ಹಳೇ ತಾಲೂಕು ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ
ಹೊಸಪೇಟೆ(ವಿಜಯನಗರ),ಮೇ 21: ಅಗ್ನಿ ಅವಘಡದಿಂದ ಸುಟ್ಟುಹೋಗಿದ್ದ ಹಳೆ ತಾಲೂಕು ಕಚೇರಿ ಕಟ್ಟಡದ ನವೀಕರಣ ಕಾಮಗಾರಿ ಚಾಲ್ತಿಯಲ್ಲಿದ್ದು, ಶನಿವಾರದಂದು ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಅವರಿಂದ ಕಟ್ಟಡ ನವೀಕರಣದ ಕುರಿತು ಮಾಹಿತಿ ಪಡೆದರು.
ತಾಲೂಕು ಕಚೇರಿ ಆವರಣದಲ್ಲಿರುವ ಎಲ್ಲ ಕಟ್ಟಡಗಳನ್ನು ಪರಿಶೀಲಿಸಿದ ಸಚಿವ ಆನಂದಸಿಂಗ್ ಅವರು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ನ ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣ್ ರಾವ್ ಮತ್ತು ತಹಶೀಲ್ದಾರ ವಿಶ್ವಜೀತ ಮೇಹತ ಹಾಗೂ ಇತರರು ಇದ್ದರು.

0 Comments