ಬೆಂಗಳೂರು, ಮೇ 25, (ಕರ್ನಾಟಕ ವಾರ್ತೆ) :ಕರ್ನಾಟಕ ಲೋಕ ಸೇವಾ ಆಯೋಗವು ದಿನಾಂಕ 19-11-2018 ಮತ್ತು 22-11-20180 ಅಧಿಸೂಚನೆಯಲ್ಲಿ ಅಧಿಸೂಚಿಸಲಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರು ಗ್ರೂಪ್ 'ಬಿ' ವೃಂದದ 100 (RPC 80+ HK 20) .ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ:02-03-2021ರಂದು ಪ್ರಕಟಿಸಲಾಗಿತ್ತು.
ಪ್ರಸ್ತುತ ಮಾನ್ಯ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ನಂ. 4242/2021 ಮತ್ತು ಇತರೆ ಪ್ರಕರಣಗಳ ದಿನಾಂಕ:04-12-2021ರಅಂತಿಮ ಆದೇಶದಂತೆ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿ ಮತ್ತು ಕಟ್ ಆಫ್ ಅಂಕಗಳ ಪಟ್ಟಿಯನ್ನು ದಿನಾಂಕ: 25-05-2022 ರಂದು ಆಯೋಗದ ಅಂತರ್ಜಾಲhttp://kpsc.kar.nic.in/lists ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments