ವೆಲ್ಲೂರು ಮೇ 08,2022: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಾರ್ಶ್ವ ಪದ್ಮಾವತಿ ಜೈನ ದೇವಾಲಯ ಹಾಗೂ ವೆಲ್ಲೂರಿನಲ್ಲಿರುವ ಶ್ರೀರಾಮಪುರ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ರಸ್ತೆ ಮಾರ್ಗದಲ್ಲಿ ಹೊರಟ ಗೌರವಾನ್ವಿತ ರಾಜ್ಯಪಾಲರು, ಮೊದಲಿಗೆ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಶ್ರೀ ಪಾರ್ಶ್ವ ಪದ್ಮಾವತಿ ಜೈನ ದೇವಾಲಯಕ್ಕೆ ಭೇಟಿ ನೀಡಿ, ತಾಯಿ ಪದ್ಮಾವತಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ನಂತರ ಶ್ರೀ ಪಾರ್ಶ್ವ ಪದ್ಮಾವತಿ ಪೀಠದ ಡಾ. ವಸಂತ್ ವಿಜಯಜಿ ಮಹಾರಾಜ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಕೃಷ್ಣಗಿರಿಯ ಡಿ ಆರ್ ಓ ರಾಜೇಶ್ವರಿ, ಆರ್ ಡಿ ಓ ಸತೀಶ್ ಕುಮಾರ್ ಉಪಸ್ಥಿತರಿದ್ದರು.
ನಂತರ ವೆಲ್ಲೂರು ಜಿಲ್ಲೆಯಲ್ಲಿರುವ ಶ್ರೀಪುರಂ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ ಗೌರವಾನ್ವಿತ ರಾಜ್ಯಪಾಲರು, ಶ್ರೀ ನಾರಾಯಣಿ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ತದನಂತರ ಉದ್ಭವ ಮೂರ್ತಿಗೆ ಅಭಿಷೇಕ ಮಾಡಿದ ಗೌರವಾನ್ವಿತ ರಾಜ್ಯಪಾಲರು, ಕೆಲವು ನಿಮಿಷಗಳ ಕಾಲ ಪ್ರಾರ್ಥನೆ ಮಾಡುವ ಮೂಲಕ ದೇವಾಲಯದಲ್ಲಿ ಸಮಯ ಕಳೆದರು.
ಶ್ರೀ ನಾರಾಯಣಿ ಪೀಠದ ಸಂಸ್ಥಾಪಕ ಮತ್ತು ಪೀಠಾಧಿಪತಿ ಶ್ರೀ ಶಕ್ತಿ ಅಮ್ಮ ಅವರ ಆಶೀರ್ವಾದ ಪಡೆದರು. ಶ್ರೀ ಶಕ್ತಿ ಅಮ್ಮ ಅವರು ಗೌರವಾನ್ವಿತ ರಾಜ್ಯಪಾಲರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀ. ಸುರೇಶ್ ಬಾಬು ನಿರ್ದೇಶಕ ಮತ್ತು ಟ್ರಸ್ಟಿ ಶ್ರೀಪುರಂ, ಶ್ರೀ ಸೌಂದರರಾಜನ್ ಶ್ರೀ ನಾರಾಯಣಿ ಪೀಡಮ್ ಟ್ರಸ್ಟಿ, ಶ್ರೀ ಸಂಪತ್ ಮ್ಯಾನೇಜರ್, ಭಾಸ್ಕರ್ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
.jpg)
.jpg)
.jpg)
.jpg)



0 Comments