ಬಳ್ಳಾರಿ ಮೇ 07. ಬಳ್ಳಾರಿ ನಗರ ಮಹಿಳಾ ಮೋರ್ಚಾ ವತಿಯಿಂದ ಬಿಜೆಪಿ ಕಾರ್ಯಾಲಯದಲ್ಲಿ ನಗರದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ದಿನಾಂಕ 5/ 5/ 2022 ರಂದು ಗುರುವಾರ ನಡೆಯಿತು .ಈ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಶಾರದ ಹಿರೇಮಠ್ ಅವರು ಪಕ್ಷ ಸಂಘಟನೆ ಯಾವ ರೀತಿ ನಿರ್ವಹಿಸಬೇಕು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಪಕ್ಷಕ್ಕೆ ಹೇಗೆ ಬರ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ತಿಳಿಸಿಕೊಟ್ಟರು. ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಮುರಾರಿಗೌಡರು ಮಾತನಾಡುತ್ತಾ ಮಹಿಳಾ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಮಹಿಳೆಯರಿಗೆ ತಲುಪುವ ಕಾರ್ಯಕ್ರಮಗಳನ್ನು ನಡೆಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾಧ್ಯಕ್ಷರಾದ ಕುಮಾರಿ ಸುಗುಣ, ನಗರ ಅಧ್ಯಕ್ಷರಾದ ಶ್ರೀಮತಿ ಜ್ಯೋತಿಪ್ರಕಾಶ್, ರಾಜ್ಯ ಉಪಾಧ್ಯಕ್ಷರಾದ ಶಿವಕೃಷ್ಣ, ನಗರ ಪ್ರಧಾನ ಕಾರ್ಯದರ್ಶಿ ರಾಮಾಂಜಿನಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ವಿಜಯಲಕ್ಷ್ಮಿ,ಸುಮ ರೆಡ್ಡಿ, ಪುಷ್ವ ಚಂದ್ರಶೇಖರ್, ಪದ್ಮಾವತಿ, ಆನಂದ್ ಈಶ್ವರಿ,ಅಲುವೇಲಮ್ಮ, ಪುಷ್ಪಲತಾ ,ಗೌಸಿಯಾ, ಅನ್ನಪೂರ್ಣ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

0 Comments