Ticker

6/recent/ticker-posts

Ad Code

Responsive Advertisement

ಆರ್‌ಟಿ.ಐ (R.T.I) ಅಡಿಯಲ್ಲಿ ಸ್ಪಷ್ಟಿಕರಣಗಳು

ಬೆಂಗಳೂರು, ಮೇ 09, (ಕರ್ನಾಟಕ ವಾರ್ತೆ) : ಮಾಹಿತಿ ಹಕ್ಕು ಕಾಯ್ದೆಯನ್ನು ಸರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರಿಗೆ ಮತ್ತು ಮಾಹಿತಿ ಅಧಿಕಾರಿಗಳಿಗೆ ಸುಲಭವಾಗಲು ರಾಜ್ಯ ಮಾಹಿತಿ ಆಯೋಗವು ಒಂದಷ್ಟು ಸ್ಪಷ್ಟಿಕರಣಗಳನ್ನು ಪ್ರಚಾರ ಮಾಡಲು ನಿರ್ಧರಿಸಿದೆ. ಸಷ್ಟಿಕರಣಗಳು ಈ ಕೆಳಗಿನಂತಿವೆ.

* ಕಲಂ 6(2)ರ ಪ್ರಕಾರ, ಅರ್ಜಿದಾರರು ಮಾಹಿತಿ ಕೇಳಲು ಯಾವುದೇ ಕಾರಣ, ನೀಡಬೇಕಂತಿಲ್ಲ. ಆದ್ದರಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕಾರಣ ಕೇಳುವಂತಿಲ್ಲ.

* ನಿಯಮ 14ರ ಪ್ರಕಾರ ಒಂದು ಅರ್ಜಿಯಲ್ಲಿ ಒಂದೇ ವಿಷಯಕ್ಕೆ ಸಂಬಂಧಪಟ್ಟಂತಹ ಮಾಹಿತಿ ಕೇಳಲು ಅವಕಾಶವಿರುತ್ತದೆ. ಒಂದಕ್ಕಿಂತ ಹೆಚ್ಚಿನ ವಿಷಯದ ಬಗ್ಗೆ ಮಾಹಿತಿ ಬೇಕಾಗಿದ್ದಲ್ಲಿ ಬೇರೆ ಬೇರೆ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.

* ಒಬ್ಬ ವ್ಯಕ್ತಿಯು ಮೂರೇ ಮಾಹಿತಿಗಳನ್ನು ಕೇಳುವ ಅವಕಾಶ ಇರುವುದೆಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಇದೆಯೆಂದು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಪ್ಪಾದ ಹಿಂಬರಹ ನೀಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಅಂತಹ ಯಾವುದೇ ತೀರ್ಪು ಇರುವುದಿಲ್ಲ. ಇನ್ನೂ ಮುಂದೆ ಅಧಿಕಾರಿಗಳು ಇಂತಹ ತಪ್ಪು ಹಿಂಬರಹ ನೀಡಿದ್ದಲ್ಲಿ ದಂಡಕ್ಕೆ ಅರ್ಹರಾಗಬಹುದೆಂದು ಆಯೋಗ ಸಷ್ಟೀಕರಿಸಿದೆ.

* ಸರ್ಕಾರದ / ಸಾರ್ವಜನಿಕ ಪ್ರಾಧಿಕಾರಗಳ, ಯಾವುದೇ ಆದೇಶಗಳಿಗೆ, ಸುತ್ತೋಲೆಗಳಿಗೆ, ನಿರ್ದಾರಗಳಿಗೆ ಕಾರಣಗಳನ್ನು ಅಥವಾ ಉದ್ದೇಶಗಳನ್ನು ಕೇಳಲು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅವಕಾಶ ಇರುವುದಿಲ್ಲ.

* ಯಾವುದೇ ಮಾಹಿತಿಯನ್ನು ಅಥವಾ ದಾಖಲೆಯನ್ನು ಈಗಾಗಲೇ ಅಂತರಜಾಲ (ವೆಬ್‌ಸೈಟ್) ದಲ್ಲಿ ಪ್ರಕಟಣೆ ಮಾಡಿದಲ್ಲಿ ಅಂತಹ ಮಾಹಿತಿ ನೇರವಾಗಿ ನೀಡಬೇಂಕತ್ತಿಲ್ಲ. ಆದರೆ, ಅರ್ಜಿದಾರರಿಗೆ ನಿಗಧಿತ ಸಮಯದಲ್ಲಿ ಈ ವಿಷಯ ತಿಳಿಸುತ್ತಾ ಅಂತರಜಾಲದ ವಿಳಾಸವನ್ನು ನೀಡಬೇಕಾಗುತ್ತದೆ.

* ಅರ್ಜಿದಾರರು ಬೇರೆ ಬೇರೆ ಜಿಲ್ಲೆಗಳ ಮತ್ತು ತಾಲ್ಲೂಕುಗಳ ಮಾಹಿತಿಗಳನ್ನು ಮುಖ್ಯ ಕಛೇರಿಗೆ ಅರ್ಜಿ ಸಲ್ಲಿಸಿ ಕೇಳಿದಾಗ ಒಂದು ವೇಳೆ ಅಂಥಹ ಮಾಹಿತಿ ಮುಖ್ಯ ಕಛೇರಿಯಲ್ಲಿ ಇಲ್ಲದಿದ್ದಾಗ, ಆ ಅರ್ಜಿಯನ್ನು ಎಲ್ಲಾ ಕಛೇರಿಗಳಿಗೆ ವರ್ಗಾಹಿಸಬೇಕಂತಿಲ್ಲ ಹಾಗೂ ಎಲ್ಲಾ ಕಛೇರಿಗಳಿಂದ ಮಾಹಿತಿ ತರಿಸಿ ಕ್ರೂಢಿಕರಿಸಿ ನೀಡಬೇಕಂತಿಲ್ಲ. ಆದರೆ, ಅರ್ಜಿದಾರರಿಗೆ ಮಾಹಿತಿ ಅವರಲ್ಲಿ ಲಭ್ಯವಿಲ್ಲವೆಂದು ತಿಳಿಸುತ್ತಾ ಬೇರೆ ಬೇರೆ ಜಿಲ್ಲೆಗಳ ತಾಲ್ಲೂಕುಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುವೆಂದು ಹಿಂಬರಹ ನೀಡಬೇಕಾಗುತ್ತದೆ.

* ಎಲ್ಲಾ ಸಾರ್ವಜನಿಕ ಪ್ರಾಧಿಕಾರಿಗಳು ತಮ್ಮ ಇಲಾಖೆಯಲ್ಲಿ ನೇಮಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿಗಳ ಪಟ್ಟಿಯನ್ನು ಅಂತರಜಾಲದಲ್ಲಿ ಹಾಗೂ ಸೂಚನಾ ಫಲಕಗಳಲ್ಲಿ ತಿಳಿಸತಕ್ಕದ್ದು.

* ಕಲಂ 19(3)ರ ಅಡಿಯಲ್ಲಿ ಸಲ್ಲಿಸಿದ ಆಫೀಲಿನಲ್ಲಿ ಮಾತ್ರ ನಷ್ಟ ಪರಿಹಾರ ಕೇಳಲು ಅವಕಾಶವಿದೆ. ಆದರೆ, ಕಲಂ: 18(1)ರ ಅಡಿಯಲ್ಲಿ ದೂರು ಅರ್ಜಿಯಲ್ಲಿ ನಷ್ಟ ಪರಿಹಾರ ಕೇಳಲು ಅವಕಾಶವಿರುವುದಿಲ್ಲ.

* ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡಲು ಮೇಲಾಧಿಕಾರಿಗಳಿಂದ ಅಥವಾ ಮುಖ್ಯ ಕಛೇರಿಯಿಂದ ಅನುಮತಿ ಪಡೆಯಬೇಕಂತಿಲ್ಲ.

ಮಾಹಿತಿ ಕೇಳಲು ನಾಗರೀಕರಿಗೆ ಮಾತ್ರ ಅವಕಾಶವಿರುವುದರಿಂದ, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು, ನಿರ್ದೇಶಕರು ಮತ್ತು ಇತರ ಪದಾಧಿಕಾರಿಗಳ ಮಾಹಿತಿ ಕೇಳಲು ಅವಕಾಶವಿಲ್ಲ. ಏಕೆಂದರೆ ಪದಾಧಿಕಾರಿಗಳು ನಾಗರೀಕರಾಗುವುದಿಲ್ಲ. ಆದರೆ, ಒಂದು ವೇಳೆ ಪದಾಧಿಕಾರಿಗಳು ತಮ್ಮ ಪದಾಧಿಕಾರದ ಮೇಲೆ ತಮ್ಮ ಹೆಸರುಗಳನ್ನು ಉಲ್ಲೇಖಿಸಿದ್ದರೆ ಮಾಹಿತಿ ನೀಡಬೇಕಾಗುತ್ತದೆ.

* ಒಂದಷ್ಟು ಅಧಿಕಾರಿಗಳು ಕಡತಗಳು ಸಿಕ್ಕಿಲ್ಲ, ಕಡತಗಳು, ಇಲ್ಲ ಎಂಬ ಕಾರಣ ತಿಳಿಸಿ  ಮಾಹಿತಿಗಳನ್ನು ನಿರಾಕರಿಸುವುದು ಆಯೋಗದ ಗಮನಕ್ಕೆ ಬರುತ್ತಿದೆ.ಆದರೆ ಅಂತಹ ಕಡತಗಳು  Kamataka Public Record Actಪ್ರಕಾರ ಕಾಯ್ದಿಡಬೇಕಾದ ಕಡತಗಳಾಗಿದ್ದರೆ, ಅಂತಹ ಕಡತಗಳನ್ನು ಹುಡುಕಿ ಮಾಹಿತಿ ನೀಡಬೇಕು. ಇಲ್ಲದಿದ್ದರೆ ದಂಡಕ್ಕೆ ಅರ್ಹರಾಗುವ ಸಂದರ್ಭ ಉಂಟಾಗುತ್ತದೆ.

* ಮಾಹಿತಿ ಆಯೋಗವು ಅಪೀಲುಗಳಲ್ಲಿ ಅಥವಾ ದೂರುಗಳಲ್ಲಿ ತನ್ನ ಆದೇಶಗಳನ್ನು ಹೊರಡಿಸಿದ ನಂತರ ಮತ್ತೆ ಪರಿಷ್ಕರಣೆ ಆದೇಶ ((Revision Order) ಅಥವಾ ಸಮೀಕ್ಷೆ (Review) ಮಾಡಲು ಅವಕಾಶ ಇರುವುದಿಲ್ಲ. ಆದರೆ, ಆದೇಶಗಳಲ್ಲಿ ಮುದ್ರಣ ದೋಷಗಳಿದ್ದರೆ, ಅಥವಾ ಈಗಾಗಲೇ ಸಲ್ಲಿಸಿದ ಯಾವುದೇ ವಿಷಯವನ್ನು / ದಾಖಲೆಯನ್ನು ಆದೇಶದಲ್ಲಿ ತೆಗೆದುಕೊಂಡಿಲ್ಲವಾದರೆ ಅಂತಹ ಆದೇಶವನ್ನು ತಿದ್ದುಪಡಿ ಮಾತ್ರ ಮಾಡಲು ಅವಕಾಶವಿರುತ್ತದೆ.

* ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿ ಇರುವುದನ್ನು ಸಾಬೀತು ಪಡಿಸದೇ ಇದ್ದಾಗ ಒಂದಷ್ಟು ಕೆಳಗೆ ಕಾಣಿಸಿದ  ಮೂರನೇ ವ್ಯಕ್ತಿಯ ಮಾಹಿತಿಗಳನ್ನು ನೀಡುವದರಿಂದ ವಿನಾಯಿತಿ ಇರುತ್ತದೆ.

.         ಅಧಿಕಾರಿ/ಸಿಬ್ಬಂದಿಗಳ ಆಸ್ತಿಗಳು ಹಾಗೂ ಹೊಣೆಗಾರಿಕೆಗಳು,

·         ಸಂಬಳ ಚೀಟಿಗಳು (ಆದರೆ ಸಂಬಳ ಶ್ರೇಣಿಯನ್ನು ನೀಡಬೇಕು).

·          ಬ್ಯಾಂಕ್ ಖಾತೆಗಳು,

·         ವಾರ್ಷಿಕ ಗೌಪ್ಯ ವರದಿಗಳು

·          ಸೇವಾ ಪುಸ್ತಕಗಳು / ದಾಖಲೆಗಳು,

·         ಆದಾಯ ತೆರಿಗೆ / ಜಿಎಸ್‌ಟಿ / ವಾಣಿಜ್ಯ ತೆರಿಗೆ ಹಾಗೂ ಇನ್ನಿತರ ತೆರಿಗೆಗಳ ರಿರ್ಟನ್ ಗಳು

·         ಆರೋಗ್ಯ ದಾಖಲೆಗಳು

·         ಚಿತ್ರಕಥೆ ಹಾಗೂ ಪ್ರಬಂಧ ಥೀಸಿಸ್ ಗಳು

·         ಇತರ ವೈಯಕ್ತಿಕ ಮಾಹಿತಿಗಳು,

* ಮಾಹಿತಿ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಸೂಚಿಸಿದೆ ವೇಳಾ ಪಟ್ಟಿ

*  ಮಾಹಿತಿ ನೀಡಲು -ಆರ್ಜಿ ತಲುಪಿದ 30 ದಿನಗಳಲ್ಲಿ

* ಮೂರನೇ ವ್ಯಕ್ತಿಯ ಮಾಹಿತಿಯಾಗಿದ್ದರೆ - ಅರ್ಜಿ ತಲುಪಿದ 40 ದಿನಗಳಲ್ಲಿ,

* ಅರ್ಜಿದಾರರ ಜೀವ ಅಥವಾ ಸ್ವಾಂತತ್ರಕ್ಕೆ ಸಂಬಂಧಿಸಿದ ಮಾಹಿತಿಯಾಗಿದ್ದರೆ – ಅರ್ಜಿ ತಲುಪಿದ  48 ಘಂಟೆಗಳಲ್ಲಿ

* ಅರ್ಜಿಯನ್ನು ಕಲಂ 6 (3)ರ ಅಡಿಯಲ್ಲಿ ವರ್ಗಾಹಿಸಲು - ಅರ್ಜಿ ತಲುಪಿದ 05 ದಿನಗಳಲ್ಲಿ

*  ಮೂರನೆ ವ್ಯಕ್ತಿಗೆ ನೋಟಿಸ್‌ ನೀಡಲು-ಅರ್ಜಿ ತಲುಪಿದ 05 ದಿನಗಳಲ್ಲಿ

* ಮೂರನೆ ವ್ಯಕ್ತಿಯು ನೋಟಿಗೆ ಉತ್ತರಿಸಲು-ನೋಟೀಸ್ ತಲುಪಿದ 10 ದಿನಗಳಲ್ಲಿ

* ಮೊದಲನೇಯ ಅಫೀಲು – ಮಾಹಿತಿ ಅಥವಾ ಹಿಂಬರಹ ತಲುಪಿದ 30 ದಿನದೊಳಗೆ.  ಒಂದು ವೇಳೆ ಮಾಹಿತಿ / ಹಿಂಬರಹ ನೀಡದೇ ಇದ್ದಲ್ಲಿ ಅರ್ಜಿ ಸಲ್ಲಿಸಿ 30 ಹೊರತುಪಡಿಸಿ, ನಂತರ 30 ದಿನಗಳೊಳಗಾಗಿ.

* ಆಯೋಗದ ಮುಂದೆ 2ನೇ ಆಪೀಲು ಸಲ್ಲಿಸಲು - ಮೊದಲನೇ ಅಫೀಲು ಅಧಿಕಾರಿಯ ಆದೇಶ / ಹಿಂಬರಹ ಮುಟ್ಟಿದ ದಿನದಿಂದ 90 ದಿನಗಳೊಳಗಾಗಿ. ಒಂದು ವೇಳೆ ಆದೇಶ/ಹಿಂಬರಹ ನೀಡದಿದ್ದಲ್ಲಿ, ಮೊದಲನೇಯ ಆಪೀಲು ಸಲ್ಲಿಸಿದ ದಿನದಿಂದ 30 ದಿನಗಳ ಹೊರತುಪಡಿಸಿ, ನಂತರ 90 ದಿನಗಳೊಳಗಾಗಿ ಅಂದರೆ 120 ದಿನಗಳೊಳಗಾಗಿ.

ಭ್ರಷ್ಟಚಾರದ  ವಿಷಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ವಿಷಯದ ಬಗ್ಗೆ ಮಾಹಿತಿ ಕೇಂಳಿದಾಗ ಯಾವುದು ಸಾರ್ವಜನಿಕ ಪ್ರಾಧಿಕಾರಕ್ಕೆ ಅಥವಾ ಯಾವುದೂ ಸರ್ಕಾರಿ ಕಛೇರಿಗೆ ಮಾಹಿತಿ ನೀಡುವುದರಿಂದ ವಿನಾಯಿತಿ ಇರುವುದಿಲ್ಲ. ಸಿಬಿಐ, ಸಿಐಡಿ ಮುಂತಾದ ಕಛೇರಿಗಳಿಗೂ ಕೂಡ ಮಾಹಿತಿ ನೀಡಲೇ ಬೇಕಾಗುತ್ತದೆ.

* ಮೂಲ ಅರ್ಜಿಗಳಲ್ಲಿ, ಕೇಳಿದ ಮಾಹಿತಿಯನ್ನು ಹೊರತು ಪಡಿಸಿ ಬೇರೆ ಮಾಹಿತಿ ಅಥವಾ ಹೆಚ್ಚಿನ ಮಾಹಿತಿಗಳನ್ನು ಆಪೀಲುಗಳಲ್ಲಿ ಕೇಳುವಂತಿಲ್ಲ. ಆಪೀಲುಗಳಲ್ಲಿ ಮೂಲ ಮಾಹಿತಿಯನ್ನು ಬದಲು ಮಾಡುವುದು  ಕೂಡ ಅವಕಾಶವಿಲ್ಲ.

* ಅರ್ಜಿದಾರರು ಒಂದೇ  ವಿಷಯದ ಬಗ್ಗೆ ಒಂದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಲು ಹಾಗೂ ಅಪೀಲುದಾರರು ಒಂದೇ ವಿಷಯದ ಬಗ್ಗೆ ಒಂದಕ್ಕಿಂತ ಹೆಚ್ಚಿನ ಅಪೀಲುಗಳನ್ನು ಸಲ್ಲಿಸುವುದಕ್ಕೆ ಅವಕಾಶವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ. ನಂತರ ಸಲ್ಲಿಸಿದ ಅರ್ಜಿಗಳನ್ನು ಹಾಗೂ ಆಫೀಲುಗಳನ್ನು ತಿರಸ್ಕರಿಸಬಹುದಾಗಿರುತ್ತದೆ.

 CLARIFICATIONS UNDER THE R.T.I ACT

Bengaluru, May 09, (Karnataka information) : In the interest of proper Implementation of the Act and in order to be beneficial to the citizens as well as the Public information officers, the State Information Commission has decided to publicise certain clarifications as and when necessary. Few clarifications are here under:

Citizens need not give any reasons for seeking information in terms of sec.6(2) of the Act. P.I.Os should not insist for reasons.

As per Rule -14, in one application information of only one subject could be asked. And if information of several subjects is asked, then P.I.O can give information of any one subject.

Few Public Information Officers (P.I.Os) are issuing wrong endorsements stating that, there is judgment of Supreme Court restricting only 3 applications per person - In fact there is no such judgment. Commission will view such wrong endorsements very seriously, if issued hence forth.

There is no provision under the Act for citizens to ask reasons for any opinion given or circular issued or order passed by the Govt / Departments / Public Authorities.

Information / documents which are already published in websites need not be physically furnished. However the website address should be intimated to the applicant in time.

If information of District offices and Taluk offices are sought from the H.O and if that information is not held & not available in H.O, then the application need not be transferred to all the offices down below and information need not also be collated from all offices. However applicant must be informed in time to seek information from respective offices.

All public Authorities/ Departments shall publicize the list of their designated P.I.Os and First Appellate Authorities(F.A.As) in their websites and their office Notice boards.

The provision to claim Compensation is provided only when an Appeal if filed u/s 19(3), but there is provision to claim Compensation when complaint is filed u/s 18(1).

The P.I.O need not take approval or permission from higher authorities or from H.O for furnishing Information.

Only Citizens of India information cannot can seek information and hence be sought by merely mentioning designations as Chairman, M.D, Director etc, as designations don't become citizens. But if names are also mentioned in the application above their designations, then information is furnishable.

Often P.I.Os are denying information on the pretext of missing records which cannot be accepted, if such missing records were required to be preserved under the Public records Act.

The Applicant cannot file more than one application for one and the same information and the appellant cannot file more than one appeal for one and the same information. If filed, then the subsequent application or Appeal is liable to be rejected.

When once the Information Commission passes it's order on an Appeal or complaint, the Commission cannot review or revise it's own order. It can only rectify the order if there are typographical errors or if any document or fact which is already filed on record was not considered in the order.

Some of the Information of the 3rd party which are exempt  from disclosure, if involvement of larger public interest is not  proved:

·         Assets and Liabilities statements filed by officials

·         salary slips - However the Salary scale can be given

·          Bank accounts details

·              Annual Confidential reports

 


 




Post a Comment

0 Comments

Ad Code

Responsive Advertisement