Ticker

6/recent/ticker-posts

Ad Code

Responsive Advertisement

ಕಾಲೇಜುಗಳಿಗೆ ದಾಖಲಾತಿ ಮುನ್ನ ಮಾನ್ಯತೆ ಪಡೆದಿದೆಯೇ ಖಚಿತಪಡಿಸಿಕೊಳ್ಳಿ

ಬಳ್ಳಾರಿ,ಮೇ 13: ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿರುವ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರವೇಶ ದಾಖಲಾತಿ ಮಾಡುವುದಕ್ಕಿಂತ ಮುಂಚೆ ಆಯಾ ಕಾಲೇಜುಗಳು ಅಸ್ತಿತ್ವದಲ್ಲಿರುತ್ತದೆಯೇ ಅಥವಾ ಮಾನ್ಯತೆ ಪಡೆದಿದೆಯೇ ಎಂಬುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಖಚಿತಪಡಿಸಿಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ರಾಜು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜುಗಳ ಮಾನ್ಯತೆ ಮತ್ತು ಅಸ್ತಿತ್ವ ಖಚಿತಪಡಿಸಿಕೊಂಡ ನಂತರವೇ ದಾಖಲಾತಿ ಪಡೆದುಕೊಳ್ಳಬೇಕು. ಕರ್ನಾಟಕ ಹೈಕೋರ್ಟ್‍ನ ಧಾರವಾಡ ಪೀಠ ಈ ವಿಷಯದಲ್ಲಿ ಇತ್ತೀಚೆಗೆ ಸ್ಪಷ್ಟ ಆದೇಶ ನೀಡಿದ್ದು, ಇದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಗಮನಿಸಿ ದಾಖಲಾತಿ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement