ಮನುಜಮತ ವಿಶ್ವಪಥದಲ್ಲಿ ಸಾಗೋಣ,ಕನ್ನಡ ಭಾಷೆ ಉಳಿಸಿ,ಬೆಳಸೋಣ ಎಂಬ ಪ್ರತಿಜ್ಞೆ*
ಕನ್ನಡ ಸಾಹಿತ್ಯ ಪರಿಷತ್ ಅವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಅನಿಕೇತನ ಕನ್ನಡ ಬಳಗ(ನೋಂ) ಉದ್ಘಾಟನಾ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ,ಸಾಧಕಿಯರಿಗೆ ಗೌರವ ಸನ್ಮಾನ ಕಾರ್ಯಕ್ರಮ ದೀಪಾ ಬೆಳಗಿಸಿ ಉದ್ಘಾಟನೆಯನ್ನು ಬೆಂಗಳೂರು ನಗರ ಜಿಲ್ಲಾ *ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಪ್ರಕಾಶ್ ಮೂರ್ತಿರವರು, ಕರ್ನಾಟಕ ರಾಜ್ಯ ಮಹಾನಗರ ನೌಕರರ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮತ್ತು ಅದಿಚುಂಚನಗಿರಿ ವೈದ್ಯಾಧಿಕಾರಿ ಡಾ|| ರವಿ.ಡಿ.ನಾಗರಾಜಯ್ಯ,ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರಾದ ಸಿ.ಕೆ.ರಾಮೇಗೌಡರು,ಕನ್ನಡ ಪರ ಹೋರಾಟಗಾರ ವಾಟಾಳ್ ವೆಂಕಟೇಶ್, ಅನಿಕೇತನ ಕನ್ನಡ ಬಳಗದ ಅಧ್ಯಕ್ಷರಾದ ಹೇಮರಾಜುರವರು* ಉದ್ಘಾಟನೆ ನೇರವೆರಿಸಿದರು.
*ಎಂ.ಪ್ರಕಾಶ್ ಮೂರ್ತಿರವರು* ಮಾತನಾಡಿ ನಾಡು,ನುಡಿ ಪರ ಹೋರಾಟ ಮಾಡುವ ಕನ್ನಡ ಸಂಘನೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಸದಾ ಸಹಕಾರ ನೀಡಲಿದೆ.
ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನ ಮೂಡಿಸಿಸುವ ಕುವೆಂಪುರವರ ಕಾವ್ಯದ ಅನಿಕೇತನ ಹೆಸರಿನಲ್ಲಿ ಕನ್ನಡ ಬಳಗ ನಾಡಿನ ಜನರ ಧ್ವನಿಯಾಗಲಿ.
ಕನ್ನಡದ ಜ್ಞಾನವನ್ನ ನಾಡಿನಲ್ಲಿ ಪಸರಿಸಲು ಅನಿಕೇತನ ಕನ್ನಡ ಬಳಗ ಶ್ರಮಿಸಲಿ.
12ನೇಶತಮಾನದ ಕಾಯಕ ಸಿದ್ದಾಂತ19ನೇಶತಮಾನದ ಮನುಜಮತ ಸಿದ್ದಾಂತವನ್ನು ಪಾಲಿಸಬೇಕು.
ಜಾತಿ,ಮತ,ಧರ್ಮ ಕನ್ನಡವಾಗಬೇಕು.ಕನ್ನಡ ಭಾಷೆ ಉಳಿದರೆ ನಾಡು ಉಳಿಯುತ್ತದೆ ಎಂದು ಹೇಳಿದರು.
*ಎ.ಅಮೃತ್ ರಾಜ್ ರವರು* ಮಾತನಾಡಿ ಕನ್ನಡ ಉಳಿಸಿ,ಬೆಳಸಿ ಮತ್ತು ಬಳಸೋಣ ಎಂಬಂತೆ ಬಿ.ಬಿ.ಎಂ.ಪಿ.ಯ ಆಡಳಿತದಲ್ಲಿ ಶೇಕಡ 100%ರಷ್ಟು ಕನ್ನಡ ಭಾಷೆಯಲ್ಲಿ ಆಡಳಿತ ವ್ಯವಹಾರ ನಡೆಯುತ್ತಿದೆ.
ಬಿ.ಬಿ.ಎಂ.ಪಿ.ಯ ನೌಕರರ ಸಂಘದ ವತಿಯಿಂದ ಕಾಶಿಯಲ್ಲಿ ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,
*ಸಿ.ಕೆ.ರಾಮೇಗೌಡರು* ಮಾತನಾಡಿ 1971ರಲ್ಲಿ ಜೆ.ಹೆಚ್.ಪಟೇಲ್ ರವರು ಮೊಟ್ಟಮೊದಲ ಬಾರಿಗೆ ಲೋಕಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿ ರಾಷ್ಟಮಟ್ಟದಲ್ಲಿ ಕನ್ನಡಕ್ಕೆ ಗೌರವ ಸ್ಥಾನ ಸಿಕ್ಕಿತ್ತು ಇಂದು ಹೊರರಾಷ್ಟ್ರ ಕೆನಡಾ ದೇಶದಲ್ಲಿ ಹೆಮ್ಮೆಯ್ಯ ಕನ್ನಡಿಗ ಸಂಸದ ಚಂದ್ರಕಾಂತ್ ಆರ್ಯರವರು ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಂತರಾಷ್ಟ್ರಿಯ ಮಟ್ಟದಲ್ಲಿ ಕನ್ನಡ ಕಹಳೆ ಮೊಳಗುತ್ತಿದೆ.
ಅನಿಕೇತನ ಬಹು ಡೊಡ್ಡ ಅರ್ಥ,ವಿಸ್ತಾರ ಹೊಂದಿದೆ .
ಮನುಷ್ಯನಲ್ಲಿ ಇರುವ ಶಕ್ತಿಯನ್ನ ಸಮಾಜಕ್ಕೆ ಕೊಡುಗೆ ನೀಡಬೇಕು.
ನಿನ್ನಲಿರುವ ಚೇತನವನ್ನು ಸೇತುವೆ ನಿರ್ಮಾಣ ಮಾಡುವ ಬದಲು ಹರಿಯಬೇಕು ಎಂದು ಹೇಳಿದರು.
*ಮನುಜಮತ ವಿಶ್ವಪಥ ಹಾದಿಯಲ್ಲಿ ಸಾಗೋಣ,ಕನ್ನಡ ಭಾಷೆ ಉಳಿಸಿ,ಬೆಳಸೋಣ ಎಂಬ ಪ್ರತಿಜ್ಞೆ ಮಾಡಲಾಯಿತು*
ಕಲಾವಿದ ಮೈಸೂರು ರಮಾನಂದ್,ಹಿರಿಯ ವಕೀಲ ವಿ.ಶ್ರೀನಿವಾಸ್,ಆರೋಗ್ಯ ವೈದ್ಯಾಧಿಕಾರಿ ಹೆಚ್.ಜಿ.ಸುರೇಶ್,ಪ ತ್ರಕರ್ತ ನಾರಾಯಣ್,ಟೈ ಲರಿಂಗ್ ಶಿಕ್ಷಕ ಬಿ.ಟಿ.ತಿಮ್ಮಸ್ವಾಮಿರವರಿಗೆ ಗಣ್ಯರಿಂದ ಅನಿಕೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.




0 Comments