Ticker

6/recent/ticker-posts

Ad Code

Responsive Advertisement

ಮುಂದಿನ 5 ವರ್ಷಗಳಲ್ಲಿ 10,000 FPO ಸ್ಥಾಪನೆ ಗುರಿ : ಬಿ.ಸಿ.ಪಾಟೀಲ್

ಬೆಂಗಳೂರು, ಮೇ 27,  (ಕರ್ನಾಟಕ ವಾರ್ತೆ) : ಮುಂದಿನ 5 ವರ್ಷಗಳಲ್ಲಿ 10,000 ರೈತ ಉತ್ಪಾದಕ ಸಂಸ್ಥೆ (FPO ) ಗಳನ್ನು ರಚಿಸಿ ಪ್ರೋತ್ಸಾಹಿಸಲು  ಕೇಂದ್ರ ಸರ್ಕಾರ ಗುರಿ ಹೊಂದಿದೆ ಎಂದು ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ತಿಳಿಸಿದರು.

ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಇಂದು ಹಮ್ಮಿಕೊಳ್ಳಲಾದ 5 ದಕ್ಷಿಣ ವಲಯ ಹಾಗೂ ಕೇಂದ್ರಾಡಳಿತ ರಾಜ್ಯಗಳ ಪ್ರಾದೇಶಿಕ ಮಟ್ಟದ ರೈತ ಉತ್ಪಾದಕ ಸಂಸ್ಥೆಗಳು (FPO ) ಹಾಗೂ ಗುಚ್ಛ ಆಧಾರಿತ ವ್ಯಾಪಾರ ಸಂಸ್ಥೆಗಳು (CBBOs) ಗಳ ಒಂದು ದಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಒಂದು ಹೆಕ್ಟೇರ್‍ಗಿಂತಲೂ ಕಡಿಮೆ ಜಮೀನು ಹೊಂದಿರುವ 69 ಲಕ್ಷ ಕೃಷಿ ಕುಟುಂಬಗಳಿದ್ದು, ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ತುಂಬಾ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಣ್ಣ ರೈತರನ್ನು ಒಗ್ಗೂಡಿಸಿ ರೈತ ಉತ್ಪಾದಕ ಸಂಸ್ಥೆಗಳನ್ನಾಗಿ ಮಾಡಿದ್ದಲ್ಲಿ ಅವರು ಸಬಲೀಕರಣರಾಗುವುದಲ್ಲದೇ, ಉತ್ತಮ ಕೃಷಿ ಉತ್ಪನ್ನಗಳನ್ನು ಬೆಳೆದು ಶೇಖರಿಸಿ ಸೂಕ್ತ ಮಾರುಕಟ್ಟೆಗಳಿಗೆ ಮಾರಾಟ ಮಾಡಿ ಉತ್ತಮ ಬೆಲೆ ಪಡೆದು ಆದಾಯ ಹೆಚ್ಚಿಸಿಕೊಳ್ಳಬಹುದು ಇದಕ್ಕಾಗಿಯೇ ಈPಔ ಗಳನ್ನು ರಚಿಸುವುದು ಸೂಕ್ತವೆನಿಸ್ಮತ್ತದೆ.

 ಈ ಯೋಜನೆಯಡಿ ಪ್ರತಿ ರೈತ ಉತ್ಪಾದಕ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ 3 ವರ್ಷಗಳ ಅವಧಿಗೆ 18 ಲಕ್ಷ ರೂಗಳ ನಿರ್ವಹಣಾ ವೆಚ್ಚ ನೀಡಲಾಗುತ್ತದೆ. ಪ್ರತಿ ಗುಂಪು ಆಧಾರಿತ ವ್ಯವಹಾರಿಕ ಸಂಸ್ಥೆಗೆ ಮುಂಬರುವ 5 ವರ್ಷಗಳ ಅವಧಿಗೆ 25 ಲಕ್ಷ ರೂಗಳನ್ನು  FPO ಗೆ 2 ಕೋಟಿಗಳವರೆಗೆ ಕೊಲ್ಯಟರಲ್ ಫ್ರೀ ಗ್ಯಾರಂಟಿ ಫಂಡ್ ಒದಗಿಸಲಾಗುತ್ತದೆ ಎಂದರು. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರಾಷ್ಟ್ರೀಯ ಇ- ನ್ಯಾಮ್ ಪ್ಲಾಟ್‍ಫಾರ್ಮ್‍ನ್ನು ರಚಿಸಲಾಗುತ್ತದೆ. ಈಗಾಗಲೇ ರಾಷ್ಟ್ರದಲ್ಲಿ 281 FPO ಗಳು Rems e nam ಪೋರ್ಟಲ್‍ನಲ್ಲಿ ನೋಂದಾಯಿಸಿಕೊಂಡಿವೆ. ರಾಜ್ಯದಲ್ಲಿ ಒಟ್ಟು 6 ಆಹಾರ ಪಾರ್ಕ್‍ಗಳಿದ್ದು ಅವುಗಳಲ್ಲಿ 3 ಆಹಾರ ಪಾರ್ಕ್‍ಗಳು ಕೇಂದ್ರ ಸರ್ಕಾರದ ಸಂಸ್ಕರಣಾ ಮಂತ್ರಾಲಯದಿಂದ 50 ಕೋಟಿ ಅನುದಾನ ಪಡೆದು ಆರಂಭಿಸಿವೆ. ಪ್ರಧಾನಮಂತ್ರಿಗಳ ಕೃಷಿ ಮೂಲ ಸೌಕರ್ಯ ಅನುದಾನದ ಈ ಆಹಾರ ಪಾರ್ಕ್‍ಗಳಿಗೆ ಸಾರಿಗೆ ಸೌಕರ್ಯ ನಿರ್ಮಿಸಿ, ಈ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲಾvದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕೈಲಾಶ್ ಚೌದರಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದೆ. ರೈತ ಯೋಜನೆಗಳಿಗೆ ಕೃಷಿಕರ ಖಾತೆಗೆ ನೇರವಾಗಿ ಹಣ ಜಮಾ (DBT) ಮಾಡುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸಣ್ಣ ರೈತರಿಗೆ ಉತ್ತೇಜನ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂಚೂಣಿಯಲ್ಲಿವೆ. ಕೃಷಿಕರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಸಹ ಮುಖ್ಯ. ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಸಾಧ್ಯವಾದರೆ ಪ್ರತ್ಯೇಕ ಮಾರುಕಟ್ಟೆ ಘಟಕಗಳನ್ನು ಇಲಾಖೆಗಳು ಸ್ಥಾಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕೃಷಿ ಮಾರುಕಟ್ಟೆ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಎನ್. ವಿಜಯಲಕ್ಷ್ಮಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ರಾಜೇಂದ್ರ ಕುಮಾರ್ ಕಟಾರಿಯಾ, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಡಾ. ಎಂ.ವಿ. ವೆಂಕಟೇಶ್, ಕೃಷಿ ನಿರ್ದೇಶಕರಾದ ನಂದಿನಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement