Ticker

6/recent/ticker-posts

Ad Code

Responsive Advertisement

ಶಾಸಕ ನಾಗೇಂದ್ರನ ಅಪ್ತ ಬಿ.ಆರ್.ಎಲ್ ಸೀನ ಬಂಧನ!!

ಬಳ್ಳಾರಿ ಮೇ 04.  ಬಳ್ಳಾರಿ ಮಹಾನಗರ ಪಾಲಿಕೆಯ 14 ನೇ ವಾರ್ಡಿನ ಸದಸ್ಯರು ಆಗಿರುವ ರತ್ನಮ್ಮನವರ ಗಂಡ ಆಗಿರುವ ಬಿಆರ್‍ಎಲ್ ಸೀನ ಅವರನ್ನು ಸೋಮವಾರ ಬಳ್ಳಾರಿ ಪೋಲಿಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಇವರು ಬಳ್ಳಾರಿ ಗ್ರಾಮೀಣ ಶಾಸಕ ಆಗಿರುವ  ನಾಗೇಂದ್ರ ಅವರ ಪರಮ ಆಪ್ತ ಎಂದು ಗುರ್ತಿಸಿ ಕೊಂಡಿದ್ದರು.  

ಸಾಮಾನ್ಯವಾಗಿ ಬಳ್ಳಾರಿ ಜಿಲ್ಲೆಯ ಜನರು ಸೀನ ಇವರನ್ನು ಒರಿಜನಲ್ ಶಾಸಕರು ಅಂದುಕೊಂಡಿದ್ದರು. ಶಾಸಕರನ್ನು ಮೀರಿಸುವ ಸ್ಟೈಲ್‍ನಲ್ಲಿ ಕಾಣಿಸಿಕೊಳ್ಳುತಿದ್ದರು. ಈಹಿಂದೆ  ಬಿಜೆಪಿಯಲ್ಲಿ ಕೂಡಾ ಗುರ್ತಿಸಿ ಕೊಂಡಿದ್ದರು. 

ಆದರೆ ಇಂದು ಅವರು ಜೈಲು ಪಾಲು ಆಗಿದ್ದಾರೆ. ಯಾಕೆ ಜೈಲು ಪಾಲಾಗಿದ್ದಾರೆ?? ಕಾಂಗ್ರೆಸ್ ಶಾಸಕ ಮೌನದ ಮರ್ಮ ಏನು?? ಸೀನ ಅವರು 3/4/2022 ರಂದು ನಗರದ ಅಗಡಿ ಮಾರೆಪ್ಪ ಕಾಂಪೌಂಡ್ ಯಲ್ಲಿರುವ ಶೆಟ್ಟಿ ಜನಂಗದ ವೆಂಕಟೇಶ ಎನ್ನುವ ಅವರನ್ನು ಹಗಲು ಹೊತ್ತಿನಲ್ಲಿ ಕಿಡ್ನಪ್ ಮಾಡಿಕೊಂಡು ಹೋಗಿ ಗುಗ್ಗರಹಟ್ಟಿ  ಪ್ರದೇಶದಲ್ಲಿ ಇರುವ 3000 ಚದುರ ಅಡಿ ಸ್ಥಳವನ್ನು ಕಬಳಿಸಲು ಪ್ಲಾನ್ ಮಾಡಿ ಕೊಂಡು 25-30 ಮಂದಿ ಗುಂಪು ಕಟ್ಟಿ ಕೊಂಡು ಮನೆ ಮುಂದೆ ಹೊಗುವ ಅವರನ್ನು ತನ್ನ ಫಾರ್ಚುನರ್ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿ ಕೊಲೆ ಬೆದರಿಕೆ ಹಾಕಿ ಹೊಡೆದು, ಖಾಲಿ ಬಾಂಡ್ ಮೇಲೆ ಸಹಿ ಮಾಡಿಸಿಕೊಂಡು ಬುದುವಾರ ರಿಜಿಸ್ಟರ್ ಮಾಡಿಕೊಡಬೇಕು ಎಂದು ಒತ್ತಾಯ ಪೂರ್ವಕವಾಗಿ ಬರಿಸಿ ಕೊಂಡಿದ್ದಾರೆ. ಗುಗ್ಗರಹಟ್ಟಿಯಲ್ಲಿ ಇರುವ ಸ್ಥಳ ವೆಂಕಟೇಶ ಶೆಟ್ಟಿ ಅಕ್ಕನ ಮಗ ಗೋಪಾಲ್ ಎನ್ನುವ ಅವರಿಗೆ 2019 ರಲ್ಲಿ ಕೊಡಿಸಿದ್ದಾರೆ,ಅದರಲ್ಲಿ ಷೆಡ್ಡ್ ಇತ್ತು ಅದನ್ನು ಸಯ್ಯದ್ ಉಸ್ಮಾನ್ ಅವರು ವೇಂಕಟೇಶ  ಅವರಗೆ ಬಾಡಿಗೆಗೆ ನೀಡಲಾಗಿತ್ತು.  ವರ್ಷಗಳು ಕಳೆದರೂ ಬಾಡಿಗೆ ಕೊಟ್ಟಿಲ್ಲ. ಅವರು ಸೀನ ಅವರ ಜೊತೆ ಕೈ ಜೋಡಿಸಿ ಕೊನೆಗೆ ಶೆಟ್ಟಿಯವರುಗೆ ಟೋಪಿ ಹಾಕುವ ಪ್ಲಾನ್ ಮಾಡಿಕೊಂಡು, ಇಂತಹ ಘಟನೆಯಲ್ಲಿ ಸಿಕ್ಕಿ ಹಾಕಿ ಕೊಂಡಿದ್ದಾರೆ. ಅಪಹರಣದಿಂದ ತಪ್ಪಿಸಿಕೊಂಡು ಭಯ ಪಟ್ಟು ಬೆಂಗಳೂರುಗೆ ಹೊಡಿ ಹೋಗಿದ್ದಾರೆ ಶೆಟ್ಟಿಯವರು. 

ಅಲ್ಲಿ ಶೆಟ್ಟಿಯವರ ಸಂಬಂದಿಗಳು ಡಿಸಿಪಿ ಕಚೇರಿಯಲ್ಲಿ ಕೆಲಸವನ್ನು ಮಾಡುತ್ತಿರುವ ಅವರನ್ನು ಸಂಪರ್ಕ ಮಾಡಿ ಡಿಸಿಪಿ ಅವರಿಂದ ಬಳ್ಳಾರಿ ಎಸ್ಪಿ ಅವರಿಗೆ  ಮಾಹಿತಿಯನ್ನು ತಿಳಿಸಿದ್ದಾರೆ. ಆದೇಶ ಬಂದ ತಕ್ಷಣವೇ ಬಳ್ಳಾರಿ ಸಿಂಗಮ್ ಸೈದುಲ್ ಅಡಾವತ್  ಬಿಆರ್‍ಎಲ್ ಸೀನ ಅವರನ್ನು ಬಂಧಿಸಿ ಇದರಲ್ಲಿ ಬಾಗಿಯಾಗಿರುವ ಎಲ್ಲರ ಮೇಲೆ ಪ್ರಕರಣ ದಾಖಲೆ ಮಾಡಿ ಜೈಲಿಗೆ ಕಳಿಸಿದ್ದಾರೆ. 

ಎಸ್ಪಿ ಅವರು ಖಡಕ್ ಆಗಿ ಕೆಲ ರಾಜಕಾರಣಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಯಾರಾದರೂ ಇದರಲ್ಲಿ ಎಂಟ್ರಿ ಆದರೆ ತಮ್ಮ ಗೌರವ ಹಾಳು ಆಗುತ್ತದ್ತೆಂದು ತಿಳಿಸಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ. ಬಿ ಆರ್ ಎಲ್ ಸೀನ ಪ್ರಕರಣದಲ್ಲಿ ಇನ್ನೂ ಕೆಲ ರಾಜಕಾರಣಿಗಳ ಕೈವಾಡ ಇದೆ ಎನ್ನುವ ಅನುಮಾನಗಳು  ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಾ ಇದೇ. ಇನ್ನು ಮುಂದೆ ಏನಾಗುತ್ತದೆಯೋ ಕಾದು ನೋಡಬೇಕಿದೆ ಅಂತಿದ್ದಾರೆ ಜನರು.


 

Post a Comment

0 Comments

Ad Code

Responsive Advertisement