Ticker

6/recent/ticker-posts

Ad Code

Responsive Advertisement

CM confers Florence Nightingale Award to Nurse Bhargavi VA

Chief Minister Mr Basavaraj Bommai has conferred the Florence Nightingale (2020-21) Best Nurse award to Ms Bharagavi VA of NU Hospitals, Padmanabhanagar. Acknowledging the importance of the Nursing profession in Health services, Bommai said, "Nurses need to have the knowledge of all aspects of modern medicine and also the expertise to use modern medical equipment. The Government and private hospitals need to work in tandem to provide good medical care for the people. The State government would identify Nurses who are rendering good service and honour them."




*ನರ್ಸ್ ಭಾರ್ಗವಿ ವಿಎ ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ*

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫ್ಲಾರೆನ್ಸ್ ನೈಟಿಂಗೇಲ್ (2020-21) ಅತ್ಯುತ್ತಮ ನರ್ಸ್ ಪ್ರಶಸ್ತಿಯನ್ನು ಪದ್ಮನಾಭನಗರದ ಎನ್‌ಯು ಆಸ್ಪತ್ರೆಯ ಭಾರ್ಗವಿ ವಿ. ಎ. ಅವರಿಗೆ ಪ್ರದಾನ ಮಾಡಿದರು. ಆರೋಗ್ಯ ಸೇವೆಯಲ್ಲಿ ಶುಶ್ರೂಷಕ ವೃತ್ತಿಯ ಪ್ರಾಮುಖ್ಯತೆಯನ್ನು ಶ್ಲಾಘಿಸಿದ ಬೊಮ್ಮಾಯಿ, ''ಶುಶ್ರೂಷಕರು ಆಧುನಿಕ ವೈದ್ಯಶಾಸ್ತ್ರದ ಎಲ್ಲಾ ಅಂಶಗಳ ಜ್ಞಾನವನ್ನು ಹೊಂದಿರಬೇಕು ಮತ್ತು ಆಧುನಿಕ ವೈದ್ಯಕೀಯ ಉಪಕರಣಗಳನ್ನು ಬಳಸುವ ಪರಿಣತಿಯನ್ನು ಹೊಂದಿರಬೇಕು. ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ರಾಜ್ಯ ಸರ್ಕಾರ ಗುರುತಿಸಿ ಗೌರವಿಸುತ್ತದೆ" ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಂಗ್ಲೋ ಇಂಡಿಯನ್ ಯೂನಿಟಿ ಸೆಂಟರ್ ಗುರುವಾರ ಆಯೋಜಿಸಿದ್ದ 2020-21ನೇ ಸಾಲಿನ ‘ಫ್ಲಾರೆನ್ಸ್ ನೈಟಿಂಗೇಲ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ "ಉದಾತ್ತ ಕಾರ್ಯದಲ್ಲಿ ತೊಡಗಿರುವವರು ಶುಶ್ರೂಷಕರು. ವೃತ್ತಿಯು ದೇವರ ಸಂದೇಶವಾಹಕರಂತೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಗೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ" ಎಂದು ಹೇಳಿದರು.



Post a Comment

0 Comments

Ad Code

Responsive Advertisement