ಬೆಂಗಳೂರು : ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ (ರಿ)ನಾಳೆ 27-05-2022 ರಂದು,ನಗರದಲ್ಲಿ ಹೆಸರಾಂತ ಸಾಹಿತಿ ,ನಾಟಕಕಾರರಾದ ಬಿ.ಪುಟ್ಟಸ್ವಾಮಯ್ಯ ಅವರ 125ನೇ ಜನ್ಮಜಯಂತಿ ಕಾರ್ಯಕ್ರಮವನ್ನು ಆಯೋಜಿಸಿದೆ.ಶೇಷಾದ್ರಿಪುರ ಶಿಕ್ಷಣ ದತ್ತಿ ಸಭಾಂಗಣದಲ್ಲಿ ಸಂಜೆ 5:15ಕ್ಕೆ,ನಡೆಯಲಿರುವ ರಂಗಸಂಭ್ರಮ ಕಾರ್ಯಕ್ರಮವನ್ನು ಡಾ.ವೈ.ಎ. ನಾರಾಯಣಸ್ವಾಮಿ, ಮುಖ್ಯಸಚೇತಕರು, ಕರ್ನಾಟಕ ವಿಧಾನಪರಿಷತ್, ಉಧ್ಘಾಟಿಸಲಿದ್ದು ಸಭೆಯ ಅಧ್ಯಕ್ಷತೆಯನ್ನು ನಾಡೋಜ ಡಾ.ವೂಡೇ ಪಿ.ಕೃಷ್ಣ ವಹಿಸಲಿದ್ದಾರೆ.ಬಿ.ಪುಟ್ಟಸ್ವಾಮಯ್ಯ ಅವರ ಸಾಹಿತ್ಯ ಕುರಿತು ಡಾ.ಬಿ.ನಂಜುಂಡಸ್ವಾಮಿ ,ತುಮಕೂರು ,ಮಾತನಾಡಲಿದ್ದಾರೆ.ಮಾಜಿ ಸಚಿವರಾದ ಲೀಲಾದೇವಿ ಪ್ರಸಾದ್,ಪತ್ರಕರ್ತರಾದ ರು.ಬಸಪ್ಪ,ರಂಗಾಯಣ ಕಲ್ಬುರ್ಗಿ ಅಧ್ಯಕ್ಷರಾದ ಪ್ರಭಾಕರ ಜೋಷಿ,ರಂಗಭೂಮಿ ಕಲಾವಿದರಾದ ರಾಮಚಂದ್ರರಾವ್.ಸಿ.ಎ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಜುಳಮೋಹನ್,ಕಮಲ,ವಿಜಯಲಕ್ಷ್ಮೀ,ವೈಶಾಲಿ ಅವರಿಂದ ಸಾಂಸ್ಕತಿಕ ಗೀತ ಗಾಯನ ,ಇತಿಹಾಸ ರಂಗಪ್ರತಿಷ್ಠಾನ ,ಪುಟಬಂಗಾರ ನಾಟಕ ಪ್ರದರ್ಶಿಸಲಿದೆ ಎಂದು ಪಂಪ ಸಾಂಸ್ಕೃತಿಕ ಸಾಮಾಜಿಕ ಕೇಂದ್ರ(ರಿ)ದ ಕಾರ್ಯದರ್ಶಿ ಆರ್.ವೆಂಕಟರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments