ಬೆಂಗಳೂರು : ದಲಿತರನ್ನು ಒಗ್ಗೂಡಿಸಿ ಸಬಲಿಕರಣಗೊಳಿಸುವ ಮೂಲಕ ಕಾಂಗ್ರೇಸ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಹಾಗೂ ಪ್ರತಿಯೊಬ್ಬರು ನಾಯಕತ್ವದ ಗುಣ ಅಳವಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಅಧ್ಯಕ್ಷರಾದ ಆರ್ ಧರ್ಮಸೇನ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಇಂದು ತಮ್ಮ ಕಛೇರಿಯಲ್ಲಿ ಭೇಟಿಯಾದ ನಿಯೋಗದೊಂದಿಗೆ ಮಾತನಾಡಿ ಬರುವ ಮುಂದಿನ ಸಾರ್ವತ್ರಿಕ ಚುನಾವಣೆಗೆ ನಮ್ಮ ಪಕ್ಷವು ಅಧಿಕಾರಕ್ಕೆ ಬರಲು ಇಂದಿನಿAದಲೇ ಪ್ರತಿಯೊಬ್ಬರು ಶ್ರಮಪಡಬೇಕು. ಹಾಗೂ ಆಯಾ ವಿಭಾಗವಾರು ಕಾರ್ಯಕರ್ತರು ಬಲಿಷ್ಠವಾಗಬೇಕು ಎಲ್ಲದಕ್ಕೂ ಉತ್ತರ ನೀಡುವಂತಹ ಸಾಮರ್ಥ್ಯವನ್ನು ನಮ್ಮ ಕಾರ್ಯಕರ್ತರು ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಧರ್ಮಸೇನಾ ನುಡಿದರು.
ಸ್ಥಳೀಯ ಮುಖಂಡರನ್ನು ಗಣನೆಗೆ ತೆಗೆದುಕೊಂಡು ಮುಂದಿನ ಭವಿಷ್ಯದ ಬಗ್ಗೆ ಕಾಂಗ್ರೇಸ ಪಕ್ಷವು ಬಲ ಪಡಿಸುವ ನಿಟ್ಟಿನಲ್ಲಿ ಎಲ್ಲರೂ ಸಲಹೆ-ಸೂಚನೆಗಳನ್ನು ನೀಡಲು ಮನವಿ ಮಾಡಿದರು.
ರಾಜ್ಯದಲ್ಲಿ ದುರಾಡಳಿತದಿಂದ ಕೂಡಿದ ಸರ್ಕಾರ ನಡೆಯುತ್ತಿದೆ. ಜನರ ಸಮಸ್ಯೆಗೆ ಬೆಲೆಯಿಲ್ಲ. ರಾಜ್ಯ ಸರ್ಕಾರವು ಕಮೀಷನ ಏಜಂಟಾಗಿ ಕಾರ್ಯನಿರ್ವಹಿಸುತ್ತಿದೆ. ಹಲವು ಪರಿಷ್ಟರ ಅಭಿವೃದ್ದಿಗಾಗಿ ಮೀಸಲಿಟ್ಟ ಹಣವನ್ನು ಇನ್ನೊಂದು ನಿಗಮಕ್ಕೆ ಯೋಜನೆಯ ಹಣವನನು ದುರುಪಯೋಗ ಮಾಡಿರುವ ಸರ್ಕಾರದ ಕ್ರಮವನ್ನು ಧರ್ಮಸೇನಾ ಅವರು ತೀವೃವಾಗಿ ಖಂಡಿಸಿದರು.
ಬೊಮ್ಮಾಯಿ ಸರ್ಕಾರವು ಸಂಪೂರ್ಣ ಅಭಿವೃದ್ದಿಯಲ್ಲಿ ವಿಫಲವಾಗಿದೆ. ಜನರು ಈಗಲಾದರೂ ಎಚ್ಚೆತುಕೊಂಡು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮತವನ್ನು ಚಲಾಯಿಸಿ ನಿಮ್ಮ ಅಭಿವೃದ್ದಿಗಾಗಿ ಹುಟ್ಟಿರುವ ಪಕ್ಷ ನಮ್ಮ ಕಾಂಗ್ರೇಸ ಪಕ್ಷವಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೇಸ ಪಕ್ಷವನ್ನು ಬೆಂಬಲಿಸಿ ರಾಜ್ಯದ ಸರ್ವಾಂಗಿಣ ಅಭಿವೃದ್ದಿಗಾಗಿ ಕಂಕಣ ಕಟ್ಟಿ ಹೆಚ್ಚಿನ ಕಾರ್ಯಕರ್ತರಿಗೆ ಈ ಬಗ್ಗೆ ಮನವರಿಕ್ಕೆ ಮಾಡಿಕೊಟ್ಟು ನಮ್ಮ ಪಕ್ಷದ ಸರ್ವಾಂಗೀಣ ಅಭಿವೃದ್ದಿಯ ಪ್ರಣಾಳಿಕೆಯ ಬಗ್ಗೆ ತಿಳಿಸಿಕೊಡಿ ನಾವು ಕೊಟ್ಟ ಭರವಸೆಯನ್ನು ಹೂಸ್ಸಿ ಹೋಗುವುದಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿ ಶಾಂತಿ ನೆಲೆಸುವ ಸಂಪೂರ್ಣ ಹೊಣ್ಣೆಯನ್ನು ನಮ್ಮ ಪಕ್ಷದ ಅಧಿನಾಯಕರು ನೋಡಿಕೊಳ್ಳುತ್ತಾರೆ ಎಂದು ನುಡಿದರು.
ನನ್ನ ವಿಭಾಗದಲ್ಲಿ 36 ಕ್ಷೇತ್ರ ಗೆಲ್ಲುವ ವಿಶ್ವಾಸ :
ಚುನಾವಣೆಯಲ್ಲಿ 36 ಮೀಸಲಾತಿ ಮತಕ್ಷೇತ್ರಗಳ ಗೆಲುವ ನಮ್ಮ ಉದೇಶ : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಇರುವ ವಿಧಾನ ಸಭೆ ಮತಕ್ಷೇತ್ರವನ್ನು ಗೆಲಿಸುವ ಮೂಲ ಉದ್ದೇಶ ನನ್ನದು ಎಂದು ನುಡಿಯುತ್ತ ಮತಕ್ಷೇತ್ರದ ಮಾಹಿತಿಯನ್ನು ನೀಡಿದರು, ಕರ್ನಾಟಕ ರಾಜ್ಯದ ವಿಧಾನ ಸಭಾ ಕ್ಷೇತ್ರಗಳಲ್ಲಿ "ಪರಿಶಿಷ್ಟ ಜಾತಿ" ಯ ಮೀಸಲು ಕ್ಷೇತ್ರಗಳು :
1) ಸಿ ವಿ ರಾಮನ್ ನಗರ 2) ಪುಲಕೇಶಿನಗರ 3) ಮುಧೋಳ 4) ದೇವನಹಳ್ಳಿ 5) ನೆಲಮಂಗಲ 6) ಆನೇಕಲ್ 7) ಮಹದೇವಪುರ 8) ಕುಡಚಿ 9) ರಾಯಬಾಗ 10) ಹಡಗಲಿ 11) ಹಗರಿಬೊಮ್ಮನಳ್ಳಿ 12) ಔರಾದ್ 13) ನಾಗಠಾಣ 14) ಕೊಳ್ಳೇಗಾಲ 15) ಮೂಡಿಗೆರೆ 16) ಹೊಳಲ್ಕೆರೆ 17) ಸುಳ್ಯ 18) ಮಾಯಕೊಂಡ 19) ಹುಬ್ಬಳ್ಳಿ ಧಾರವಾಡ ಪೂರ್ವ 20) ಶಿರಹಟ್ಟಿ 21) ಚಿಂಚೊಳ್ಳಿ 22) ಚಿತ್ತಾಪುರ 23) ಗುಲ್ಬರ್ಗಾ ಗ್ರಾಮೀಣ 24) ಸಕಲೇಶಪುರ 25) ಹಾವೇರಿ 26) ಬಂಗಾರಪೇಟೆ 27) ಕೆಜಿಎಫ್ 28) ಮುಳಬಾಗಿಲು 29) ಕನಕಗಿರಿ 30) ಮಳವಳ್ಳಿ 31) ನಂಜನಗೂಡು 32) ಟಿ. ನರಸಿಪುರ 33) ಲಿಂಗಸೂಗೂರು 34) ಶಿವಮೊಗ್ಗ ಗ್ರಾಮೀಣ 35) ಕೊರಟಗೆರೆ 36) ಪಾವಗಡ ಹೀಗೆ ಮೀಸಲಾತಿಯ ಮಾಹಿತಿಯನ್ನು ಧರ್ಮಸೇನಾ ಅವರು ನೀಡಿದರು.
ರಾಜ್ಯದ ಪರಿಶಿಷ್ಟರನ್ನು ಒಂದೆಡೆ ಸೇರಿಸುವುದೇ ನನ್ನ ಮೂಲ ಉದ್ದೇಶ –ಧರ್ಮಸೇನ
ಇಡೀ ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತಗಳನ್ನು ಒಂದೆಡೆ ಸೇರಿಸಿ ನಮ್ಮ ಪಕ್ಷದ ಸರ್ವಾಂಗಿಣ ಅಭಿವೃದ್ದಗಾಗಿ ನಾನು ಹಗಲಿರುಳು ಎನ್ನದೇ ಪಕ್ಷದ ಭದ್ರಬುನಾದಿಯನ್ನು ಹಾಕಲು ನನ್ನ ಒಂದು ಕಾರ್ಯ ವ್ಯಾಪ್ತಿಯಲ್ಲಿ ಮುಖಂಡರುಗಳ ಮಾರ್ಗದರ್ಶ್ನಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ, ಸಿದ್ರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಮುನ್ನಿಯಪ್ಪ, ಡಾ ಪರಮೇಶ್ವರ, ಬಿ.ಕೆ. ಹರಿಪ್ರಸಾದ, ಧ್ರುವನಾರಾಯಣ, ಮತ್ತು ರಾಜೇಶ ಲಿಲ್ಲೋಟಿಯಾ, ಮತ್ತು ಎಐಸಿಸಿ ರಾಜು ಕೇ, ರಾಜ್ಯದ ಇನ್ನೂಳಿದ ವರಿಷ್ಠರೊಂದಿಗೆ ಚರ್ಚೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ನನ್ನ ಕಾರ್ಯಚರಣೆ ಆರಂಭಿಸುವೆ ಎಂದು ನೂತನವಾಗಿ ಕೆಪಿಸಿಸಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ಆರ್ ಧರ್ಮಸೇನಾ ಅವರು ಮಾಧ್ಯಮದೊಂದಿಗೆ ಮಾತನಾಡುತ್ತ ತಿಳಿಸಿದರು.
ಧರ್ಮಸೇನ ಅವರಿಗೆ ಆತ್ಮೀಯ ಅಭಿನಂದನೆ
ಬೆAಗಳೂರು : ಇತ್ತಿಚೆಗೆ ನೂತನವಾಗಿ ಕೆಪಿಸಿಸಿ ಪರಿಶಿಷ್ಟ ವಿಭಾಗದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಆರ್ ಧರ್ಮಸೇನ ಅವರಿಗೆ ಸಮುದಾಯದ ನಾಯಕರು ಇಂದು ಕಾಂಗ್ರೇಸ ಭವನದಲ್ಲಿ ಆತ್ಮೀಯ ಅಭಿನಂದನೆ ಸಲ್ಲಿಸಿದರು. ಬೆಂಗಳೂರು ಕಾಂಗ್ರೇಸ ಪಕ್ಷದ ಅನೇಕ ಹಿರಿಯ ಮುಖಂಡರಾದ ಪುರುಶೋತ್ತಮ ದಾಸಪ್ಪ, ಬಸವಲಿಂಗಪ್ಪ ಮುದ್ದಣಾ, ನಂಜಪ್ಪ, ಸವಿತ್ತಾ, ರಂಗನಾಥ, ತಿಮ್ಮರಾಜ, ಕೌಡಲೇರವಿ, ಗೌರಮ್ಮ, ಕನಕರಾಜ ನೆಲಮಂಗಲ, ನಾಗರತ್ನಮ, ಕಾಳಯ್ಯ ರಾಜ್ಯ ಸಂಚಾಲಕರು ಪರಿಶಿಷ್ಟ ವಿಭಾಗ, ಸಂತೋಷಕುಮಾರ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ, ಕೋಗಿಲ್ಲು ವೆಂಕಟೇಶ, ಮಂಡ್ಯ ಜಿಲ್ಲಾ ಅಧ್ಯಕ್ಷ ಸುರೇಶ ಕಂಟಿ ರಾಮಣ್ಣ, ಪನೀರಸೇಲ್ವಂ, ಹೀಗೆ ಅನೇಕ ಮುಖಂಡರು ಹಾಜರಿದ್ದರು,


0 Comments