Ticker

6/recent/ticker-posts

Ad Code

Responsive Advertisement

ಹೋಮ್ ಕೇರ್ ವಿಭಾಗಕ್ಕೆ ಹಿಮಾಲಯ ಬ್ರಾಂಡ್ ಪ್ರವೇಶ

ಬಳ್ಳಾರಿ  ಮೇ 16. ಭಾರತದ ಪ್ರಮುಖ ವೆಲ್‍ನೆಸ್ ಬ್ರಾಂಡ್‍ಗಳಲ್ಲಿ ಒಂದಾದ ಹಿಮಾಲಯ ವೆಲ್‍ನೆಸ್ ಕಂಪನಿ ತನ್ನ ಹೊಸ ಪ್ಯೂರ್ ಹೋಮ್ಸ್ ಸ್ಯಾನಿಟೈಸಿಂಗ್ ಫ್ಲೋರ್ ಕ್ಲೀನರ್ ಪರಿಚಯಿಸುವ ಮೂಲಕ ಹೊಸ ಅಭಿಯಾನ ಪ್ರಾರಂಭಿಸಿದೆ. ಪ್ರತಿ ಮನೆಯಲ್ಲೂ ಸೂಕ್ಷ್ಮಾಣು-ಮುಕ್ತ ಸುರಕ್ಷಿತ ಫ್ಲೋರ್   ಒದಗಿಸುವ ಮೂಲಕ ಹಿಮಾಲಯ ಹೊಸ ಪರಿಚಯದೊಂದಿಗೆ ಹೋಮ್ ಕೇರ್ ವಿಭಾಗಕ್ಕೆ ಪ್ರವೇಶಿಸಿದೆ. ಪ್ಯೂರ್ ಹೋಮ್ಸ್ ಸ್ಯಾನಿಟೈಸಿಂಗ್ ಫ್ಲೋರ್ ಕ್ಲೀನರ್ 99.99% ಸೂಕ್ಷ್ಮಾಣುಗಳನ್ನು ತೊಡೆದುಹಾಕುವಲ್ಲಿ ಪೂರಕವಾಗಿದ್ದು, ಮಕ್ಕಳು ಹಾಗೂ ಸಾಕುಪ್ರಾಣಿಗಳಿಗೆ ಸುರಕ್ಷಿತ್ ಫ್ಲೋರ್  ಒದಗಿಸಲಿದೆ. "ಹೋಮ್ ಪ್ಯೂರ್, ಆಪ್ ಶ್ಯೂರ್" ಎಂಬ ಅಡಿಬರಹದ ಮೂಲಕ ಹಿಮಾಲಯ ಫ್ಲೋರ್ ಕ್ಲಿನೀಂಗ್ ಉತ್ಪನ್ನವನ್ನು ಪರಿಚಯಸಿದೆ. ಹಿಮಾಲಯ ಗ್ರಾಹಕರ ಚಿಂತೆಗೆ ಪರಿಹಾರ ಕಂಡುಕೊಂಡಿದ್ದು, ಮಕ್ಕಳು ಮತ್ತು ಸಾಕು ಪ್ರಾಣಿಗಳನ್ನು ದೃಷ್ಟಿಕೋನದಲ್ಲಿರಿಸಿಕೊಂಡು ಅತ್ಯುತ್ತಮ ಜಾಹಿರಾತಿನ ಮೂಲಕ ಗ್ರಾಹಕರಿಗೆ ನೈಸರ್ಗಿಕ ಫ್ಲೋರ್ ಕ್ಲೀನರನ್ನು ಪರಿಚಯಿಸುವಲ್ಲಿ ಪ್ರಯತ್ನಿಸಿದೆ. "ಸಾಂಕ್ರಾಮಿಕ ರೋಗದ ಪರಿಣಾಮವಾಗಿ ವೈಯಕ್ತಿಕ ಹಾಗೂ ಮನೆಯ ನೈರ್ಮಲ್ಯದತ್ತ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿರುವುದು ಗಮನಾರ್ಹ. ಈ ಹಿನ್ನೆಲೆ ನೈಸರ್ಗಿಕ ಪ್ಯೂರ್ ಹೋಮ್ಸ್ ಸ್ಯಾನಿಟೈಸಿಂಗ್ ಫ್ಲೋರ್ ಕ್ಲೀನರ್‍ಗಳು ಸೂಕ್ಷ್ಮಾಣುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವನ್ನು ಹುಡುಕುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂದು ರ್ಫಾಜ್ ರುಮಾನೆ ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.

ಹಿಮಾಲಯಾ ಫ್ಲೋರ್  ಕ್ಲೀನರ್ ತಾಯಂದಿರ ಚಿಂತೆಗೆ ಫುಲ್ ಸ್ಟಾಪ್ ನೀಡಲಿದೆ. ಅವರ ಕಾಳಜಿಗೆ ಪರಿಹಾರವಿದೆ ಎಂದು ಹೇಳುವ ಅವಕಾಶವನ್ನು ಹಿಮಾಲಯ ಪಡೆದುಕೊಂಡಿದೆ. ನಮ್ಮ ಕ್ಲೀನರ್ ಸೂಕ್ಷ್ಮಜೀವಿಗಳನ್ನು ಕೊಲ್ಲುವಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದ್ದು, ಇನ್ನು ಮುಂದೆ ನೈರ್ಮಲ್ಯದ ಚಿಂತೆ ಬೇಡ ಎಂದು ರೋಮಿತ್ ನಾಯರ್, ಇಸಿಡಿ ಮತ್ತು ಕ್ರಿಯೇಟಿವ್ ಹೆಡ್, ಎಫ್‍ಸಿಬಿ ಉಲ್ಕಾ ಅವರು ತಿಳಿಸಿದ್ದಾರೆ.  

“ಕಠಿಣ ರಾಸಾಯನಿಕಗಳು ನಮಗೆ ಕೆಟ್ಟದು ಎಂದು ಎಲ್ಲರಿಗೂ ತಿಳಿದಿದೆ, ಆದರೆ ಮನೆಯ ಆರೈಕೆಗೆ ಬಂದಾಗ, ಶುಚಿಗೊಳಿಸುವ ರಾಸಾಯನಿಕಗಳು ನಮ್ಮ ಪ್ರೀತಿಪಾತ್ರರಿಗೆ ಎಷ್ಟು ಹಾನಿಕಾರಕ ಎಂದು ನಾವು ಇನ್ನೂ ಅರಿತುಕೊಂಡಿಲ್ಲ. ಬೃಹತ್ ಅಗತ್ಯ ಪೂರೈಸಲು ಮತ್ತು ಭಾರತೀಯ ಕುಟುಂಬಗಳಿಗೆ ರ್ಯಾಯವನ್ನು ಒದಗಿಸಲು ಹಿಮಾಲಯ ಪರಿಪೂರ್ಣ ಬ್ರಾಂಡ್ ಆಗಿದೆ ಎಂದು  ಎಂ. ದಾಮೋದರನ್ ಹಿರಿಯ ಉಪಾಧ್ಯಕ್ಷ, ಮುಖ್ಯಸ್ಥ ಎಫ್‍ಸಿಬಿ ಉಲ್ಕಾ ಕಚೇರಿ ತಿಳಿಸಿದ್ದಾರೆ.



 

Post a Comment

0 Comments

Ad Code

Responsive Advertisement