Ticker

6/recent/ticker-posts

Ad Code

Responsive Advertisement

ಸಾಂಪ್ರದಾಯಿಕ ನಾಟಕಗಳ ಮೂಲಕ ಎಷ್ಟೋ ಕಲಾವಿದ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ-ಶಾಸಕ ನಾಗೇಂದ್ರ

ಬಳ್ಳಾರಿ ಮೇ 10. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಾಗನೂರು ಗ್ರಾಮದಲ್ಲಿ "ಪಾರ್ಥ ವಿಜಯ ಅರ್ಥಾತ್ ಕಾಲುಕೇಯ ನಿವಾತಕನ ವಧೆ" ಬಯಲಾಟ ಕಾರ್ಯಕ್ರಮಕವನ್ನು ಆಯೋಜಿಸಲಾಯಿತು. ಈ ಬಯಲಾಟಕ್ಕೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ಭಾಗವಹಿಸಿ, ಜನರನ್ನುದ್ದೇಶಿಸಿ ಮಾತನಾಡಿ ಈ ಬಯಲಾಟ ಪ್ರದರ್ಶನಕ್ಕೆ (ಒಂದು ಲಕ್ಷ) ರೂಪಾಯಿಗಳನ್ನು ದೇಣಿಗೆ ನೀಡಿದರು. ಮತ್ತು  ಅವರು ಈ ಆಧುನಿಕ ಕಾಲದಲ್ಲಿ ಟಿವಿ ಧಾರಾವಾಹಿಗಳನ್ನು ವೀಕ್ಷಿಸಲು ಲಭ್ಯವಿರುವ ನಮ್ಮ ಹಳ್ಳಿಗರು ಸಾಂಪ್ರದಾಯಿಕ ನಾಟಕಗಳನ್ನು ನೋಡುವ ಮೂಲಕ ನಮ್ಮ ಸಂಪ್ರದಾಯಗಳನ್ನು ಉಳಿಸುತ್ತಿದ್ದಾರೆ, ಮತ್ತು ಬಯಲಾಟಗಳನ್ನು ಆಡುವುದರಿಂದ ಎಷ್ಟೋ ಕಲಾವಿದ ಕುಟುಂಬಗಳು ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರನ್ನು ಶ್ಲಾಘಿಸಿದರು. ಇದೇ ವೇಳೆ ಶಾಸಕರನ್ನು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಚಾಗನೂರು ಗ್ರಾಮದ ಹಿರಿಯ ಮುಖಂಡರಾದ ಸಿ.ಪಿ ಚಂದ್ರಶೇಖರ್ ರೆಡ್ಡಿ ರವರು,  ರಾಘವರೆಡ್ಡಿ ರವರು, ಶೇಷರೆಡ್ಡಿ ರವರು, ಕೆ.ಲಕ್ಷ್ಮಿಕಾಂತ್ ರವರು ಶಾಸಕರ ಆಪ್ತರಾದ ಅಣ್ಣ ನಾಗರಾಜ್ ರವರು,ಗೋವರ್ಧನ್ ರೆಡ್ಡಿ ರವರು,ಬಿ.ದುರುಗಣ್ಣ ರವರು, ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಯರ್ರಿಗೌಡ ರವರು, ಖಜಾಂಚಿಯಾದ  ಕೆ.ಮೋಹನ್ ರವರು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸಿಂಧುವಾಳ ಗಾದಿಲಿಂಗನಗೌಡ ರವರು, ಮಾಜಿ ಉಪಮೇಯರ್ ಆದ ಬೆಣಕಲ್ ಬಸವರಾಜ್ ಗೌಡ ರವರು, ಮಹಾನಗರ ಪಾಲಿಕೆ ಸದಸ್ಯರಾದ ಕೆ.ಹೊನ್ನಪ್ಪ ರವರು ಕಾಂಗ್ರೆಸ್ ಪಕ್ಷದ ಮುಖಂಡರಾದ ಯರ್ರಗುಡಿ ಮಲ್ಲಯ್ಯ ರವರು, ಶ್ರೀನಾಥ್ ರವರು, ಚಂದ್ರಪ್ಪ ರವರು,ಎಂ.ಜಿ ಕನಕ ರವರು, ಬಯಲಾಟದ ಪ್ರಯೋಜಕರಾದ ಮೇಟಿ ಕೆ.ಶ್ರೀನಿವಾಸ್ ರವರು, ಮಾಜಿ ತಾಲೂಕ ಸದಸ್ಯರಾದ ದೊಡ್ಮನೆ ಶೇಖಣ್ಣ ರವರು, ಬಯಲಾಟದ ಮೇನೇಜರ್ ಗಳಾದ ಕೆಂಪು ದೇವೇಂದ್ರಪ್ಪ,  ಕೆ.ಆಂಜನೇಯ, ಎ.ಶಾಂತಕುಮಾರ್, ಬಿ.ತಿಪ್ಪಯ್ಯ, ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಗುಡ್ಡರ್ ದೇವೇಂದ್ರಪ್ಪ, ಜುಲ್ಲುಪಲ್ ಆಂಜನೇಯ, ದೊಡ್ಮನೆ ದೊಡ್ಡ ಬಜ್ಜಯ್ಯ, ಟಿ.ಪೊoಪಪತಿ, ಮಾರ್ಕೆಟ್ ದುರುಗಣ್ಣ, ಕುರುಬರ ಆದೆಪ್ಪ,ಬುಡ್ಡೆ ಹೊನ್ನೂರಪ್ಪ, ಸಣ್ಣ ಗಾದಿಲಿಂಗಪ್ಪ, ದೊಡ್ಮನೆ ರಾಜಶೇಖರ್,ಬುಗುಲು ಬಸವರಾಜ್, ದೊಡ್ಮನೆ ಗೋವಿಂದ, ಪಿಂಜೀರ್ ರಾಜಪ್ಪ ಸೇರಿದಂತೆ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.


 


Post a Comment

0 Comments

Ad Code

Responsive Advertisement