ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸುವ ಡಾ.ಜಸ್ಟೀಸ್ ಕೆ. ಭಕ್ತವತ್ಸಲ ರವರ ವಿಚಾರಣಾ ಆಯೋಗ
ಸರ್ಕಾರದ ಆದೇಶ ಸಂಖ್ಯೆ: ಹಿಂವಕ 114 ಬಿಸಿಎ 2022, ಬೆಂಗಳೂರು, ದಿನಾಂಕ:07.05.2022 ರ ಆದೇಶದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸಲು ಸಮರ್ಪಿತವಾದ ವಿಚಾರಣಾ ಆಯೋಗವನ್ನು ನೇಮಿಸಲಾಗಿರುತ್ತದೆ.
ಸರ್ಕಾರದ ಆದೇಶ ಸಂಖ್ಯೆ: ಹಿಂವಕ 114 ಬಿಸಿಎ 2022, ಬೆಂಗಳೂರು, ದಿನಾಂಕ:13.05.2022 ರ ಆದೇಶದಲ್ಲಿ ವಿಚಾರಣಾ ವರದಿಯನ್ನು ಮೂರು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲು ತಿಳಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು / ಜನಪ್ರತಿನಿಧಿಗಳು ಲಿಖಿತ ರೂಪದಲ್ಲಿ ತಮ್ಮ ಅಹವಾಲುಗಳನ್ನು ಆಯೋಗದ ಕಾರ್ಯದರ್ಶಿಗಳ ವಿಳಾಸಕ್ಕೆ ದಿನಾಂಕ:08.06.2022 ರ ಸಾಯಂಕಾಲ 05.00 ಗಂಟೆಯೊಳಗಾಗಿ ಸಲ್ಲಿಸುವುದು. ತದನಂತರ ಬಂದ ಅಹವಾಲುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ , ಕಾರ್ಯದರ್ಶಿ, ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸುವ ಡಾ.ಜಸ್ಟೀಸ್ ಕೆ. ಭಕ್ತವತ್ಸಲ ರವರ ವಿಚಾರಣಾ ಆಯೋಗ
ಕೊಠಡಿ ಸಂ:133 & 134 ಮೊದಲನೇ ಮಹಡಿ ವಿಕಾಸ ಸೌಧ, ಡಾ|| ಅಂಬೇಡ್ಕರ್ ವೀಧಿ ಬೆಂಗಳೂರು -560001 ದೂ.ಸಂ.080-22352152, 22034004 ಸಂಪರ್ಕಿಸಬಹುದು
0 Comments