ಬೆಂಗಳೂರು, ಮೇ 26, (ಕರ್ನಾಟಕ ವಾರ್ತೆ) :ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು 2022- 23 ನೇ ಸಾಲಿನ ಡಿಪ್ಲೊಮೊ ಪ್ರಥಮ ಸೆಮಿಸ್ಟರ್ ಅರೆಕಾಲಿಕ (ಪಾರ್ಟ್‍ಟೈಮ್) ಪ್ರವೇಶಾತಿ ಪ್ರಕ್ರಿಯೆಯು ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್, ಬೆಂಗಳೂರು ಹಾಗೂ ಎಂ.ಇ.ಐ. ಪಾಲಿಟೆಕ್ನಿಕ್, ಬೆಂಗಳೂರು ಇಲ್ಲಿ ಮೇ 20 ರಿಂದ ಜೂನ್ 13 ರವರೆಗೆ ನಡೆಯಲಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಪ್ರವೇಶ ಅರ್ಜಿಯನ್ನು dtek.karnataka.gov.in or dtetech.karnataka.gov.in/kartechnical ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 13 ರೊಳಗೆ ಸಲ್ಲಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments