ಬೆಂಗಳೂರು, ಮೇ 27, (ಕರ್ನಾಟಕ ವಾರ್ತೆ) : ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಟೆಡ್, ಭಾರತದ ರೈತರ ಸಹಕಾರಿ ಸಂಸ್ಥೆ ಕಳೆದ 55 ವರ್ಷಗಳಿಂದ ಭಾರತದ ಕೃಷಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತ ಬಂದಿದೆ. ಇನ್ನೂ ಭಾರತದ ಮತ್ತು ಏಪಿಯಾ ಖಂಡದ ಅತೀ ದೊಡ್ಡ ರಸಗೊಬ್ಬರಗಳ, ಉತ್ಪಾದಕ ಸಂಸ್ಥೆಯಾಗಿರುವ ಜೊತೆಗೆ, ಸಾಮಾನ್ಯವಿಮೆ, ಗ್ರಾಮೀಣ ಮೊಬೈಲ್ ಟೆಲಿಫೋನಿ ಮತ್ತು ಕೃಷಿ-ರಾಸಾಯನಿಗಳಂತಹ ಕ್ಷೇತ್ರಗಳಲ್ಲಿ ವೈವಿಧ್ಯಗೊಳಿಸಿದೆ. ಇಂದು ಇಫ್ಕೋ ಪ್ರಪಂಚದ ಸಹಕಾರಿ ಸಂಸ್ಥೆಯಾಗಿರುವುದರ ಮೂಲಕ ಭಾರತೀಯ ರೈತರ ಮತ್ತು ಸಹಕಾರಿಗಳ ಹೆಮ್ಮೆಯಾಗಿದೆ.
ಇಫ್ಕೋ ಸಂಸ್ಥೆ ಮೊದಲ ಬಾರಿಗೆ ನ್ಯಾನೊ ತಂತ್ರಜ್ಞಾನ ಆಧಾರಿತ 'ನ್ಯಾನೊ ಯೂರಿಯ’ವನ್ನು ಪರಿಚಯಿಸಿದೆ. ವಿನೂತನ ತಂತ್ರಜ್ಞಾನವಾದ 'ನ್ಯಾನೊ ಯೂರಿಯಾ' ಕಳೆದ ವರ್ಷದಿಂದ ಕೃಷಿ ಕ್ಷೇತ್ರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ದ್ರವ ರೂಪದ ನ್ಯಾನೋ ಯೂರಿಯಾಗೆ ಭಾರತ ಮತ್ತು ವಿದೇಶಗಳಲ್ಲಿ ಪ್ರಚಂಡ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೆಚ್ಚ ಪರಿಣಾಮಕಾರಿತ್ವ, ಶೂನ್ಯ ವ್ಯರ್ಥ, ಸುಲಭ ಸಾಗಣೆ, ಸುಧಾರಿತ ದಕ್ಷತೆ ಮತ್ತು ಪರಿಸರ ಸ್ನೇಹಿ ಮುಂತಾದ ಪ್ರಯೋಜನಗಳನ್ನು ರೈತರು ಅರಿತುಕೊಂಡಿದ್ದಾರೆ. ಒಂದು ಬಾಟಲ್ ನ್ಯಾನೋ ಯೂರಿಯಾವು ಒಂದು ಚೀಲ ಯೂರಿಯಾದಷ್ಟೇ ಪರಿಣಾಮಕಾರಿಯಾಗಿದೆ. ನ್ಯಾನೋ ಯೂರಿಯಾದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡ ಸರ್ಕಾರ ಮತ್ತು ಇತರ ಸಾಂಸ್ಥಿಕ ಸಂಸ್ಥೆಗಳು ಈ ಕ್ರಾಂತಿಕಾರಿ ಉತ್ಪನ್ನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ರೈತ ಸಮುದಾಯದಲ್ಲಿ ಅದರ ಬಳಕೆಯನ್ನು ಉತ್ತೇಜಿಸುತ್ತಿವೆ.
ಈ ನಿಟ್ಟಿನಲ್ಲಿ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಕಲೋಲ್ನಲ್ಲಿ ವಿಶ್ವದ ಮೊದಲ ನ್ಯಾನೋ ಯೂರಿಯಾ ದ್ರವ ಘಟಕವನ್ನು ಲೋಕಾರ್ಪಣೆ ಮಾಡಲಿದ್ದಾರೆ . ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ನ್ಯಾನೋ ಯೂರಿಯಾ ಸ್ಥಾವರವನ್ನು ಭಾರತದ ರೈತರಿಗೆ ಸಮರ್ಪಿಸಲಿದ್ದಾರೆ ಮತ್ತು ಅವರ ಕನಸಿನ "ಆತ್ಮನಿರ್ಭರ ಭಾರತ್" ಮತ್ತು "ರೈತ ಆದಾಯವನ್ನು ದ್ವಿಗುಣಗೊಳಿಸುವಿಕೆ’’ ಗೆ ಅನುಗುಣವಾದ ಈ ನವೀನ ಉತ್ಪನ್ನದ ಬಗ್ಗೆ ದೇಶದ ರೈತರು ಮತ್ತು ಸಹಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ.
ಮಾನ್ಯ ಪ್ರಧಾನ ಮಂತ್ರಿಯವರಿಂದ ನ್ಯಾನೋ ಯೂರಿಯಾ ಸ್ಥಾವರ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವು 28-05-2022 ರಂದು ಸಂಜೆ 04.00 ಗಂಟೆಗೆ ಪ್ರಸಾರವಾಗಲಿದೆ. ಇದು ರಾಜ್ಯದಾದ್ಯಂತ ಗರಿಷ್ಠ ರೈತರು ಮತ್ತು ಸಹಕಾರಿಗಳನ್ನು ತಲುಪುತ್ತದೆ. ಇದಲ್ಲದೆ, ಮಾಧ್ಯಮದಲ್ಲಿ ಉದ್ಘಾಟನಾ ಕಾರ್ಯಕ್ರಮದ ವರದಿಯ ಖಂಡಿತವಾಗಿಯೂ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ರಾಜ್ಯದ ರೈತರಿಗೆ ಸಹಾಯ ಮಾಡುತ್ತದೆ. ಪ್ರಸಾರದ ಕಾರ್ಯಕ್ರಮ ವೀಕ್ಷಣೆಯ ಲಿಂಕ್ https://www.youtube.com/user/IFFCOindia
0 Comments