Ticker

6/recent/ticker-posts

Ad Code

Responsive Advertisement

ಕರ್ನಾಟಕ ಲೋಕಸೇವಾ ಆಯೋಗದ ಸ್ಪಷ್ಠೀಕರಣ

ಬೆಂಗಳೂರು, ಮೇ 27,  (ಕರ್ನಾಟಕ ವಾರ್ತೆ) : ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ: 13-12-2021, 14-12-2021 ಮತ್ತು 29-12-2021 ರಂದು ನಡೆಸಿದ ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ  ಅಕ್ರಮ ನಡೆದಿರುವುದಾಗಿ ಮತ್ತು 2019-20ನೇ ಸಾಲಿನ ಸಹಾಯಕರು / ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿ ಸಂಬಂಧ, ದಿನಾಂಕ:18-03-2022ರಂದು ಪ್ರಕಟಿಸಲಾದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅಫಜಲಪುರದ 200 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಗೊಂಡಿರುವದಾಗಿ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳಿಗೆ ಸಂಬಂಬಂಧಿಸಿದಂತೆ, ಆಯೋಗವು ಈಗಾಗಲೇ ಸದರಿ ಪರೀಕ್ಷೆಗಳಲ್ಲಿ ಕೈಗೊಳ್ಳಲಾದ ಕಟ್ಟು ನಿಟ್ಟಿನ ಕ್ರಮಗಳನ್ನು ವಿವರಿಸಲಾಗಿರುತ್ತದೆ ಮತ್ತು ಪರೀಕ್ಷೆಗಳನ್ನು ಯಾವುದೇ ಪರೀಕ್ಷಾ ಅಕ್ರಮಗಳನ್ನು ಎಡೆಮಾಡಿಕೊಡದೇ, ಸುಲಲಿತವಾಗಿ ನಡೆಸಲಾಗಿರುತ್ತದೆ. ಆದ್ದರಿಂದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ, ಮೇಲ್ಕಂಡ ವರದಿಗಳು ನಿರಾಧಾರವಾಗಿರುತ್ತದೆ ಎಂದು ಈಗಾಗಲೇ ದಿನಾಂಕ:11-05-2022 ಮತ್ತು 12-05-2022ರಂದು ಪ್ರಕಟಣೆಗಳನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿರುತ್ತದೆ.

ಮುಂದುವರೆದು, ದಿನಾಂಕ: 27-10-2020ರಂದು ಅಧಿಸೂಚಿಸಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರ ಹುದ್ದೆಗಳ ನೇಮಕಾತಿಗೆ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ವರದಿಗೆ ಸಂಬಂಧಿಸಿದಂತೆ, ಸದರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಹೊಂದಿದ ಶ್ರೀಮತಿ ಯಶೋಧ ಎಸ್.ಎಂ. (ನೋ .ಸಂ 2001775) ಇವರು ದಿನಾಂಕ: 21-12-2020 ರಿಂದ               28-12-2020 ರವರೆಗೆ ನಡೆದ ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯ ಕನ್ನಡ ಭಾಷಾ ವಿಷಯದ (ವಿಷಯ ಸಂಖ್ಯೆ: 392)ರ ಪ್ರಶ್ನೆ ಸಹಿತ ಉತ್ತರ ಪುಸ್ತಿಕೆಯಲ್ಲಿ ಸದರಿ ಅಭ್ಯರ್ಥಿಯು ಕಾಲ್ಪನಿಕವಾಗಿ ಬರೆಯಬೇಕಾದ ಪತ್ರಲೇಖನದಲ್ಲಿ ಅಭ್ಯರ್ಥಿತ್ವವನ್ನು ಬಹಿರಂಗಪಡಿಸಿ ಆಯೋಗದ ಪರೀಕ್ಷಾ ಸೂಚನೆಯನ್ನು ಉಲ್ಲಂಘಿಸಿದ್ದರು. ಇವರು ಆಯ್ಕೆ ಹಂತಕ್ಕೆ ಅರ್ಹರಾಗಿದ್ದರಿಂದ ಅವರನ್ನು ಹೊರತುಪಡಿಸಿ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಲು ಅವಕಾಶವಿಲ್ಲದ್ದರಿಂದ, ಇದನ್ನು ದುರಾಚಾರವೆಂದು ಪರಿಗಣಿಸಿ, ಆಯ್ಕೆ ಪಟ್ಟಿಯಲ್ಲಿ ಅವರನ್ನು ಸೇರ್ಪಡೆಗೊಳಿಸಿ, ಇವರ ಅಭ್ಯರ್ಥಿತ್ವವು ಆಯೋಗದ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂಬ ಷರತ್ತಿನ ಮೇರೆಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಸದರಿ ಪ್ರಕರಣವು ವಿಚಾರಣೆಯ ಹಂತದಲ್ಲಿದ್ದು, ಇತ್ಯರ್ಥವಾದ ನಂತರ ಅದರಂತೆ ಕ್ರಮವಹಿಸಲಾಗುವುದು ಎಂಬ ಅಂಶವನ್ನು ಅಭ್ಯರ್ಥಿಗಳ ಗಮನಕ್ಕೆ ತಂದಿದೆ.

ಆದಾಗ್ಯೂ, ಕೆಲವು ಸುದ್ದಿ ಮತ್ತು ಪ್ರಚಾರ ಮಾಧ್ಯಮಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸದೇ ಇರುವ ನೇಮಕಾತಿಗಳಾದ PSI ಮತ್ತು ಸರ್ಕಾರದ ವಿವಿಧ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಪರೀಕ್ಷಾ ಆಕ್ರಮಗಳಿಗೆ ಸಂಬಂಧಿಸಿದಂತೆ, ಆಯೋಗವನ್ನು ಟೀಕಿಸುತ್ತಿರುವುದು ಕಂಡು ಬರುತ್ತಿದ್ದು, ಇದು ಸತ್ಯಕ್ಕೆ ದೂರವಾದದ್ದು ಮತ್ತು ಸದರಿ ಪರೀಕ್ಷೆಗಳನ್ನು ಆಯೋಗದಿಂದ ನಡೆಸಲಾಗಿರುವುದಿಲ್ಲವೆಂದು ಈ ಮೂಲಕ ಅಭ್ಯರ್ಥಿಗಳ ಗಮನಕ್ಕೆ ತಂದಿದೆ.

ಉಳಿದಂತೆ, ಈಗಾಗಲೇ ಆಯೋಗದ ಅಂತರ್ಜಾಲದಲ್ಲಿ 'ಆಯೋಗದ ವಿವಿಧ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಎಚ್ಚರಿಸುವುದೇನೆಂದರೆ, ಅವರುಗಳು ಯಾವುದೇ ಮಧ್ಯವರ್ತಿಗಳು, ಏಜೆಂಟ್ಗಳು, ಆಯೋಗದ ಅಧಿಕಾರಿ/ಸಿಬ್ಬಂದಿಗಳು ಅಥವಾ ಅನ್ಯ ವ್ಯಕ್ತಿಗಳ ಮುಖಾಂತರ ವಾಮಮಾರ್ಗದಲ್ಲಿ ಹಣಕಾಸು ನೀಡುವ ಮೂಲಕ ಆಯ್ಕೆ ಹೊಂದಲು ಪ್ರಯತ್ನಿಸಿದಲ್ಲಿ ಅಂತಹ ಅಭ್ಯರ್ಥಿಗಳು, ಆಯೋಗದ ಅಧಿಕಾರಿ/ ಸಿಬ್ಬಂದಿಗಳು ಹಾಗೂ ಅನ್ಯ ವ್ಯಕ್ತಿಗಳ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಪ್ರಕಟಿಸುತ್ತಿದ್ದು, ಅದರಂತೆ, ಅಭ್ಯರ್ಥಿಗಳು ಎಚ್ಚರಿಕೆಯಿಂದ ಇರಬೇಕೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement