Ticker

6/recent/ticker-posts

Ad Code

Responsive Advertisement

ಸಹಕಾರನಗರದ ಉತ್ತರಾದಿ ಮಠದಲ್ಲಿ ಯಶಸ್ವೀ ಧಾರ್ಮಿಕ ಶಿಕ್ಷಣ ಶಿಬಿರ

ಹರೇಶ್ರೀನಿವಾಸ...

ಉತ್ತರಾದಿ ಮಠಾಧೀಶರಾದ ಪರಮಪೂಜ್ಯ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ಮೊದಲನೇ ಬಾರಿ ಬೆಂಗಳೂರಿನ ಸಹಕಾರನಗರದ ಉತ್ತರಾದಿ ಮಠದಲ್ಲಿ ಇದೇ ಮೇ 1, 2022ರ ಭಾನುವಾರದಿಂದ ಮೇ 8ರವರೆಗೂ ಬಾಲಕರು, ಹಾಗೂ ಬಾಲಕಿಯರಿಗಾಗಿ ಧಾರ್ಮಿಕ ಶಿಕ್ಷಣ ಶಿಬಿರ ಏರ್ಪಡಿಸಲಾಗಿತ್ತು. 

ಧಾರ್ಮಿಕ ಶಿಕ್ಷಣ ಶಿಬಿರದಲ್ಲಿ ಸುಮಾರು 40 ಬಾಲಕರು ಹಾಗೂ ಬಾಲಕಿಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಚಿಣ್ಣರಿಗೆ , ವಿದ್ಯಾರ್ಥಿನಿಯರಿಗೆ ಸ್ತೋತ್ರ, ಮಂತ್ರ ಹಾಗೂ ದೇವರ ನಾಮ, ರಂಗೋಲಿ, ಇತ್ಯಾದಿ ವಿಷಯಗಳ ಕಲಿಕೆಗೆ ಒತ್ತು ಕೊಡುವುದರ ಆಯೋಜಿಸಿದ್ದರು. ಬಾಲ ಪ್ರತಿಭೆಗಳು ಚಿಣ್ಣರು ಈ ಸಂದರ್ಭದಲ್ಲಿ ತಮ್ಮ ಪ್ರತಿಭೆಯೊಂದಿಗೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣರಾದರು.


ಈ ಶಿಬಿರದಲ್ಲಿ ಮಠದ ಅನೇಕ ಸ್ವಯಂ ಸೇವಕರು ತಮ್ಮ ತಮ್ಮ ಸೇವೆಯನ್ನು ಸಲ್ಲಿಸಿದ್ದು ಹೆಮ್ಮೆಯ ವಿಷಯ. 

ಧಾರ್ಮಿಕ ಶಿಕ್ಷಣ ಶಿಬಿರದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಾಠ ವನ್ನು ಹೇಳಿಕೊಟ್ಟವರು ಶ್ರೀಯುತ ಪ್ರಸನ್ನ ಆಚಾರ್ ಅವರು. 

ಈ ಶಿಬಿರವನ್ನು ಆಯೋಜಿಸಿದ ಸಹಕಾರನಗರ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪ್ರಸನ್ನ ಆಚಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಒಟ್ಟಾರೆ ಕಾರ್ಯಕ್ರಮವು ಮನರಂಜನೆಯೊಂದಿಗೆ ಯಶಸ್ವಿಯಾಗಿ ಜರುಗಿತು. ವ್ಯವಸ್ಥಾಪಕ ಪ್ರಸನ್ನ ಆಚಾರ್ ಅವರು ಈ ಸಂದರ್ಭದಲ್ಲಿ ಚಿಣ್ಣರಿಗೆ ಆಶೀರ್ವಚನ ಮಾಡಿ ಹಾರೈಸಿದರು.















Post a Comment

0 Comments

Ad Code

Responsive Advertisement