ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಯ ಮೂಲಕ ಮುಂದಿನ ಪೀಳಿಗೆಗೆ ಕನ್ನಡದ ಘಮಲು ಪಸರಿಸುವ ಸ್ಪರ್ಧೆಯೇ ಕಿಶೋರ ಕನ್ನಡಿಗ.
ಇಂದಿನ ಮಕ್ಕಳಲ್ಲಿ ಕನ್ನಡದ ವಿವಿಧ ಆಯಾಮಗಳನ್ನು ಸ್ಪರ್ಧೆಯ ಮೂಲಕ ತಿಳಿಸಿ ಕನ್ನಡದ ಬಗೆಗೆ ಮಕ್ಕಳಿಗೆ ಆಸಕ್ತಿ ಬೆಳೆಸುವುದು. ಮತ್ತು ಮಕ್ಕಳಲ್ಲಿ ಬಿತ್ತುವ ಕನ್ನಡದ ಬೀಜ ಮುಂದೊಂದು ದಿನ ಮರವಾಗಿ ಹೂವು ಬಿಟ್ಟು ಕನ್ನಡದ ಕಂಪು ಜಗವೆಲ್ಲ ಪಸರಿಸಲಿ ಅನ್ನುವ ಆಶಯ ಈ ಸ್ಪರ್ಧೆಯದ್ದು.
ಕಿಶೋರ ಕನ್ನಡಿಗ ಇದು ಆನ್ಲೈನ್ ಸ್ಪರ್ಧೆಯಾಗಿದ್ದು
೪ ರಿಂದ ೧೪ ವರ್ಷದ ವರೆಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಈ ಸ್ಪರ್ಧೆಯಲ್ಲಿ ೪ ಸುತ್ತುಗಳು ಇರುತ್ತದೆ.
೧.ಕನ್ನಡ ನಾಡು ನುಡಿಯ ಬಗ್ಗೆ ಭಾಷಣ ದ ಸುತ್ತು
೨. ಕನ್ನಡದಲ್ಲಿ ಕಥೆ ಹೇಳುವ ಸುತ್ತು
೩. ಕನ್ನಡದ ಹಾಡು ಹೇಳುವ ಸುತ್ತು
೪.ಕನ್ನಡದ ಗಾದೆ ಮಾತು ವಿಸ್ತರಿಸುವ ಸುತ್ತು
ಹೀಗೆ ೪ ಸುತ್ತುಗಳಲ್ಲಿ ಉತ್ತಮ್ಮ ಪ್ರದರ್ಶನ ತೋರಿದ ಕಿಶೋರ.. ಈ ವರ್ಷದ ಕಿಶೋರ ಕನ್ನಡಿಗ ಬಿರುದು ಪಡೆದು ಗೌರವಿಸಲ್ಪಡುತ್ತಾರೆ.
ನೆನಪಿರಲಿ ನಿಮ್ಮ ಹೆಸರು ನೊಂದಾಯಿಕೊಳ್ಳಲು ಮೇ ೨೩ ಕೊನೆಯ ದಿನಾಂಕ.
ನಿಮ್ಮ ಮಕ್ಕಳು ಆಗಬಹುದು ಈ ವರ್ಷದ ಕಿಶೋರ ಕನ್ನಡಿಗ!!
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ೮೨೭೭೩೮೩೭೧೩(8277383713]
ಅರವಿಂದ ಹೆಗಡೆ
!!
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ೮೨೭೭೩೮೩೭೧೩(8277383713]
ಅರವಿಂದ ಹೆಗಡೆ

0 Comments