Ticker

6/recent/ticker-posts

Ad Code

Responsive Advertisement

BELLARY FARMERS ಜಾನುವಾರುಗಳ ಹೊಟ್ಟೆ ಮೇಲೆ ಹೊಡೆದ ಮಳೆರಾಯ-ಕೊಚ್ಚಿಹೋದ ಮೇವು-ತತ್ತರಿಸಿದ ರೈತರು

BELLARY ಬಳ್ಳಾರಿ ಮೆ 20. ಜಿಲ್ಲೆಯಲ್ಲಿ ಮೂರ್ನಾಲ್ಕು ದಿನದಿಂದ ಮಳೆರಾಯನ ಆರ್ಭಟಕ್ಕೆ ತಾಲ್ಲೂಕಿನ ಕೆಲ ಹೋಬಳಿಗಳಲ್ಲಿ ಜಾನುವಾರುಗಳ ಮೇವು ಸಂಪೂರ್ಣ ನಾಶವಾಗಿದೆ. ನಮಗೆ ಬಂದಿರುವ ಮಾಹಿತಿ ಮೇರೆಗೆ ಮೋಕ ಹೋಬಳಿಯಲ್ಲಿ ಈ ಬಾರಿ ರೈತರು ಭತ್ತವನ್ನು ಎರಡು ಬೆಳೆಗಳನ್ನು  ಬೆಳದಿದ್ದಾರೆ. ಮೊದಲನೆಯ ಕ್ರಾಪ್ ಮೇವನ್ನು ಸಂಗ್ರಹಣೆ ಮಾಡಿಕೊಂಡಿಲ್ಲ ರೈತರು. ಬೇಸಿಗೆ ಬೆಳೆ ಬರುತ್ತದೆ ಅದನ್ನು ತೆಗೆದು ಇಟ್ಟುಕೊಳ್ಳುವುದು ಎಂದು ಸಂತೋಷದಲ್ಲಿ ಇದ್ದರು. ಈಬಾಗದಲ್ಲಿ ರೈತರು ಭತ್ತವನ್ನು ಮಿಷನರಿ ಮೂಲಕ ಕಾಟವ್ ಮಾಡುತ್ತಾರೆ,ಅದನ್ನೆ ಸಂಗ್ರಹಿಸಿ ಕೊಂಡು ಜಾನುವಾರುಗಳನ್ನು ಕಾಪಾಡಿ ಕೊಳ್ಳುತ್ತಾರೆ. 

20 ದಿನಗಳ ಹಿಂದೆ ಭತ್ತ ಕಾಟವ್ ಆಗಿತ್ತು,ರೈತರು ಮಾರಾಟ,ಅದು,ಇದು,ಎಂದು ಸ್ವಲ್ಪ ತಡವಾಗಿದೆ ಮೇವು ಸಂಗ್ರಹಣೆ ಮಾಡಿ ಕೊಳ್ಳಲು ಅಗಿಲ್ಲ. 30% ರೈತರು ಮಾತ್ರವೇ ಮೇವು ಸಂಗ್ರಹಣೆ ಮಾಡಿಕೊಂದ್ದಾರೆ, ಅಷ್ಟರಲ್ಲಿ ಮಳೆ ರಾಯನ ಆರ್ಭಟ ಆರಂಭವಾಗಿದೆ. ಮೂರ್ನಾಲ್ಕು ದಿನದಿಂದ ಮಳೆ ಬರುತ್ತಾ ಇದೆ, ಬಂದಿದ್ದ ಮಳೆಗೆ ನದಿಗಳು ತುಂಬಿ ಹೋಗಿವೆ. ಮೋಕ ವ್ಯಾಪ್ತಿಯಲ್ಲಿ ಸಿಂದುವಾಳ,ಯರ್ರಗುಡಿ,ಬಸರಕೋಡು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳ ಮೇವು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಈಬಾಗದ ರೈತರು ಈಬಾರಿ ಎರಡು ಬೆಳೆಗಳನ್ನು ಬೆಳೆದರೂ ,ಇನ್ನೂ70% ಜಾನುವಾರುಗಳಿಗೆ ಮೇವು ಬೇಕಾಗಿದೆ. 

ಈಬಾಗದ ರೈತರು ಮೇವನ್ನು ಸಾವಿರಾರು ರೂಪಾಯಿಗಳು ಖರ್ಚು ಮಾಡಿ ಖರೀದಿ ಮಾಡಬೇಕಾಗಿದೆ.  ಸರ್ಕಾರ ಇಲ್ಲಿನ  ಜಾನುವಾರುಗಳನ್ನು ರಕ್ಷಣೆ ಮಾಡಲು ಮುಂದಾಗಬೇಕೆಂದು ರೈತರು ಅಂಗಲಾಚುತಿದ್ದಾರೆ. ಈಬಾಗದ ರೈತರು ಮನೆಯಲ್ಲಿ ಇರುವ ಜಾನುವಾರುಗಳನ್ನು  ಪರಿಶೀಲನೆ ಮಾಡಿ,ಅವುಗಳಗೆ ತಕ್ಕಂತೆ ಮೇವು ಆಗಲಿ, ಅಥವಾ ರೈತರೆ ಮೇವು ಖರೀದಿ ಮಾಡಲು ಆರ್ಥಿಕ  ಸಹಾಯ ಮಾಡಬೇಕು ಆಗಿದೆ.



 

Post a Comment

0 Comments

Ad Code

Responsive Advertisement