ಬಳ್ಳಾರಿ ಮೇ 25. ಕರ್ನಾಟಕ ರಾಜ್ಯದ ಜನತೆಯ ಸುಂದರ ಭವಿಷ್ಯದ ಹಿತದೃಷ್ಟಿಗಾಗಿ ಪವಾಡ ಬಯಲು ಖ್ಯಾತಿಯ ಡಾ. ಹುಲಿಕಲ್ ನಟರಾಜ್ ರಾಷ್ಟ್ರೀಯ ಅಧ್ಯಕ್ಷರು / ರಾಜ್ಯಾಧ್ಯಕ್ಷರು. ಕ. ರಾ. ವೈ. ಸಂ. ಪರಿಷತ್ತು ( ರಿ. ) ಇವರ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ( ರಿ.) ರಾಜ್ಯ ಮಟ್ಟದ ಪ್ರಥಮ 'ಯುವ ವೈಜ್ಞಾನಿಕ ಸಂಸತ್ ಅಧಿವೇಶನ - 2022'ಮೇ 28. 29.
ಇದೆ ಶನಿವಾರ ಮತ್ತು ಭಾನುವಾರ, ಸ್ಥಳ ಡಾ. ಬಿ. ಆರ್. ಅಂಬೇಡ್ಕರ್ ಭವನ ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ನಮ್ಮ ನಡಿಗೆ ವಿಜ್ಞಾನದೆಡೆಗೆ ಈ ಕಾರ್ಯಕ್ರಮಕ್ಕೆ ಖ್ಯಾತ ವಿಜ್ಞಾನಿಗಳು, ಬುದ್ಧಿಜೀವಿಗಳು, ಸಾಧಕರು ಭಾಗವಹಿಸುತ್ತಿದ್ದಾರೆ, ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ, ಬಂದಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಗುತ್ತದೆ, ಇಂತಹ ಶ್ರೇಷ್ಠವಾದ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಲು ವಿದ್ಯಾಸಂಸ್ಥೆಗಳ ಮುಖ್ಯಸ್ಥರಿಗೆ ವಿನಂತಿಸಿಕೊಳ್ಳುತ್ತಿದ್ದೇವೆ, ಈ ಕಾರ್ಯಕ್ರಮ ಯಶಸ್ವಿಯಾಗಲು ಕಾಲೇಜುಗಳ ಮುಖ್ಯಸ್ಥರ ಸಹಕಾರ ಅತಿ ಅವಶ್ಯಕವಾಗಿದೆ, ನಿಮ್ಮ ಕಾಲೇಜಿನಿಂದ ಎಷ್ಟು ಜನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಮಾಹಿತಿಯನ್ನು ನೀಡಿ ಬರುವಂತಹ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲು ಸಹಾಯವಾಗುತ್ತದೆ, *ಈ ಮಾಹಿತಿಯನ್ನು ನಿಮಗೆ ಗೊತ್ತಿರುವ ಎಲ್ಲಾ ಜಾಲತಾಣಗಳಿಗೆ ಹಾಗೂ ವಿದ್ಯಾಸಂಸ್ಥೆಗಳಿಗೆ , ಸಂಘ-ಸಂಸ್ಥೆಗಳಿಗೆ, ಯುವಕ-ಯುವತಿಯರಿಗೆ ಮಾಹಿತಿಯನ್ನು ತಲುಪಿಸಿ ಪುಣ್ಯದ ಸೇವೆಗೆ ಸಹಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ, ಕಾರ್ಯಕ್ರಮಕ್ಕೆ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ, ತಮ್ಮೆಲ್ಲರಿಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥೆಯ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪರವಾಗಿ ಸ್ವಾಗತವನ್ನು ಕೋರುತ್ತಿದ್ದೇವೆ,ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. ಆರ್. ಹೆಚ್ ۔ ಯಂ۔ಚನ್ನಬಸವಸ್ವಾಮಿ۔ ಕರ್ನಾಟಕ ರಾಜ್ಯವೈಜ್ಞಾನಿಕ ಸಂಶೋದನಾ ಪರಿಷತ್، ಜಿಲ್ಲಾಧ್ಯಕರು۔ ಬಳ್ಳಾರಿ۔ ಮೊ:9481564712 ಸಂಪರ್ಕಿಸಲು ಕೋರಿದ್ದಾರೆ.
.jpg)
0 Comments