Ticker

6/recent/ticker-posts

Ad Code

Responsive Advertisement

ಸುಲ್ತಾನಾಪುರ ಗ್ರಾಮ ಸ್ಥಳಾಂತರ- ಗ್ರಾಮವನ್ನು ಪರಿವೀಕ್ಷಣೆ ಮಾಡಿದ ಎಮ್ಮೆಲ್ಸಿ ವೈ.ಎಂ.ಸತೀಶ್

ಬಳ್ಳಾರಿ ಮೇ 09 : ರಸ್ತೆ,ಸಾರಿಗೆ,ವಿದ್ಯುತ್,ಕುಡಿಯುವ ನೀರು, ಆಸ್ಪತ್ರೆ,ಶಾಲೆ-ಕಾಲೇಜು, ಮಾರುಕಟ್ಟೆ,ರೈಲು ಮಾರ್ಗ ಸೇರಿದಂತೆ ವಾಯುಮಾರ್ಗಕ್ಕೂ ಬಹಳ ಅನುಕೂಲ ಇರುವ ಕುರೆಕುಪ್ಪ ಗ್ರಾಮದ ಬಳಿ ಸುಲ್ತಾನಾಪುರ ಗ್ರಾಮ ಸ್ಥಳಾಂತರಕ್ಕೆ ಸ್ಥಳ ಗುರುತಿಸಲು ಸಹಾಯಕ ಆಯುಕ್ತರಿಗೆ ವೈ. ಎಂ. ಸತೀಶ್ ಸೂಚಿಸಿದ್ದಾರೆ. 

ಅವರು ಸುಲ್ತಾನಾಪುರ ಗ್ರಾಮ ಸ್ಥಳಾಂತರ ವಿಚಾರವಾಗಿ ಗ್ರಾಮವನ್ನು ಪರಿವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಸ್ಥಳಾಂತರ ವಿಚಾರಕ್ಕೆ ಸಂಬಂದಿಸಿದಂತೆ ಗ್ರಾಮದ ಜನರ ಜೊತೆ ಮಾತನಾಡಿದ ಅವರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಗ್ರಾಮ ಸ್ಥಳಾಂತರವೊಂದೇ ಪರಿಹಾರವಾಗಿದ್ದು, ಈ ಬಗ್ಗೆ ಸರ್ಕಾರ,ಕಂಪೆನಿಗಳು ನಿಮಗೆ ಬೇಕಾದ ಎಲ್ಲ ರೀತಿಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧವಾಗಿವೆ. ತಾವೆಲ್ಲರೂ ಒಟ್ಟಾಗಿ ಸರ್ಕಾರದ ಸರ್ವೆಕಾರ್ಯ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಗರಿಷ್ಠ ಸಹಕಾರ ಮಾಡಿ ಈ ಯೋಜನೆಯ ಗರಿಷ್ಠ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಅದಕ್ಕೆಬ ಗ್ರಾಮಸ್ಥರು ನಮನ್ನು ತುಮಟಿ ಹಾಗೂ ಕುಡತಿನಿಗೆ ಸ್ಥಳಾಂತರಿಸುವುದಾದರೆ ಬೇಡವೇ-ಬೇಡ, ಕುರೆಕುಪ್ಪ ಪುರಸಭೆ ವ್ಯಾಪ್ತಿಯ ಹೊಸಪೇಟೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಸ್ಥಳಾಂತರಿಸುವುದು ಸೂಕ್ತ ಮತ್ತು ಗ್ರಾಮದ ಮನೆಗಳಿಗೆ ಹಾಗೂ ರೈತರ ಜಮೀನಿಗೆ ಗರಿಷ್ಠ ಬೆಲೆ ಕೊಡಿಸಬೇಕೆಂಬ ಮನವಿಯನ್ನು ಮಾಡಿದರು. ತಕ್ಷಣ ಸತೀಶ್ ಅವರು ಕೂಡಲೇ ಸಹಾಯಕ ಆಯುಕ್ತರಿಗೆವ ಕರೆ ಮಾಡಿ ಗ್ರಾಮಸ್ಥರ ಬೇಡಿಕೆಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು.ಗ್ರಾಮದ ಮನೆಗಳಿಗೆ ಹಾಗೂ ರೈತರ ಜಮೀನುಗಳಿಗೆ ಸರ್ಕಾರ ಮತ್ತು ಕೈಗಾರಿಕೆಗಳಿಂದ ಗರಿಷ್ಟ ಬೆಲೆ ಕೊಡಿಸುವುದಾಗಿ ಭರವಸೆ ನೀಡಿದರು. ಬಳಿಕ ಗ್ರಾಮದ ಮುಖ್ಯರಸ್ತೆಮೂಲಕ ಬಸ್ ನಿಲ್ದಾಣ,ಕುಡಿಯುವ ನೀರಿನ ಘಟಕ ವೀಕ್ಷಣೆ ಮಾಡಿದರು.


 

Post a Comment

0 Comments

Ad Code

Responsive Advertisement