ಬಳ್ಳಾರಿ ಮೇ 27. ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ಅವರು ಶುಕ್ರವಾರ ಚಳ್ಳಗುರ್ಕಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದರು. ನಂತರ ಶಾಲೆಯ 10 ಕೊಠಡಿಗಳು ಹಳೆಯದಾಗಿ ಬಿರುಕು ಬಿಟ್ಟು ಬಿದ್ದುಹೋಗಿದ್ದವು, ಹಾಗೂ ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯಗಳ ಸಮಸ್ಯೆ ಮತ್ತು ಮಕ್ಕಳಿಗೆ ಅತೀ ಮುಖ್ಯವಾದ ಕುಡಿಯುವ ನೀರಿನ ಸಮಸ್ಯೆಯನ್ನು ಕಂಡು ಶಾಸಕ ಬಿ. ನಾಗೇಂದ್ರ ಅವರು ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕರೆಮಾಡಿ ಶಾಲೆಯ ಕಟ್ಟಡ ಕೊಠಡಿಗಳ ಬಗ್ಗೆ ತಿಳಿಸಿ, ಡಿಎಂಎಫ್ ಅನುದಾನದ ಅಡಿಯಲ್ಲಿ 10 ನೂತನ ಶಾಲೆ ಕೊಠಡಿಗಳು ಹಾಗೂ ಶೌಚಾಲಯಗಳು ನಿರ್ಮಾಣ ಮಾಡಿಕೊಡಲು ಮನವಿ ಮಾಡಿಕೊಂಡರು.
ನಂತರ ಬಿಸಿ ಊಟಕ್ಕೆ ಬಂದ ಆಹಾರ ಧಾನ್ಯಗಳಾದ ಅಕ್ಕಿ ಮತ್ತು ಬೆಳೆಗಳನ್ನು ಪರಿಶೀಲನೆ ನಡೆಸಿದರು. ಅಕ್ಕಿ ಮತ್ತು ಬೇಳೆ ಸರಿಯಾದ ಗುಣಮಟ್ಟದ ಇಲ್ಲದಿರುವುದನ್ನು ಕಂಡು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಶಾಲೆಯ ಮಕ್ಕಳು ಇಂತಹ ಆಹಾರವನ್ನು ಸೇವಿಸಿದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದಕಾರಣ ಮಕ್ಕಳಿಗೆ ತಕ್ಷಣ ಗುಣಮಟ್ಟದ ಆಹಾರವನ್ನು ನೀಡಬೇಕೆಂದು ಶಾಸಕರು ಆದೇಶಿಸಿದರು.ಶ್ರೀ ಚಳ್ಳಗುರ್ಕಿ ಎರ್ರಿತಾತನ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ಎರ್ರಿತಾತನವರ ಆಶೀರ್ವಾದ ಪಡೆದು ನಂತರ ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸಿದರು.ಜೂನ್ 4,5 ಮತ್ತು 6 ರಂದು ಶ್ರೀ ಚಳ್ಳಗುರ್ಕಿ ಎರ್ರಿತಾತ ಅವರ ಹೂವಿನ ರಥೋತ್ಸವ ನಡೆಯುತ್ತಿದ್ದು ರಸ್ತೆ ಗುಂಡಿಗಳನ್ನು ಮುಚ್ಚಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಮಾಡಿ ಸರಿಪಡಿಸುವಂತೆ ಆದೇಶಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಅಣ್ಣ ನಾಗರಾಜ, ಗೋವರ್ಧನ್ ರೆಡ್ಡಿ, ಬಿ.ದುರುಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ (ಃಇಔ) ಸಿದ್ದಲಿಂಗಮೂರ್ತಿ, ಇಅಔ ಗೂಳೆಪ್ಪ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸಿಂಧುವಾಳ ಗಾದಿಲಿಂಗನಗೌಡ, ಮಹಾನಗರ ಪಾಲಿಕೆ ಸದಸ್ಯರಾದ ಕೆ.ಹೊನ್ನಪ್ಪ, ಯರ್ರಿಗುಡಿ ಮುದಿ ಮಲ್ಲಯ್ಯ, ಶ್ರೀನಾಥ್, ಹಗರಿ ಗೋವಿಂದ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ಶಶಿರೇಖ ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪೇರುದ್ರ.ಜಿ, ನಾಗರಾಜ್ ಹುಬ್ಬಳ್ಳಿ, ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀನಿವಾಸಲು, ಅಗಸರ ಚಿದಾನಂದ, ಸಣ್ಣ ತಿಪ್ಪೇರುದ್ರ, ಪಿ.ಎರ್ರಿಸ್ವಾಮಿ, ಹೊನ್ನಸ್ವಾಮಿ, ಸಾಯಿಕುಮಾರ್, ಸ್ವಾಮಿ ಸೇರಿದಂತೆ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

0 Comments