ಬಳ್ಳಾರಿ ಏ 22. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕು ಸಿದ್ದಮ್ಮನಹಳ್ಳಿ ನಿವಾಸಿಗಳಾದ ಬಸವರಾಜ್ ಮತ್ತು ಜ್ಯೋತಿ ದಂಪತಿಯ ಪುತ್ರ ಸೋಮೇಶ್ 4 ವರ್ಷದ ಬಾಲಕ ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಮನೆ ಸಮೀಪದ ಕೊಳಚೆ ನೀರಿನ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಕೆ.ವೀರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಏಪ್ರಿಲ್ 16 ಶನಿವಾರ ರಂದು ನಡೆದ ಪ್ಯಾಟೆ ಬಸವೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರ ಮನೆಗೆ ಬಂದಿದ್ದರು ಬೇರೊಂದು ಕಾರ್ಯಕ್ರಮ ನಿಮಿತ್ತ ಗ್ರಾಮದಲ್ಲಿ ತಂಗಿದ್ದರು. ಬೆಳಿಗ್ಗೆ ಆಟ ಆಡಲು ಹೋದಾಗ ಈ ಘಟನೆ ಸಂಭವಿಸಿದೆ. ಈ ವಿಷಯವನ್ನು ತಿಳಿದ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ಅವರು ಸಂತಾಪ ಸೂಚಿಸಿದರು. ನಂತರ ಅಧಿಕಾರಿಗಳ ಜೊತೆ ಮಾತನಾಡಿದ ಅವರು ತಮ್ಮ ಆಪ್ತರಾದ ಬಿ.ದುರುಗಣ್ಣ ದೂರವಾಣಿಯ ಮೂಲಕ ಕರೆ ಮಾಡಿ ಅವರ ಮನೆ ಕಳುಹಿಸಿ ಸಾಂತ್ವನವನ್ನು ಹೇಳಿ ಧನ ಸಹಾಯವನ್ನು ಮಾಡಿ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಇಂದ್ರನಾಥ ರೆಡ್ಡಿ, ಗ್ರಾಮದ ಮುಖಂಡರಾದ ರಂಗನಾಥ್, ಡಿ.ಎನ್.ನಾಗರಾಜ್, ಹಾಗೂ ಸಂಬಂಧಿಕರು ಗ್ರಾಮಸ್ಥರು ಉಪಸ್ಥಿತರಿದ್ದರು.

0 Comments