ಬಳ್ಳಾರಿ, ಮೇ.25: ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ಷಿಷ್ಟ ಪರಿಸ್ಥಿತಿಗಳು ಉಂಟಾದಾಗ ಅವುಗಳನ್ನು ಎದುರಿಸಲು ಉಪಯೋಗವಾಗುವ ಹಲವಾರು ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲೆ ಇರುತ್ತದೆ, ಇಂತಹ ನಿಟ್ಟಿನಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಬಹುರಾಷ್ಟ್ರೀಯ ಕಂಪನಿಗಳು ನಿರ್ವಹಿಸಲು ಮುಂದಾಗಬೇಕು, ಈ ನಿಟ್ಟಿನಲ್ಲಿ ಅದಾಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ತಮ್ಮ ಜವಾಬ್ದಾರಿಯುತ ಕಾರ್ಯಗಳನ್ನು ನೆರವೇರಿಸುತ್ತಿರುವುದು ಹರ್ಷದಾಯಕ ಎಂದು ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸವರಾಜಗೌಡ ಅವರು ತಿಳಿಸಿದರು.
ಅವರು ಇಂದು ಅದಾಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಸಿಎಸ್‍ಆರ್ ಕಾರ್ಯಕ್ರಮದಡಿ ತಾಲ್ಲೂಕಿನ ಲಕ್ಷ್ಮೀನಗರ ಕ್ಯಾಂಪಿನಲ್ಲಿ ನೂತನವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು, ಅದಾಮಾ ಕಂಪನಿಯವರು ತಮ್ಮ ಪಾಲಿನ ಜವಾಬ್ದಾರಿತನವಾಗಿ ಇಂದು ಲಕ್ಷ್ಮಿನಗರ ಕ್ಯಾಂಪಿಗೆ ಕುಡಿಯುವ ನೀರಿನ ಘಟಕವನ್ನು ನೀಡಿರುವುದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಕೊರತೆಯನ್ನು ನೀಗಿಸಿದಂತಾಗಿದೆ ಎಂದರು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ನಿರ್ವಹಣೆ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಕಾರ್ಯವನ್ನು ಮುಂದುವರೆಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಪದ್ಮಾವತಿ ಶ್ರೀನಿವಾಸ್, ಸಣ್ಣರುದ್ರಪ್ಪ, ರವೀಂದ್ರಬಾಬು, ಶ್ರೀನಿವಾಸ್, ಸಾಂಬಶಿವರಾವ್, ಬಂಗಾರಿ, ಅದಾಮಾ ಕಂಪನಿಯ ಬಳ್ಳಾರಿಯ ಸಹಾಯಕ ಪ್ರಧಾನ ಪ್ರಬಂಧಕರಾದ ರಾಮಯ್ಯ, ಪ್ರಾದೇಶಿಕ ಹಿರಿಯ ವ್ಯವಸ್ಥಾಪಕ ಜಿ.ವಿ.ಆರ್.ಕೆ.ಪ್ರಸಾದ್, ಮಾರ್ಕೆಟಿಂಗ್ ಉಪ ಪ್ರಬಂಧಕರಾದ ಸುಧಾಕರ್.ಎಸ್., ಟೆರಿಟರ್ ಮ್ಯಾನೇಜರ್ ಕೆ.ಧನಂಜಯ ಸೇರಿದಂತೆ ಹಲವಾರು ಮುಖಂಡರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

0 Comments