ಬಳ್ಳಾರಿ, ಜೂ. 03: ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ 27ನೇ ಪುಣ್ಯಸ್ಮರಣೋತ್ಸವ ಹಾಗೂ 1008 ಮುತ್ತೈದೆಯರಿಗೆ ಉಡಿ ತುಂಬುವ ಮತ್ತು ಶ್ರೀ ಶಿವಶಾಂತವೀರ ಶರಣರ ತುಲಾಬಾರ ಸೇವೆಯ ಸಮಾರಂಭವು ಜೂನ್ 05ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಬಸವ ಭವನದಲ್ಲಿ ನಡೆಯಲಿದೆ. ಶ್ರೀಚನ್ನವೀರ ಶರಣರ ಭಕ್ತಾಧಿಗಳು ಪತ್ರಿಕಾ ಪ್ರಕಟಣೆ ನೀಡಿದ್ದು, ಗುರು ಕಂಪ್ಯೂಟರ್ಸ್‍ನ ಪೂಜಾ ಮತ್ತು ಮೃತ್ಯುಂಜಯ ಬಾಬು ಹಾಗು ಕುಟುಂಬದ ಸದಸ್ಯರು, ಜೆ.ಬಿ. ಹಳ್ಳಿ ಜುನ್ನಾ ಅಮೃತ, ಜುನ್ನಾ ಬಸವರೆಡ್ಡಿ ಮತ್ತು ಕುಟುಂಬದ ಸದಸ್ಯರು, ಬಳ್ಳಾರಿಯ ಡಿ. ರಾಜೇಶ್ವರಿ ಮತ್ತು ಡಿ. ನಾಗರಾಜ್ ಕುಟುಂಬದ ಸದಸ್ಯರು, ವೈ, ಕಗ್ಗಲ್ ಗ್ರಾಮದ ಅಶೋಕ್ ಸಿದ್ಧಾಪುರ ಮಠದ ಜಗದೀಶ್ವರಸ್ವಾಮಿ ಹಾಗೂ ಶಾರದ ಯಶೋದ ಕುಟುಂಬದ ಸದಸ್ಯರು, ಬಳ್ಳಾರಿಯ ಪಿ. ಚನ್ನವೀರಗೌಡ ಮತ್ತು ಕುಟುಂಬದ ಸದಸ್ಯರು, ಭ್ರಮರಾಂಭ ಮೋಟಾರ್ಸ್‍ನ ಎ. ನೀಲಾವತಿ ಮತ್ತು ಎ. ಚನ್ನಬಸಪ್ಪ ಮತ್ತು ಕುಟುಂಬದ ಸದಸ್ಯರು, ಎಚ್. ಕಿರಣ, ಎಚ್.ಎನ್. ಗಿರೀಶ ಹಾಗೂ ಡಾ. ಎಚ್. ಎನ್. ಶಿವಶರಣ ಮತ್ತು ಕುಟುಂಬದ ಸದಸ್ಯರು, ಲಲಿತಮ್ಮ ಮತ್ತು ಜಡೆ ಪ್ರಕಾಶ್ ಹಾಗೂ ಕುಟುಂಬದ ಸದಸ್ಯರು ಶ್ರೀಗಳ ತುಲಾಬಾರ ನೆರವೇರಿಸಲಿದ್ದಾರೆ.
ಬೆಟದೂರುನ ಪ್ರಭುಲಿಂಗೇಶ್ವರ ಮಠದ ಮಹಾದೇವ ಸ್ವಾಮೀಜಿಗಳು ಉಪನ್ಯಾಸ ನೀಡಲಿದ್ದಾರೆ. ಸಿದ್ಧಾಪುರದ ಶಿವಲಿಂಗಯ್ಯ ಶಾಸ್ತ್ರಿಗಳು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಶಂಕ್ರಯ್ಯ ಆರ್. ಗುರುಮಠ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಕೆ.ಬಿ. ಸಿದ್ಧಲಿಂಗಪ್ಪ ಅವರು ಕಾರ್ಯಕ್ರಮದ ನಿರೂಪಣೆ, ಶಿವಶಾಂತವೀರ ಶರಣರು ಸಾನಿಧ್ಯವಹಿಸಲಿದ್ದಾರೆ ಎಂದು ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 Comments