೋಗಿದೆ? ಅದಕ್ಕೆ ಯಾವ ರೀತಿಯಲ್ಲಿ ಲೆಕ್ಕಪತ್ರ ಸರಿಪಡಿಸಬೇಕು ಎಂದು ಒಕ್ಕೂಟಕ್ಕೆ ಟೋಪಿ ಹಾಕುವ ಪ್ರಯತ್ನ ನಡೆದಿದೆ ಅದಕ್ಕೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆÉಂದು ತಿಳಿದುಬಂದಿದೆ. ಅದರೆ ಇದೇ ವಿಚಾರ ಅದ್ಯಕ್ಷ, ಶಾಸಕ ಬೀಮಾನಾಯಕ್ ಅವರು ಕೂಡ ನಮ್ಮ ಗಮನಕ್ಕೆ ಇದೆ. ಮಂಗಳವಾರ ಬೋರ್ಡ್ ಮೀಟಿಂಗ್ ಇದೆ ತದನಂತರ ಎಲ್ಲ ಮಾಹಿತಿ ತಿಳಿಸಲು ಹೇಳಿದ್ದಾರೆ. ಪ್ರಸ್ತುತ ವರ್ಷಗಳಲ್ಲಿ ಕೂಡ 10ಟನ್‍ಗೆ ಲೆಕ್ಕಾಚಾರ ವ್ಯತ್ಯಾಸ ಆಗಿದೆ ಎಂದು ತಿಳಿದು ಬಂದಿದೆ.
ಇದು ಒಂದು ದೊಡ್ಡ ಹಗರಣ ಪ್ರಕರಣ ಎಂದು ಸಮರ್ಪಕವಾಗಿ ತನಖಿ ಮಾಡಿದರೆ, ಕೆಲ ಅಧಿಕಾರಿಗಳಿಗೆ ಜೈಲುವಾಸ ಖಚಿತ. ಇದರಲ್ಲಿ ಇನ್ನೂ ಮಹತ್ವದ ದಾಖಲೆಗಳ ಮರ್ಮ ಇದೆ.ಪ್ರಸ್ತುತ ಡೈರೆಕ್ಟರ್ ತಿರುಪತಪ್ಪ ಅವರ ಕೊರಳಗೆ ಯಮಪಾಶಾ ಆಗಿದೆ. ಮಂಗಳವಾರ ಬೋರ್ಡ್ ಮೀಟಿಂಗ್ ತದನಂತರ ಅಧ್ಯಕ್ಷರು ಕಾಲಾವಕಾಶ ಕೊರತೆಯಿಂದ ಯಾವುದೇ ಮಾಹಿತಿ ನೀಡಿರುವುದಿಲ್ಲ ಆದರೇ ಇದನ್ನು ವಿಚಾರಣೆ ಮಾಡಲು ಅಥವಾ ಲೋಕಾಯುಕ್ತಗೆ ನೀಡುವುದು ಎಂದು ಭೀಮಾನಾಯಕ್ ಆದೇಶಮಾಡಿದ್ದಾರೆಂದು ತಿಳಿದುಬಂದಿದೆ. ಕೊಟ್ಯಾಂತರ ರೂ ಗಳ ಹಾಲಿನ ಪೌಡರ್ ಕಥೆಯಲ್ಲಿ ದೊಡ್ಡ ದೊಡ್ಡ ತಿಮಿಂಗಳಗಳು ಇದ್ದಾವೆಂದು ತಿಳಿದುಬಂದಿದೆ ಸಮರ್ಪಕವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾಗಿದೆ.
.jpg)
0 Comments