ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಬಸವರಾಜ ಹೊರಟ್ಟಿಯವರು ಧಾರವಾಡ ನಗರದ ಬಾಸೆಲ್ ಮಿಶನ್ ಇಂಗ್ಲೀಷ ಹಾಗೂ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳೊಂದಿಗೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪ್ರೌಢಶಾಲೆ ಮದಾರಮಡ್ಡಿ, ಆರ್.ಎಲ್.ಎಸ್. ಶಿಕ್ಷಣ ಸಂಸ್ಥೆಗಳು ಹಾಗೂ ಕೆ.ಇ. ಬೋಡ್ರ‍್ಸನ ಎಲ್ಲ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಭೇಟಿಯಾಗಿ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿಯವರು ಶಿಕ್ಷಕರೊಂದಿಗೆ ಸಂವಾದ ನಡೆಸಿ ತಾವು ಶಾಸಕರಾಗಿ, ಸಚಿವರಾಗಿ ಹಾಗೂ ಸಭಾಪತಿಯಾಗಿ ಮಾಡಿದ ಸಾಧನೆಗಳನ್ನು ವಿವರಿಸಿದರು. ಸಚಿವರಾಗಿದ್ದಾಗ ೩೦ಕ್ಕೂ ಹೆಚ್ಚು ಸರಕಾರಿ ಆದೇಶಗಳನ್ನು ಹೊರಡಿಸುವದರ ಮೂಲಕ ಶಿಕ್ಷಣ ರಂಗದ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿದ್ದು, ಬಾಕಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲು ೮ನೇ ಬಾರಿಗೆ ಶಿಕ್ಷಕರ ಒತ್ತಾಸೆಯಂತೆ ಚುನಾವಣೆಗೆ ಸ್ಪರ್ಧಿಸಿದ್ದು, ಎಲ್ಲ ಶಿಕ್ಷಕರು ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವದರ ಮೂಲಕ ಆಯ್ಕೆ ಮಾಡಲು ಕೋರಿದರು.
ಈ ಸಮಾಲೋಚನಾ ಸಭೆಗಳಲ್ಲಿ ಜಿ.ಆರ್.ಭಟ್ ಶ್ಯಾಮ ಮಲ್ಲನಗೌಡರ, ಅರುಣ, ಕಲ್ಲೋಳಿಕರ, ದಯಾನಂದ ಮಾಸೂರ, ಐ.ಎಂ. ಮುಲ್ಲಾ, ಎಸ್.ಆರ್. ಮುರಕಟ್ಟಿ, ವರ್ಧಮಾನ ಕುರಕುರಿ, ಮರ್ಜೆಡಿ, ಸಿಂಧೂ ಶಿರೂರ, ಮೀನಾಕ್ಷಿ ಹಿರೇಮಠ, ಸುಜಾತಾ ಬಾಸೂರ, ಎನ್, ಗೋವಿಂದರಡ್ಡಿ, ಎನ್.ಎನ್. ಸವಣೂರ, ಮಹೇಶ ಕುರುಬರ ಹಾಗೂ ಇತರೆ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು. ಬಸವರಾಜ ಹೊರಟ್ಟಿಯವರಿಗೆ ಈ ಸಂದರ್ಭದಲ್ಲಿ ಅಪೂರ್ವ ಬೆಂಬಲ ವ್ಯಕ್ತವಾಯಿತು.
0 Comments