ಬಳ್ಳಾರಿ ಏ 22. ಬಳ್ಳಾರಿ ನಗರ ನಗರಾಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶನ ಸದಸ್ಯರಾಗಿ ರಾಮಂಜಿನಿ,ಜ್ಯೋತಿ ಪ್ರಕಾಶ್,ಗಾಳಿ ಶಂಕರಪ್ಪ,ನರಸಪ್ಪನವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ನೇಮಕಮಾಡಲು ಸಹಕರಿಸಿದ ಎಲ್ಲಾ ಗಣ್ಯರಿಗೂ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ನನ್ನಿಂದ ಸಾಧ್ಯವಾದಷ್ಟು ತನು-ಮನ-ದೊಂದಿಗೆ ನಗರದ ಅಭವೃದ್ಧಿಗೆ ಸಲಹೆ , ಸೂಚನೆ ಮತ್ತು ಶ್ರಮಿಸುತ್ತೇನೆ ಎಂದು ರಾಮಂಜಿನಿ ಮತ್ತು ಜ್ಯೋತಿ ಪ್ರಕಾಶ್ ಅವರು ತಿಳಿಸಿದ್ದಾರೆ.
ನಮ್ಮ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ನೀಡಿದ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿ ಶ್ರೀರಾಮುಲು ರವರಿಗೆ, ನಗರಾಭಿವೃದ್ಧಿ ಸಚಿವರು ಬೈರತಿ ಬಸವರಾಜ್ ರವರಿಗೆ ಜಿಲ್ಲಾ ಸಂಸದರು ವೈ.ದೇವೇಂದ್ರಪ್ಪ ರವರಿಗೆ ,ಶಾಸಕರಾದ ಜಿ .ಸೋಮಶೇಖರ್ ರೆಡ್ಡಿ ರವರಿಗೆ, ವಿಧಾನ ಪರಿಷತ್ ಸದಸ್ಯರು ವೈ.ಎಂ. ಸತೀಶ್ ರವರಿಗೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅದ್ಯಕ್ಷರು ಪಿ. ಪಾಲನ್ನ ರವರಿಗೂ, ಬಳ್ಳಾರಿ ನಗರದ ಭಾಜಪ ಅಧ್ಯಕ್ಷರು ಕೆ.ಬಿ. ವೆಂಕಟೇಶ್ ರವರಿಗೆ ಹಾಗು ಕೋರ್ ಕಮಿಟಿಯ ಸದಸ್ಯರಿಗೂ, ಅನಿಲ್ ಕುಮಾರ್ ಮೋಕ ರವರಿಗೂ, ಮಾಜಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳು ಟಿ.ಶ್ರೀನಿವಾಸ್ ಮೌತ್ಕರ್ ರವರಿಗೆ, ಜಿಲ್ಲಾ ಉಪದ್ಯಕ್ಷರು ಶಾಸಕ ಆಪ್ತರು ಜಿ.ವಿರಾಶೇಕರ್ ರೆಡ್ಡಿ ರವರಿಗೂ,ಕೆ. ಎಸ್. ಅಶೋಕ್ ಕುಮಾರ್ ರವರಿಗೂ ರಾಜ್ಯ ಮುಖಂಡರಿಗೂ ಜಿಲ್ಲಾ ಮುಖಂಡರಿಗೂ ಪ್ರಕ್ಯಕವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ಮುಖಂಡರಿಗೂ ಅನಂತ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಶಾಸಕ ಸೋಮಶೇಖರ ರೆಡ್ಡಿಯವರನ್ನು ಸನ್ಮಾನಿಸಿದರು.

0 Comments